ಟೀಮ್ ಇಂಡಿಯಾ ಶ್ರೀಲಂಕಾ ಎದುರು ಮೂರನೇ ಹಾಗೂ ಟಿ20 ಸರಣಿಯ ಕೊನೆಯ ಪಂದ್ಯವನ್ನು ಸೂಪರ್ ಓವರ್ ಮೂಲಕ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ವಾಷಿಂಗ್ಟನ್ ಸುಂದರ್ ಅದ್ಭುತ ಆಲ್‌ರೌಂಡರ್ ಪ್ರದರ್ಶನದಿಂದ ಭಾರತ ತಂಡವು ರೋಚಕ ಗೆಲುವು ಸಾಧಿಸಿದ್ದು ಪಂದ್ಯದಲ್ಲಿ ಹಾಗೂ ಸೂಪರ್ ಓವರ್‌ನಲ್ಲಿ ಮಿಂಚಿದ ವಾಷಿಂಗ್ಟನ್ ಸುಂದರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮತ್ತು ಪೂರ್ಣಾವಧಿ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರು ಆಡಿದ ಮೊದಲ ಸರಣಿ ಇದಾಗಿದೆ.
ಇದನ್ನು ಓದಿದ್ದೀರಾ? ಶ್ರೀಲಂಕಾ ವಿರುದ್ಧ ಟಿ20 ಸರಣಿ: ಭಾರತಕ್ಕೆ 2-0 ಜಯ
ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 137 ರನ್‌ಗಳ ಸಾಧಾರಣ ಮೊತ್ತವನ್ನು ಪೇರಿಸಿತು. ಟೀಮ್ ಇಂಡಿಯಾದ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 137 ರನ್ ಗುರಿ ತಲುಪಿತು. ಇದರಿಂದಾಗಿ ಸ್ಕೋರ್ ಸಮಬಲವಾಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರಿಲಂಕಾ ತಂಡವು 2 ರನ್ ಮಾತ್ರ ಗಳಿಸಿತು. ಟೀಮ್ ಇಂಡಿಯಾ ಪರ ಕ್ರಿಕೆಟ್ ಮೈದಾನಕ್ಕಿಳಿದ ಸೂರ್ಯಕುಮಾರ್ ಒಂದು ಬೌಂಡರಿ ಹೊಡೆದು ಜಯಭೇರಿ ಬಾರಿಸಿದರು.
𝙒𝙄𝙉𝙉𝙀𝙍𝙎!
— BCCI (@BCCI) July 30, 2024
Congratulations to the @surya_14kumar-led side on clinching the #SLvIND T20I series 3⃣-0⃣ 👏👏
Scorecard ▶️ https://t.co/UYBWDRh1op#TeamIndia pic.twitter.com/h8mzFGpxf3