ಶಿವಾಜಿನಗರ ಕ್ಷೇತ್ರ | ಕಾಂಗ್ರೆಸ್‌ ಭದ್ರಕೋಟೆ ಭೇದಿಸುವುದೇ ಬಿಜೆಪಿ

Date:

Advertisements
ಶಿವಾಜಿನಗರ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಂತಿದೆ. ಕಳೆದ ನಾಲ್ಕು ಚುನಾವಣೆಗಳಲ್ಲೂ ಕ್ಷೇತ್ರವನ್ನು ಕಾಂಗ್ರೆಸ್‌ ಯಾರಿಗೂ ಬಿಟ್ಟುಕೊಟ್ಟಿಲ್ಲ. ಕ್ಷೇತ್ರದ ಚುನಾವಣಾ ಕಣದಲ್ಲಿ ಜೆಡಿಎಸ್‌ ಇಲ್ಲವಾಗಿದ್ದು, ಕ್ಷೇತ್ರವನ್ನು ಬಿಜೆಪಿ ಗೆಲ್ಲಲೇಬೇಕೆಂದು ಹವಣಿಸುತ್ತಿದೆ. ಈ ನಡುವೆ, ಎಎಪಿ ಕೂಡ ಪೈಪೋಟಿ ನೀಡಲು ಸಜ್ಜಾಗಿದೆ.

ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಶಿವಾಜಿನಗರವೂ ಒಂದು. ಇದನ್ನು ಟೋನಿ ವಾಣಿಜ್ಯ ಪ್ರದೇಶ, ಕಾಸ್ಮೋಪಾಲಿಟನ್ ಪ್ರದೇಶವೆಂದೂ ಕರೆಯುತ್ತಾರೆ. ವಿವಿಧ ವರ್ಗ, ಸಮುದಾಯ ಮತ್ತು ಭಾಷೆಯನ್ನಾಡುವ ಜನರು ಒಂದೇ ಕಡೆ ವಾಸಿಸುತ್ತಿರುವ ವಿಶೇಷ ಪ್ರದೇಶವಿದು. 2008ರಲ್ಲಿ ರಚನೆಯಾದ ಶಿವಾಜಿನಗರ ವಿಧಾನಸಭಾ ಕ್ಷೇತ್ರವು, 2019ರ ಉಪಚುನಾವಣೆ ಸೇರಿದಂತೆ ನಾಲ್ಕು ಚುನಾವಣೆಗಳನ್ನು ಕಂಡಿದೆ. ನಾಲ್ಕೂ ಚುನಾವಣೆಗಳಲ್ಲೂ ಗೆದ್ದಿರುವ ಕಾಂಗ್ರೆಸ್‌, ಕ್ಷೇತ್ರವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿದೆ.

ಈ ಹಿಂದೆ ಶಿವಾಜಿನಗರ ಜಯಮಹಲ್ ಕ್ಷೇತ್ರದೊಂದಿಗಿತ್ತು. ಅಂದಿನಿಂದ ಇಂದಿನವರೆಗೆ (1967 ಮತ್ತು 2019ರ ನಡುವೆ) ನಡೆದ 13 ಚುನಾವಣೆಗಳಲ್ಲಿ ಏಳು ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಶಿವಾಜಿನಗರದಲ್ಲಿ ಜನತಾ ಪರಿವಾರ ಮತ್ತು ಬಿಜೆಪಿಯೂ ಗೆಲುವು ಸಾಧಿಸಿವೆ. ಕಾಂಗ್ರೆಸ್‌ನ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಅವರು ಇತ್ತೀಚೆಗೆ ಶಿವಾಜಿನಗರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ತಡೆಯಲು ಪ್ರಯತ್ನಿಸಿದ್ದರು. ಅದಕ್ಕಾಗಿ, ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್‌ನ ವಿಭಾಗೀಯ ಪೀಠವು ಅವರ ಅರ್ಜಿಯನ್ನು ವಜಾಗೊಳಿಸಿದೆ.

