ಚನ್ನಪಟ್ಟಣ | ಬಡವರ ನಿವೇಶನಕ್ಕಾಗಿ 120 ಎಕರೆ ಜಮೀನು ಗುರುತು: ಡಿ ಕೆ ಶಿವಕುಮಾರ್

Date:

ಚನ್ನಪಟ್ಟಣ ಕ್ಷೇತ್ರದ ಬಡವರಿಗೆ ಮನೆ ಹಾಗೂ ನಿವೇಶನ ಹಂಚಿಕೆಗಾಗಿ ಸರ್ಕಾರದಿಂದ 120 ಎಕರೆಯಷ್ಟು ಜಮೀನು ಗುರುತಿಸಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣ ತಾಲ್ಲೂಕಿನಲ್ಲಿ ನಡೆದಿದ್ದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರʼ ಸರಣಿ ಕಾರ್ಯಕ್ರದಲ್ಲಿ ಮನೆ, ನಿವೇಶನ ಹಂಚಿಕೆ ಬಗ್ಗೆ ನಾಗರಿಕರಿಗೆ ಡಿಸಿಎಂ ಶಿವಕುಮಾರ್ ಅವರು ಈ ಹಿಂದೆ ಭರವಸೆ ನೀಡಿದ್ದರು. ಅದರಂತೆ ನಿವೇಶನಗಳಿಗಾಗಿ ಸ್ಥಳ ವೀಕ್ಷಣೆಗೆ ಗುರುವಾರ ತಾಲ್ಲೂಕಿನ ಹನುಮಂತನಗರ, ಪಟ್ಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

“ಜನತೆಗೆ ಆದಷ್ಟು ಬೇಗ ಅನುಕೂಲ ಮಾಡಿಕೊಡುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈಗ ಇರುವ ಜಮೀನುಗಳ ಅಕ್ಕಪಕ್ಕ ಖಾಸಗಿಯವರು ಜಮೀನು ನೀಡಿದರೆ ಸರ್ಕಾರದಿಂದ ಖರೀದಿಸಲಾಗುವುದು. ಈಗಾಗಲೇ ಚನ್ನಪಟ್ಟಣ ತಾಲ್ಲೂಕು ಸೇರಿದಂತೆ ಒಟ್ಟು ಮೂರು ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳು ಮೂಲ ಸೌಕರ್ಯ ಅಭಿವೃದ್ದಿಗೆ ತಲಾ 100 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕನಕಪುರದಲ್ಲಿ ನೂರಾರು ಎಕರೆ ಹಂಚಿದ್ದೇನೆ. ನಾನೇ ಖುದ್ದಾಗಿ ವಾರ್ಡ್ ಮಟ್ಟದಲ್ಲಿ ನಿವೇಶನ ಹಂಚಿಕೆ ಮಾಡಿದ್ದೇನೆ. ಇಲ್ಲಿಯೂ ಇದೇ ರೀತಿ ಹಂಚಿಕೆ ಮಾಡಲಾಗುವುದು. ಉತ್ತಮ ದರ್ಜೆಯ ಲೇಔಟ್ ಗಳನ್ನು ನಿರ್ಮಾಣ ಮಾಡಿ, ಒಳಚರಂಡಿ, ಕುಡಿಯುವ ನೀರು, ಶಾಲೆ, ಅಂಗನವಾಡಿ, ದೇವಸ್ಥಾನ, ರಸ್ತೆ ಸೇರಿದಂತೆ ಎಲ್ಲ ಸೌಕರ್ಯ ನೀಡಲಾಗುವುದು” ಎಂದು ಹೇಳಿದರು.

ಉಪಚುನಾವಣೆ ಮುಂಚಿತವಾಗಿಯೇ ಹಂಚಿಕೆ ಮಾಡಲಾಗುವುದೇ ಎಂದಾಗ, “ಈಗಾಗಲೇ ಸ್ಕೆಚ್ ಕೂಡ ಮಾಡಲಾಗಿದೆ. ಚನ್ನಪಟ್ಟಣ ನಗರ ಮಾತ್ರವಲ್ಲ, ಆಯಾಯ ಹಳ್ಳಿಗಳಲ್ಲಿ ಅಲ್ಲಲ್ಲಿಯೇ ನಿವೇಶನ ಹಂಚಿಕೆ ಮಾಡಲಾಗುವುದು. ಅವೇರಗಳ್ಳಿ, ಸುಳ್ಳೇರಿ, ಶಿಬನಹಳ್ಳಿ, ವಂದಾರಗುಪ್ಪೆ, ಅಲ್ಲಾಳುಸಂದ್ರ ಸೇರಿದಂತೆ ಬ್ರಹ್ಮಿಣೀಪುರದಲ್ಲಿ 9 ಎಕರೆ, ಪಟ್ಲು ಗ್ರಾಮದಲ್ಲಿ 22ಎಕರೆ ಸೇರಿದಂತೆ ಆಯಾಯ ಗ್ರಾಮಮಟ್ಟದಲ್ಲಿ ಎಷ್ಟು ಭೂಮಿ ಲಭ್ಯತೆ ಇದೆಯೋ ಅವುಗಳನ್ನು ಗುರುತಿಸಲಾಗಿದೆ” ಎಂದರು.

