ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಒಳಚರಂಡಿ ಕಾರ್ಮಿಕರ ನೇಮಕಾತಿ, ಚಾಲಕರ ನೇರ ನೇಮಕಾತಿ, ನೇರ ವೇತನ ಪಾವತಿ ಸೇರಿದಂತೆ ವಿವಿಧ ಕಾರ್ಮಿಕ ಕಾಯ್ದೆ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘ ಆಗ್ರಹಿಸಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಹೋರಾಟಗಾರ ವಿಜಯ ಎಂ ಗುಂಟ್ರಾಳ ಮಾತನಾಡಿ, “ಸಂಘದ ಸದಸ್ಯರಾದ 80 ಮಂದಿ ಒಳಚರಂಡಿ ಕಾರ್ಮಿಕರು ಹಾಗೂ ಚಾಲಕರು ಕಳೆದ 16 ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಒಳಚರಂಡಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುತ್ತಿಗೆದಾರರಾದ ಸಾಧಾನಾ ಎನ್ವಿರೊ ಎಂಜನಿಯರ್ಸ್, ಸಾಯಿ ಇನ್‍ಫ್ರಾಸ್ಟ್ರಕ್ಚರ್ ಸರ್ವಿಸ್‌ನವರು ಕಾರ್ಮಿಕ ಕಾಯ್ದೆ ಉಲ್ಲಂಘಿಸಿದ್ದು, ಕೆಲಸದ ಅವಧಿ 8 ಗಂಟೆ ಇದ್ದುರೂ ಸಹ ಕಾರ್ಮಿಕರನ್ನು 24 ಗಂಟೆ ದುಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಅವರು ಕರೆದಾಗ ಕೆಲಸ ನಿರ್ವಹಿಸಬೇಕಾಗಿದೆ. ಹೀಗಾಗಿ ಕೆಲಸದ ಅವಧಿಯನ್ನು 8 ಗಂಟೆ ನಿಗದಿಪಡಿಸಬೇಕು” ಎಂದು ಒತ್ತಾಯಿಸಿದರು.
“ವಾರದಲ್ಲಿ ಒಂದುದಿನ ಪೂರ್ತಿ ರಜೆ ಸೌಲಭ್ಯ ನೀಡಬೇಕು. ಕಾರ್ಮಿಕರ ಹಾಗೂ ಚಾಲಕರ ಆರೋಗ್ಯದ ಹಿತದೃಷ್ಟಿಯಿಂದ ಮೆಡಿಕಲ್ ಮಾಸ್ಟರ್ ಚೆಕಪ್ ಮಾಡಿಸಬೇಕು. ನಿಗದಿಪಡಿಸಿದ ಕೆಲಸವನ್ನು ಹೊರತುಪಡಿಸಿ ಇತರೆ ಕೆಲಸಗಳನ್ನು ಮಾಡಿಸಬಾರದು. ವಿವಿಧ ಕಾರ್ಮಿಕ ಕಾಯ್ದೆ ಸೌಲಭ್ಯಗಳಾದ ನಿಗದಿತ ಸಮಯಕ್ಕೆ ಮಾಸಿಕ ವೇತನ ಪಾವತಿಸುವುದು, ಗುರುತಿನ ಚೀಟಿ, ಸರ್ವಿಸ್ ಲೇಟರ್, ವೇತನ ಚೀಟಿ, ಪಿಎಫ್, ಯುಎಎನ್ ಕಾರ್ಡ್, ಇಎಸ್‌ಐ ಸ್ಮಾರ್ಟ್ ಕಾರ್ಡ್/ಟಿಐಸಿ ಪ್ರಮಾಣ ಪತ್ರ, ರಜೆ ಸಹಿತ ವೇತನ ರಾಷ್ಟ್ರೀಯ ಹಬ್ಬಗಳ ದುಪ್ಪಟ್ಟು ವೇತನ, ಬೋನಸ್, ಗ್ರಾಜುವಿಟಿ, ಸರ್ವಿಸ್ ವೇಟೇಜ್ ಸೇರಿದಂತೆ ಇನ್ನೂ ಮುಂತಾದ ಸೌಲಭ್ಯಗಳನ್ನು 2008 ರಿಂದ 2024ರ ವರೆಗಿನ ವ್ಯತ್ಯಾಸದ ಬಾಕಿ ಮೊತ್ತಗಳನ್ನು ಕಾರ್ಮಿಕರಿಗೆ ದೊರಕಿಸಿಕೊಡಬೇಕು. ಬೆಳಗಿನ ಉಪಹಾರ, ಸುರಕ್ಷತೆ ಸಾಧನಗಳು, ಕೆಲಸದ ಪರಿಕರಗಳನ್ನು ಪೂರೈಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಧಾರಾಕಾರ ಮಳೆ; ಕುಂಬರಡಿ-ಹಾರ್ಲೆ ಎಸ್ಟೇಟ್ ನಡುವೆ ಭೂಕುಸಿತ
“ಒಳಚರಂಡಿ ಕಾರ್ಮಿಕರನ್ನು ಖಾಯಂಗೊಳಿಸುವ, ನೇರವೇತನ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಬಗ್ಗೆ ಕಾರ್ಮಿಕರ ಸೇವಾ ಜೇಷ್ಠತೆ ಅನ್ವಯ ಪಟ್ಟಿಯನ್ನು ಸಿದ್ದಪಡಿಸಿ ಸರ್ಕಾರದ ಆದೇಶದ ಅನುಗುಣವಾಗಿ ನೇರನೇಮಕಾತಿ ನೇರವೇತನ ಪಾವತಿಸಬೇಕು” ಎಂದು ಆಗ್ರಹಿಸಿದರು.