ಧಾರವಾಡ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಧಾರವಾಡ ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ವತಿಯಿಂದ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಸಿಹಿ ತಿನಿಸುಗಳು ಹಾಗೂ ಇತರೆ ವಸ್ತುಗಳ ಮಾರಾಟ ಮೇಳ ಕಾರ್ಯಕ್ರಮ ನಡೆಸಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸ್ವರೂಪಾ ಟಿ ಕೆ ಮಾತನಾಡಿ, ಸ್ವಸಹಾಯ ಸಂಘದ ಸದಸ್ಯರು ಸ್ವಉದ್ಯೋಗ ಮಾಡಿ ಆರ್ಥಿಕ ಬಲವರ್ಧನೆ ಆದಾಗ ಮಾತ್ರ ಒಕ್ಕೂಟಗಳು ಬಲವರ್ಧನೆ ಆಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಕುಂದಗೋಳ ತಾಲೂಕಿನ ಬಸವೇಶ್ವರ ಸ್ತ್ರೀ ಶಕ್ತಿ ಸಂಘದ ಸದಸ್ಯೆ ಶೇಂಗಾ ಉಂಡೆ, ಚಕ್ಕುಲಿ, ಉಳ್ಳಡಿಕೆ, ಅಳ್ನಾವರ ತಾಲೂಕಿನ ಕುಂಬಾರಕೊಪ್ಪ ಸಂಘದ ಸದಸ್ಯರು ವಿವಿಧ ರೀತಿಯ ಬಳೆಗಳು, ಸಾವಯವ ಕುಸುಬಿ ಎಣ್ಣೆ , ನವಲಗುಂದ ತಾಲೂಕಿನ ಮೊರಬ ಸಂಘದ ಸದಸ್ಯರು ಎಳ್ಳುಂಡೆ, ಲಡಿಕೆ ಉಂಡೆ, ರವೆ ಉಂಡೆ, ಸಿಹಿ ತಿನಿಸುಗಳು , ಹುಬ್ಬಳ್ಳಿ ತಾಲೂಕಿನ ಅಗಡಿ ಸಂಘದ ಸದಸ್ಯರು ವಿವಿಧ ರೀತಿಯ ಕ್ರಿಯಾ ಭಸ್ಮ, ಕರ್ಪೂರ, ಹುಬ್ಬಳ್ಳಿ ತಾಲೂಕಿನ ಹಳಿಯಾಳ ಸ್ವಸಹಾಯ ಸಂಘದ ಸದಸ್ಯರು ಸಾವಯವ ಕಾರದ ಪುಡಿ, ಅರಿಶಿಣ, ಶೇಂಗಾದ ಹೋಳಿಗೆ, ವಿವಿಧ ರೀತಿ ಉಪ್ಪಿನಕಾಯಿ, ರೊಟ್ಟಿ, ನವಲಗುಂದ ತಾಲೂಕಿನ ತಿರ್ಲಾಪುರ ಸ್ವಸಹಾಯ ಸಂಘದ ಸದಸ್ಯರು ರಾಗಿ ರೊಟ್ಟಿ ಊಟ ಗಮನ ಸೆಳೆಯುತ್ತಿತ್ತು.
ಕಲಘಟಗಿ ತಾಲೂಕಿನ ದುಮ್ಮವಾಡ ಸಂಘದ ಸದಸ್ಯರು ನಾಗಪ್ಪ, ಸ್ಟೇಷನರಿ ನವಲಗುಂದ ತಾಲೂಕಿನ ತಿರ್ಲಾಪುರ್ ಸಂಘದ ಸದಸ್ಯರು ಸಾವಯವ ಅರಿಶಿಣ, ಮಸಾಲಾ ಪುಡಿ, ಜೋಳದ ಅಳ ಧಾರವಾಡ ತಾಲೂಕಿನ ಯರಿಕೊಪ್ಪ ಸಂಘದ ಸದಸ್ಯರು ವಿವಿಧ ರೀತಿಯ ಉಂಡೆಗಳು ಕುಂದಗೋಳ ತಾಲೂಕಿನ ಜಗದಂಬ ಸಂಘದ ಸದಸ್ಯರು ಸಿರಿಧಾನ್ಯ ದಿಂದ ತಯಾರಿಸಿದ ಸಿಹಿ ತಿಂಡಿಗಳು ಧಾರವಾಡ ತಾಲೂಕಿನ ಮರೇವಾಡ ಸಂಘದ ಸದಸ್ಯರು ಉತ್ತರ ಕರ್ನಾಟಕದ ಜವಾರಿ ಊಟ ಕುಂದಗೋಳ ತಾಲೂಕಿನ ಹಿರೇಹರಕುಣಿ ಸಂಘದ ಸದಸ್ಯರು ರಾಗಿ, ಜೋಳದ ಊಟ, ಕಲಘಟಗಿ ತಾಲೂಕಿನ ಬಿ ಬಸವನಕೊಪ್ಪ ಸಂಘದ ಸದಸ್ಯರು ಧ್ವಿದಳ ಧಾನ್ಯ ಊಟ ತಯಾರಿಸಿ ಮಾರಾಟ ಮೇಳದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸಿಬ್ಬಂದಿ ವರ್ಗ, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಸಂಜೀವಿನಿಯ ಎಲ್ಲ ತಾಲೂಕು ಸಿಬ್ಬಂದಿ ವರ್ಗ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಇದ್ದರು.