ಕುಮಾರಸ್ವಾಮಿ ಅವರ ಸ್ವಚ್ಛತೆ ಬಗ್ಗೆ ತಿಳಿಸಲಿ

“ನಮ್ಮ ಸಮಾವೇಶಕ್ಕೆ ಬಿಜೆಪಿ, ಜೆಡಿಎಸ್ ಉತ್ತರ ನೀಡಲಿ. ನಾವು ಕೇವಲ ಉತ್ತರ ನೀಡಿ ಎಂದಷ್ಟೇ ಕೇಳುತ್ತಿದ್ದೇವೆ. ಮಾಧ್ಯಮವೊಂದರಲ್ಲಿ ಗಣಿ ವಿಚಾರವಾಗಿ ಸುದ್ದಿ ಬಿತ್ತರವಾಗುತ್ತಿತ್ತು. ಮೈನಿಂಗ್ ಮಿನಿಸ್ಟರ್ ಮೈನಿಂಗ್ ಹೇಗೆ ಕೊಟ್ಟರು ಎಂದು ಚರ್ಚೆಯಾಗುತ್ತಿತ್ತು. ಮೈನಿಂಗ್, ಸ್ಟೀಲ್, ಕಬ್ಬಿಣ ಸಚಿವರು ಅನುಮತಿ ಕೊಟ್ಟರು ಎನ್ನುವ ವಿಚಾರವಿದೆ. ಡೀನೋಟಿಫಿಕೇಶನ್ ಸೇರಿದಂತೆ ಇತರೇ ಆರೋಪಗಳಿಗೆ ಉತ್ತರ ನೀಡಲಿ. ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರಲ್ಲವೇ, ಅವರ ಸ್ವಚ್ಛತೆ ಬಗ್ಗೆ ತಿಳಿಸಲಿ” ಎಂದು ಸವಾಲು ಹಾಕಿದರು.

ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನ ಸಭೆಯ ಪೋಸ್ಟರ್ ಅಲ್ಲಿ ಕೆಪಿಸಿಸಿ ಅಧ್ಯಕ್ಷರ ಫೋಟೊ ಕಣ್ಮರೆಯಾಗಿರುವ ಬಗ್ಗೆ ಕೇಳಿದಾಗ “ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ. ಹಿಂದುಳಿದ ವರ್ಗದ ನಾಯಕ ಎಂದು ಗುರಿ ಮಾಡಲಾಗುತ್ತಿದೆ. ಇಲ್ಲಿ ನನ್ನ ಅವಶ್ಯಕತೆ ಏನಿಲ್ಲ. ನಮ್ಮ ಸರ್ಕಾರದ ನಾಯಕರು ಅವರು, ನಾನು ಪಕ್ಷದ ಅಧ್ಯಕ್ಷ ಇದರಲ್ಲಿ ಸಮಸ್ಯೆ ಏನಿದೆ?” ಎಂದು ಮರು ಪ್ರಶ್ನಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್‌ನಿಂದ ನಿರ್ದಿಷ್ಟ ಸಮುದಾಯದ ಓಲೈಕೆ, ನಾಗಮಂಗಲ ಗಲಾಟೆಗೆ ಕಾರಣ: ಕುಮಾರಸ್ವಾಮಿ

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು...

ನಾಲ್ಕು ರಾಜ್ಯಗಳ ಚುನಾವಣೆ: ಬಂಡಾಯ ಶಮನ ಮಾಡಿ ಗೆಲ್ಲುವುದೇ ಬಿಜೆಪಿ!

ಮುಂದಿನ ದಿನಗಳಲ್ಲಿ ನಡೆಯುವ ನಾಲ್ಕು ರಾಜ್ಯಗಳ ಚುನಾವಣೆ ಬಿಜೆಪಿ ಪಾಲಿಗೆ ಬಿಸಿ...

ಬೀದರ್‌ | ಬಸವಕಲ್ಯಾಣದಲ್ಲಿ ಅ.19, 20ರಂದು ʼಸ್ವಾಭಿಮಾನಿ ಕಲ್ಯಾಣ ಪರ್ವʼ

ಬಸವ ಧರ್ಮ ಪೀಠದ ಸ್ವಾಭಿಮಾನಿ ಶರಣರ ಬಳಗದ ವತಿಯಿಂದ ಅಕ್ಟೋಬರ್ 19...

ಬೆಂಗಳೂರು ಸಂಚಾರಕ್ಕೆ 100 ನೂತನ ಬಿಎಂಟಿಸಿ ಬಸ್ ಲೋಕಾರ್ಪಣೆ

ಬೆಂಗಳೂರು ನಗರದ ಜನತೆಯ ಅನುಕೂಲಕ್ಕೆ ಮೊದಲ ಹಂತದ 100 ನೂತನ ಬಿಎಂಟಿಸಿ...