ಮುಖ್ಯಸ್ಥರಾಗಿ ಮೊಹಮ್ಮದ್ ಯೂನುಸ್; ಬದಲಾಗುವುದೇ ಬಾಂಗ್ಲಾದೇಶ?

Date:

Advertisements

ಮೀಸಲಾತಿ ಹೋರಾಟ, ಭ್ರಷ್ಟಾಚಾರ, ನಿರಂಕುಶಾಧಿಕಾರ, ಅಭಿವೃದ್ಧಿಯ ಕಡೆಗಣನೆ ಹೀಗೆ ಹತ್ತಾರು ಕಾರಣಗಳಿಂದ ಸತತ 15 ವರ್ಷ ಕಾಲ ಸುದೀರ್ಘವಾಗಿ ಪ್ರಧಾನಿಯಾಗಿ ಆಡಳಿತ ನಡೆಸಿದ್ದ ಶೇಖ್‌ ಹಸೀನಾ ಅವರು ದೇಶಬಿಟ್ಟು ಓಡಿಹೋಗಿದ್ದಾರೆ. ಬಡವರಿಗಾಗಿಯೇ ಕಿರು ಸಾಲ ಯೋಜನೆಗಳ ಮೂಲಕ ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಗಳಿಸಿದ್ದ ನೊಬೆಲ್‌ ಪ್ರಶಸ್ತಿ ವಿಜೇತ ಮೊಹಮ್ಮದ್‌ ಯೂನುಸ್ ಅಧಿಕಾರ ವಹಿಸಿಕೊಳ್ಳುತ್ತಿರುವಂತೆ ದೇಶ ಸುಖಾಂತ್ಯಕ್ಕೆ ಹೊರಳಲಿದೆ ಎಂದು ತೋರಬಹುದು. ಸಜ್ಜನ ವ್ಯಕ್ತಿಯೊಬ್ಬರು ಆಡಳಿತದ ಚುಕ್ಕಾಣಿ ಹಿಡಿದರೆ ರಾಜಕೀಯ ಹಿಂಸಾಚಾರಗಳು ಕೊನೆಗೊಂಡು ಎಲ್ಲವೂ ಸುಖಮಯವಾಗಬಹುದು ಎಂದು ಮೇಲ್ನೋಟಕ್ಕೆ ತೋರಬಹುದು. ಆದರೆ ಬಾಂಗ್ಲಾದೇಶದ ರಾಜಕೀಯ ಇತಿಹಾಸವನ್ನು ಬಲ್ಲವರಿಗೆ ಇದು ಮುಗಿಯದ ಸಮಸ್ಯೆ ಎಂದು ತಿಳಿಯದಿರದು.

ಮೊಹಮ್ಮದ್‌ ಯೂನುಸ್ ಅವರು 1970 ಹಾಗೂ 80ರ ದಶಕದಲ್ಲಿ ‘ಸಣ್ಣ ಸಾಲ’ಗಳ ಯೋಜನೆಯ ಮೂಲಕ ