ಧಾರವಾಡ | ಸ್ವಯಂ ಉದ್ಯೋಗದಿಂದ ಮಹಿಳೆಯರಿಗೂ ಆರ್ಥಿಕ ಬಲವರ್ಧನೆ ಸಾಧ್ಯ: ಸ್ವರೂಪಾ ಟಿ ಕೆ

Date:

Advertisements

ಸ್ವಯಂ ಉದ್ಯೋಗದಿಂದ ಮಹಿಳೆಯರಿಗೂ ಆರ್ಥಿಕ ಬಲವರ್ಧನೆ ಸಾಧ್ಯ ಎಂದು ಧಾರವಾಡ ಜಿಲ್ಲಾ‌ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸ್ವರೂಪಾ ಟಿ ಕೆ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಧಾರವಾಡ ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದಿಂದ ಹಮ್ಮಿಕೊಂಡಿದ್ದ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಸಿಹಿ ತಿನಿಸುಗಳು ಹಾಗೂ ಇತರೆ ವಸ್ತುಗಳ ಮಾರಾಟ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಯಂ ಉದ್ಯೋಗ 3

“ಸ್ವಸಹಾಯ ಸಂಘದ ಸದಸ್ಯರು ಸ್ವಯಂ ಉದ್ಯೋಗ ಮಾಡಿ ಆರ್ಥಿಕ ಬಲವರ್ಧನೆಯಾದಾಗ ಮಾತ್ರ ಒಕ್ಕೂಟಗಳು ಬಲವರ್ಧನೆಯಾಗುತ್ತವೆ” ಎಂದರು.‌

Advertisements
ಸ್ವಯಂ ಉದ್ಯೋಗ 1

ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಕುಂದಗೋಳ ತಾಲೂಕಿನ ಬಸವೇಶ್ವರ ಸ್ತ್ರೀಶಕ್ತಿ ಸಂಘದ ಸದಸ್ಯೆ ಶೇಂಗಾ ಉಂಡೆ, ಚಕ್ಕುಲಿ, ಉಳ್ಳಡಿಕೆ, ಅಳ್ನಾವರ ತಾಲೂಕಿನ ಕುಂಬಾರಕೊಪ್ಪ ಸಂಘದ ಸದಸ್ಯರು ವಿವಿಧ ರೀತಿಯ ಬಳೆಗಳು, ಸಾವಯವ ಕುಸುಬಿ ಎಣ್ಣೆ, ನವಲಗುಂದ ತಾಲೂಕಿನ ಮೊರಬ ಸಂಘದ ಸದಸ್ಯರು ಎಳ್ಳುಂಡೆ, ಲಡಿಕೆ ಉಂಡೆ, ರವೆ ಉಂಡೆ, ಸಿಹಿ ತಿನಿಸುಗಳು, ಹುಬ್ಬಳ್ಳಿ ತಾಲೂಕಿನ ಅಗಡಿ ಸಂಘದ ಸದಸ್ಯರು ವಿವಿಧ ರೀತಿಯ ಕ್ರಿಯಾ ಭಸ್ಮ, ಕರ್ಪೂರ, ಹುಬ್ಬಳ್ಳಿ ತಾಲೂಕಿನ ಹಳಿಯಾಳ ಸ್ವಸಹಾಯ ಸಂಘದ ಸದಸ್ಯರು ಸಾವಯವ ಖಾರದ ಪುಡಿ, ಅರಿಶಿಣ, ಶೇಂಗಾದ ಹೋಳಿಗೆ, ವಿವಿಧ ರೀತಿ ಉಪ್ಪಿನಕಾಯಿ, ರೊಟ್ಟಿ, ನವಲಗುಂದ ತಾಲೂಕಿನ ತಿರ್ಲಾಪುರ ಸ್ವಸಹಾಯ ಸಂಘದ ಸದಸ್ಯರ ರಾಗಿ ರೊಟ್ಟಿ ಊಟ ಗಮನ ಸೆಳೆಯುತ್ತಿತ್ತು.

ಸ್ವಯಂ ಉದ್ಯೋಗ 2

ಕಲಘಟಗಿ ತಾಲೂಕಿನ ದುಮ್ಮವಾಡ ಸಂಘದ ಸದಸ್ಯರು ನಾಗಪ್ಪ, ಸ್ಟೇಷನರಿ ನವಲಗುಂದ ತಾಲೂಕಿನ ತಿರ್ಲಾಪುರ್ ಸಂಘದ ಸದಸ್ಯರು ಸಾವಯವ ಅರಿಶಿಣ, ಮಸಾಲಾ ಪುಡಿ, ಜೋಳದ ಅಳ, ಧಾರವಾಡ ತಾಲೂಕಿನ ಯರಿಕೊಪ್ಪ ಸಂಘದ ಸದಸ್ಯರು ವಿವಿಧ ರೀತಿ ಎಲ್ಲ ತರಹದ ಉಂಡೆಗಳು, ಕುಂದಗೋಳ ತಾಲೂಕಿನ ಜಗದಂಬ ಸಂಘದ ಸದಸ್ಯರು ಸಿರಿಧಾನ್ಯದಿಂದ ತಯಾರಿಸಿದ ಸಿಹಿ ತಿಂಡಿಗಳು, ಧಾರವಾಡ ತಾಲೂಕಿನ ಮರೇವಾಡ ಸಂಘದ ಸದಸ್ಯರು, ಉತ್ತರ ಕರ್ನಾಟಕದ ಜವಾರಿ ಊಟ, ಕುಂದಗೋಳ ತಾಲೂಕಿನ ಹಿರೇಹರಕುಣಿ ಸಂಘದ ಸದಸ್ಯರು ರಾಗಿ, ಜೋಳದ ಊಟ, ಕಲಘಟಗಿ ತಾಲೂಕಿನ ಬಿ ಬಸವನಕೊಪ್ಪ ಸಂಘದ ಸದಸ್ಯರು ದ್ವಿದಳ ಧಾನ್ಯ ಊಟ ಹಾಗೂ ವಸ್ತು ಮಾರಾಟ ಮೇಳದಲ್ಲಿ ಭಾಗವಹಿಸಿದ್ದರು.‌

ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀಡಾಡಿ ದನಗಳ ಹಾವಳಿ; ಸ್ಥಳೀಯರಿಗೆ ಕಿರಿಕಿರಿ

ಜಿಲ್ಲಾ ಪಂಚಾಯತ್ ಸಿಬ್ಬಂದಿ ವರ್ಗ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಸಂಜೀವಿನಿಯ ಎಲ್ಲ ತಾಲೂಕು ಸಿಬ್ಬಂದಿ ವರ್ಗ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X