ಈ ಬಾರಿ ಜೆಡಿಎಸ್‌ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿರುವುದರಿಂದ, ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಅಲ್ಲದೆ, ದೆಹಲಿ ಮಾದರಿಯನ್ನು ರಾಜ್ಯಕ್ಕೂ ತರುತ್ತೇವೆಂದು ಅಬ್ಬರದ ಪ್ರಚಾರ ನಡೆಸುತ್ತಿರುವ ಎಎಪಿ ಕೂಡ ಕ್ಷೇತ್ರದಲ್ಲಿ ಪೈಪೋಟಿ ನಡೆಸುವ ಸಾಧ್ಯತೆ ಇದೆ. ಬಿಬಿಎಂಪಿ ರಾಜಕಾರಣದಲ್ಲಿ 38 ವರ್ಷ ಅನುಭವ ಹೊಂದಿರುವ ಪ್ರಕಾಶ್ ನೆಡುಂಗಾಡಿ ಎಎಪಿಯಿಂದ ಕಣಕ್ಕಿಳಿದಿದ್ದಾರೆ.

Advertisements

“ಕ್ಷೇತ್ರವು ವಿವಿಧ ಆಯಾಮಗಳಲ್ಲಿ ಬದಲಾವಣೆಯನ್ನು ಕಂಡಿದೆ. ರಸ್ತೆಗಳು, ಪಾದಚಾರಿ ಮಾರ್ಗಗಳು, ನೀರು ಮತ್ತು ನೈರ್ಮಲ್ಯ, ಆರೋಗ್ಯ ರಕ್ಷಣೆ, ಕಸ ವಿಲೇವಾರಿ ಮತ್ತು ಇತರ ಮೂಲಸೌಕರ್ಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ನನ್ನ ಅದೃಷ್ಟವಶಾತ್, ಜನರು ಇದನ್ನು ಗಮನಿಸಿದ್ದಾರೆ. ಅವರೆಲ್ಲರೂ ನನ್ನ ಕೆಲಸಗಳ ಬಗ್ಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ” ಎಂದು ರಿಜ್ವಾನ್ ಹೇಳುತ್ತಾರೆ.

ಅಲ್ಲದೆ, ಸ್ಥಳೀಯರು ರಿಜ್ವಾನ್‌ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಐಎಂಎ ಹಗರಣದಲ್ಲಿ ಆರೋಪಿಯಾಗಿರುವ ಶಿವಾಜಿನಗರದ ಮಾಜಿ ಶಾಸಕ ರೋಷನ್ ಬೇಗ್‌ ಅವರಿಗೆ ಹೋಲಿಸಿದರೆ, ರಿಜ್ವಾನ್‌ ಜನರಿಗೆ ಹೆಚ್ಚು ಹತ್ತಿರವಾಗಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ.

ಪ್ರತಿಸ್ಪರ್ಧಿ ಬಿಜೆಪಿ ರಾಮಸ್ವಾಮಿಪಾಳ್ಯದ ಮಾಜಿ ಕಾಂಗ್ರೆಸ್‌ ಕಾರ್ಪೋರೇಟರ್‌ ಎನ್ ಚಂದ್ರ ಅವರನ್ನು ಕಣಕ್ಕಿಳಿಸಿದೆ. ಅವರು 2010ರಿಂದ 2015ರವರೆಗೆ ಕಾರ್ಪೋರೇಟರ್‌ ಆಗಿದ್ದರು. ಆ ವೇಳೆ, ತಮ್ಮ ವಾರ್ಡ್‌ನಲ್ಲಿ 700 ಮನೆಗಳನ್ನು ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಕೋಟೆಯನ್ನು ಭೇದಿಸುತ್ತೇವೆಂದು ಕೇಸರಿ ಪಕ್ಷ ಹೇಳಿಕೊಳ್ಳುತ್ತಿದೆ.

