ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಕೆನೆಪದರ ವಿಚಾರವಾಗಿ ಉಲ್ಲೇಖಿಸಿರುವುದನ್ನು ಖಂಡಿಸುತ್ತೇವೆ. ಸುಪ್ರೀಂ ಕೋರ್ಟಿನ ತೀರ್ಪು, ದಲಿತರಲ್ಲೇ ದನಿ ಇಲ್ಲದವರಿಗೆ ಹೊಸಬೆಳಕು ನೀಡಿದೆ ಇದನ್ನು ನಾವು ಒಮ್ಮತದಿಂದ ಸ್ವಾಗತಿಸುತ್ತಿದ್ದೇವೆ. ಈಗಾಗಲೆ ಮಾದಿಗ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಕಾಣುತ್ತಿದ್ದೇವೆ. ದಶಕಗಳಿಂದ ಹೋರಾಡುತ್ತಿರುವುದರ ಫಲವಾಗಿ ಇಂದು ಪರಿಶಿಷ್ಟ ಜಾತಿಗಳಿಗೆ ಜಯ ಸಿಕ್ಕಿದೆ. ಇದನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ಮಾದಿಗ ದಂಡೋರ ಜಿಲ್ಲಾಧ್ಯಕ್ಷ ವಿಜಿಕುಮಾರ್ ಆಗ್ರಹಿಸಿದರು.
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಿದ ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸಿ ಮುಂದಿನ ನಡೆಯ ಬಗ್ಗೆ ಹಾಸನದ ಸ್ವಾಭಿಮಾನ ಭವನದಲ್ಲಿ ಮಾದಿಗ ದಂಡೋರ ಮೀಸಲಾತಿ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಡಿಎಸ್‌ಎಸ್ ರಾಜ್ಯ ಸಂಚಾಲಕ ಸೋಮಶೇಖರ್ ಮಾತನಾಡಿ, “ಸತತ 30 ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದೇವೆ. ಈಗ ನಾವು ಹೊಲೆಮಾದಿಗ ಜಾತಿಗಳು ಒಟ್ಟಾಗಿ ಸುಪ್ರೀಂ ಕೋರ್ಟಿನ ತೀರ್ಪನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಗಟ್ಟಿಯಾದ ಹೋರಾಟ ರೂಪಿಸಬೇಕೆದೆ” ಎಂದು ಅಭಿಪ್ರಾಯಪಟ್ಟರು.
ಗಂಗಾಧರ ಬಹುಜನ್ ಮಾತನಾಡಿ, “ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಹೆಚ್ಚು ಮಾದಿಗ ಸಮಯುದಾಯದವರು ಇದ್ದಾರೆ. ಈಗಾಗಲೇ ಈ ಹೋರಾಟ ಈ ಎರಡು ರಾಜ್ಯಗಳಿಂದಲೇ ಪ್ರಾರಂಭವಾಗಿದ್ದು, ತದ ನಂತರದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಪ್ರಾರಂಭವಾಯಿತು. ಕ್ರೀಮಿಲೇಯರ್(ಕೆನೆಪದರ) ವಿಷಯವನ್ನು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿದೆ. ಇದನ್ನು ಕೂಡಲೇ ಕೈಬಿಡೇಕು. 1935ರ ಬ್ರಿಟೀಷ್ ಇಂಡಿಯನ್ ಗವರ್ನಮೆಂಟ್ ಆಕ್ಟ್ ಮೊದಲ ಬಾರಿಗೆ ಮೀಸಲಾತಿಯನ್ನು ನೀಡಿತ್ತು. ತದನಂತರದಲ್ಲಿ ಡಾ ಅಂಬೇಡ್ಕರ್ ಅವರು ಮೂಲಭೂತ ಹಕ್ಕುಗಳ ಒಳಗೆ ಮೀಸಲಾತಿಯನ್ನು ನೀಡಬೇಕೆಂದು ಪ್ರತಿಪಾದಿಸಿದ್ದರು. ಈ ಎಲ್ಲ ಐತಿಹಾಸಿಕ ವಿಷಯಗಳನ್ನು ನಾವು ಗಮನಿಸಿದರೆ ಈಗ ಪ್ರಸ್ತುತದಲ್ಲಿ ಈ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಿದ ಸುಪ್ರೀಂ ಕೋರ್ಟಿನ ತೀರ್ಪನ್ನು ನಾವು ಸ್ವಾಗತಿಸಬೇಕಿದೆ ಮತ್ತು ಇದನ್ನು ಜಾರಿಗೊಳಿಸಲು ನಾವೆಲ್ಲರೂ ಶ್ರಮಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಇಂಪ್ಯಾಕ್ಟ್ | ಭಾರತೀಪುರ ಕಿರು ಅರಣ್ಯ ಪ್ರದೇಶ ಒತ್ತುವರಿ ಆರೋಪ; ವಿಹಂಗಮ ಹಾಲಿಡೇ ರಿಟ್ರೀಟ್ ವಿರುದ್ಧ ಕ್ರಮ
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ ಟಿ ಶಿವಪ್ರಸಾದ್, ರಾಜು ಗೊರೂರು ಸತೀಶ್ ಕಡವಿನಹೊಸಳ್ಳಿ, ನಾಗರಾಜು ಕೆ ಎಂ, ಕಕ್ಕೇಹಳ್ಳಿ ರಂಗಪ್ಪ, ಹೆಚ್ ಕೆ ಸಂದೇಶ್, ಈರಪ್ಪ, ವಕೀಲರಾದ ರಾಜೇಶ್, ಕುಮಾರ್ ಗೌರವ, ಬೈರೇಶ್ ಶೇಖರಯ್ಯ, ಹರೀಶ್, ದೇವರಾಜ್ ಸೋಮಶೇಖರ್, ಅಂಬುಗ ಮಲ್ಲೇಶ್, ರಮೇಶ್ ಹಾಸನ್, ನವೀನ್ ಕುಮಾರ್ ಅರವಿಂದ ಸೇರಿದಂತೆ ಇತರು ಇದ್ದರು.