ನಾಗರ ಪಂಚಮಿ ಹಬ್ಬದಂದು ಕಲ್ಲು ನಾಗರಕ್ಕೆ ಮತ್ತು ಹುತ್ತಕ್ಕೆ ಹಾಲನ್ನು ಎರೆಯುವುದು ವ್ಯರ್ಥ. ಅದು ಮಣ್ಣು, ಕಲ್ಲು ಪಾಲಾಗುತ್ತದೆ, ಬದಲಿಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಮತ್ತು ಅಗತ್ಯವಿದ್ದರಿಗೆ ಹಾಲು ವಿತರಿಸಬೇಕು ಎಂದು ಕೂಡಲ ಸಂಗಮ ಪಂಚಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.
ಪಂಚಸೇನಾ ರಾಜ್ಯ ಸೇನಾನಿಗಳ ಸಹಯೋಗದಲ್ಲಿ ಧಾರವಾಡದ ಕಿವುಡ ಹಾಗೂ ಮೂಕರ ಹೊನ್ನಮ್ಮ ವಸತಿ ಶಾಲೆಯಲ್ಲಿ ನಾಗ ಪಂಚಮಿಯ ಹಬ್ಬವನ್ನು ಕಿವುಡ ಮತ್ತು ಮಂದ ಮಕ್ಕಳಿಗೆ ಹಾಲು ವಿತರಿಸಿದರು.
ಬಸವ ಪಂಚಮಿ 27ನೇ ವರ್ಷಕ್ಕೆ ಕಾಲಿಟ್ಟ ಪ್ರಯುಕ್ತ ಹಾಲು ಕುಡಿಯುವ ಮತ್ತು ಕುಡಿಸುವ ಹಬ್ಬದ ಸಪ್ತಾಹ ಕಾರ್ಯಕ್ರಮ ಕಿವುಡು ಮತ್ತು ಮೂಕರ ಮಕ್ಕಳ ಹೊನ್ನಮ್ಮ ಶಿಕ್ಷಣ ಸಂಸ್ಥೆ ಸರಸ್ವತಪುರ, ಟೋಲನಾಕಾ ಸೇರಿ ನಗರದ ವಿವಿಧೆಡೆ ನಡೆಯಿತು.
ʼಕಲ್ಲು ನಾಗರ ಹಾವಿಗೆ ಎರೆಯುವ ಹಾಲು, ಬಡ ಮಕ್ಕಳ ಪಾಲು ಎಂಬ ಸಪ್ತಾಹವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ. ನಾಗರ ಪಂಚಮಿ ಹೆಸರಿನಲ್ಲಿ ಕಲ್ಲು ನಾಗರಕ್ಕೆ ಹಾಲು ಎರೆಯುವುದು ತಪ್ಪು. ಇದೊಂದು ಮೂಢನಂಬಿಕೆ. ಪೌಷ್ಠಿಕ ಹಾಲು ವ್ಯರ್ಥ ಮಾಡಬಾರದು. ಮೊಟ್ಟೆಯಿಂದ ಜೀವ ಪಡೆದ ಯಾವುದೇ ಪಕ್ಷಿ, ಪ್ರಾಣಿಯೂ ಹಾಲು ಕುಡಿಯುವುದಿಲ್ಲ. ಅಂತಹ ಪಕ್ಷಿ, ಪ್ರಾಣಿಗಳಿಗೆ ಹಾಲು ಹಾಕಿದರೆ ವ್ಯರ್ಥವಾಗುತ್ತದೆ. ಪೌಷ್ಠಿಕವುಳ್ಳ ಸದ್ಬಳಕೆಯಾಗಲಿʼ ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಾಜಿ ಸಿಎಂ ಕುಮಾರಸ್ವಾಮಿ ಅನುಮೋದಿಸಿದ್ದ ಬೋಗಸ್ ಕಂಪನಿಯ ಇತಿಹಾಸ
ಕಾರ್ಯಕ್ರಮದಲ್ಲಿ ಪಂಚಸೇನಾ ರಾಜ್ಯ ಪದಾಧಿಕಾರಿ ರುದ್ರಗೌಡ ಸೋಲಬಗೌಡ್ರ, ಕಾರ್ಯದರ್ಶಿ ಸಂಗನಗೌಡ ಹೂವನ್ನವರ, ನಿಂಗಣ್ಣ ಕರೀಕಟ್ಟಿ, ನಾಗಪ್ಪ ಮುಮ್ಮಿಗಟ್ಟಿ, ವಿದ್ಯಾ ಪಾಟೀಲ, ಪೂಜಾ ಸವದತ್ತಿ, ಅಡಿವೆಪ್ಪ ಸಲಕಿ, ರಾಘವೇಂದ್ರ ಘಟ್ಟದ, ಮೈಲಾರ ಪಂಚನ್ನವರ, ಶಾಲಾ ಮಕ್ಕಳು, ಶಾಲಾ ಸಿಬ್ಬಂದಿ ತಾಯಂದಿರು ಹಿರಿಯರು ಹಾಜರಿದ್ದರು.