“ಈ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕಂಡುಬರುವ ಆಶ್ಚರ್ಯಗಳಲ್ಲಿ ಶಿವಾಜಿನಗರವೂ ಒಂದಾಗಿರಲಿದೆ. ಮಾಜಿ ಕಾಂಗ್ರೆಸ್ಸಿಗರಾಗಿದ್ದ ಚಂದ್ರು ಅವರು ಜನರೊಂದಿಗೆ ಅಪಾರ ಸಂಪರ್ಕವನ್ನು ಹೊಂದಿದ್ದಾರೆ. ನಮಗೆ ಹೆಚ್ಚು ನೆಲೆಯಿಲ್ಲದಿದ್ದ ರಾಮಸ್ವಾಮಿಪಾಳ್ಯದಂತಹ ವಾರ್ಡ್‌ಗಳಲ್ಲಿ ಅವರು ಜನರ ವಿಶ್ವಾಸ ಗಳಿಸಿದ್ದಾರೆ. ಅವರೊಂದಿಗೆ, ಬಿಜೆಪಿಯ ಡಬಲ್ ಇಂಜಿನ್ ಕೆಲಸಗಳೂ ಸೇರಿವೆ. ನಾವು ಗೆಲ್ಲುತ್ತೇವೆ” ಎಂದು ಬೆಂಗಳೂರು ಸೆಂಟ್ರಲ್ ಸಂಸದ ಮತ್ತು ಬಿಜೆಪಿಯ ಹಿರಿಯ ಕಾರ್ಯಾಧ್ಯಕ್ಷ ಪಿಸಿ ಮೋಹನ್ ಹೇಳಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಅಭಿವೃದ್ಧಿ ಕಾಣದ ಕೋಲಾರ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ತ್ರೀಕೋನ ಸ್ಪರ್ಧೆ ಸಾಧ್ಯತೆ

ಪ್ರಮುಖ ಉದ್ಯಮವೊಂದರ ವ್ಯವಹಾರ ನಿರ್ದೇಶಕರೂ ಆಗಿದ್ದ, ಎಎಪಿ ಅಭ್ಯರ್ಥಿ ನೆಡುಂಗಾಡಿ ಶಿವಾಜಿನಗರ ಕ್ಷೇತ್ರದಲ್ಲಿ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿದ್ದಾರೆ. “ಜನರು ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ. ಜನಪ್ರತಿನಿಧಿ ಅಪ್ರಾಮಾಣಿಕನಾಗದೆ ಉತ್ತಮ ಕೆಲಸಗಳನ್ನು ಮಾಡಿದರೆ, ಕ್ಷೇತ್ರದ ಮಧ್ಯಮ ವರ್ಗದ ಜನರು ಕೊಳಕು ರಾಜಕೀಯವನ್ನು ಕಿತ್ತೊಗೆಯುತ್ತಾರೆ. ಎಎಪಿ ಕಾರ್ಯಕ್ಷಮತೆ ಆಧಾರಿತ ಪಕ್ಷವಾಗಿದೆ. ಎಎಪಿ ಮೇಲೆ ಜನರಿಗೆ ಭರವಸೆ ಬೆಳೆಯುತ್ತಿದೆ” ಎಂದು ಅವರು ಹೇಳಿದ್ದಾರೆ.

ಕ್ಷೇತ್ರದಲ್ಲಿರುವ ಸುಮಾರು 2 ಲಕ್ಷ ಮತದಾರರಿದ್ದಾರೆ. ಅವರಲ್ಲಿ ಮುಸ್ಲಿಮರು 56,000, ತಮಿಳರು 28,000, ತೆಲುಗು ಮಾತನಾಡುವವರು 23,000, ತಿಗಳ ಮತ್ತು ಬ್ರಾಹ್ಮಣ ಸಮುದಾಯಗಳು ತಲಾ 12,000, ಒಕ್ಕಲಿಗರು 7,500 ಮತ್ತು ಲಿಂಗಾಯತರು 3,000 ಮತದಾರರಿದ್ದಾರೆ. ಬ್ರಾಹ್ಮಣ, ಒಕ್ಕಲಿಗ, ಲಿಂಗಾಯತ ಮತಗಳಲ್ಲಿ ಬಹುಸಂಖ್ಯೆಯ ಮತಗಳು ಬಿಜೆಪಿ ಪರವಾಗಿವೆ. ಅವುಗಳ ಜೊತೆಗೆ, ತಮಿಳು ಮತಗಳನ್ನು ತನ್ನತ್ತ ಸೆಳೆಯಲು ಬಿಜೆಪಿ ಹವಣಿಸುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X