ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿದೆ. ಅದಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮತ್ತು ಮಣಿಪುರ ಸಿಎಂ ಭಾನುವಾರ ಮಧ್ಯಾಹ್ನ ಭೇಟಿಯಾಗಿದ್ದಾರೆ.
ಮಣಿಪುರ ಗವರ್ನರ್ ಅನುಸೂಯಾ ಉಯ್ಕೆ ಅವರನ್ನು ಸ್ಥಾನದಿಂದ ವಜಾಗೊಳಿಸಿ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಸಭೆಯಲ್ಲಿ ಮೋದಿ ಮತ್ತು ಬಿರೇನ್ ಭೇಟಿಯಾಗಿದ್ದಾರೆ.
#WATCH | Prime Minister Narendra Modi chairs a meeting of BJP CMs and Deputy CMs at BJP headquarters in Delhi
— ANI (@ANI) July 28, 2024
Union Minister and BJP chief JP Nadda, Union HM Amit Shah, Defence Minister Rajnath Singh also present. pic.twitter.com/FDsAXAdJ0i
ಇನ್ನು ಇಬ್ಬರೂ ಕೂಡಾ ಪ್ರತ್ಯೇಕವಾಗಿ ಸಭೆಯನ್ನು ನಡೆಸಿದ್ದಾರೆ ಎಂದು ಕೂಡಾ ಹೇಳಲಾಗಿದೆ. ಆದರೆ ಬಿರೇನ್ ಸಿಂಗ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿರುವ ಚಿತ್ರ ಏಕಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಶಂಕಿತ ಬಂಡುಕೋರರ ಹೊಂಚುದಾಳಿ; ಸಿಆರ್‌ಪಿಎಫ್ ಯೋಧ ಹುತಾತ್ಮ
“ಇಂದು ಬೆಳಿಗ್ಗೆ, ಮಣಿಪುರದ ವಿವಾದಿತ ಮುಖ್ಯಮಂತ್ರಿಯು ಜೈವಿಕವಲ್ಲದ ಪ್ರಧಾನ ಮಂತ್ರಿಯೊಂದಿಗೆ ಮುಚ್ಚಿದ ಬಾಗಿಲಿನ ಒಳಗೆ ಸಣ್ಣ ಸಭೆಯನ್ನು ನಡೆಸಿದರು. ಇದರಲ್ಲಿ ಸ್ವಯಂಘೋಷಿತ ಚಾಣಕ್ಯ ಮತ್ತು ರಕ್ಷಣಾ ಸಚಿವರು ಸಹ ಉಪಸ್ಥಿತರಿದ್ದರು ಎಂಬ ಸುದ್ದಿ ಹೊರಬಿದ್ದಿದೆ. ಸಾಮಾನ್ಯವಾಗಿ ಇಂತಹ ಸಭೆಗಳು ನಡೆದಾಗ ಎಕ್ಸ್‌ನಲ್ಲಿ ಚಿತ್ರಗಳನ್ನು ಹಾಕಲಾಗುತ್ತದೆ. ಆದರೆ ನರೇಂದ್ರ ಮೋದಿ ಅಥವಾ ಎನ್ ಬಿರೇನ್ ಸಿಂಗ್ ಹಾಗೆ ಮಾಡಿಲ್ಲ. ಅಂತಹ ನಿರಾಸಕ್ತಿ ಏಕೆ? ಅಥವಾ ಸಭೆ ನಿಜವಾಗಿ ನಡೆಯಲಿಲ್ಲವೇ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರಶ್ನಿಸಿದರು.
आज सुबह ख़बर सामने आई है कि विवादों में घिरे मणिपुर के मुख्यमंत्री ने नॉन-बायोलॉजिकल प्रधानमंत्री के साथ बंद कमरे में छोटी सी मीटिंग की है, जिसमें स्वघोषित चाणक्य और रक्षा मंत्री भी मौजूद थे।
— Jairam Ramesh (@Jairam_Ramesh) July 29, 2024
आम तौर पर जब ऐसी मीटिंग्स होती हैं तो एक्स पर तस्वीरें पोस्ट की जाती हैं। लेकिन न तो…
2023ರ ಮೇ ತಿಂಗಳಲ್ಲಿ ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿದ್ದು, 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಪ್ರಧಾನಿ ಮೋದಿ ಇತ್ತೀಚೆಗೆ ವಿಪಕ್ಷಗಳ ಒತ್ತಡದಿಂದಾಗಿ ಹಿಂಸಾಚಾರದ ಬಗ್ಗೆ ಸದನದಲ್ಲಿ ಮಾತನಾಡಿದ್ದಾರೆ. ಈವರೆಗೂ ಹಿಂಸಾಚಾರಪೀಡಿತ ಮಣಿಪುರಕ್ಕೆ ಪ್ರಧಾನಿ ಭೇಟಿ ನೀಡಿಲ್ಲ. ಅಲ್ಲಿನ ಮುಖ್ಯಮಂತ್ರಿಯನ್ನು ಕೂಡಾ ಭೇಟಿಯಾಗಿರಲಿಲ್ಲ.
ಬಿರೇನ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಾತ್ರ ಭೇಟಿ ಮಾಡಿದ್ದಾರೆ. ಇತ್ತೀಚೆಗೆ ಫೆಬ್ರವರಿಯಲ್ಲಿ ಸಭೆಯನ್ನು ಕೂಡಾ ನಡೆಸಿದ್ದಾರೆ. ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರದ ಬಗ್ಗೆ ಮೌನ ತಳೆದಿರುವುದು ವಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.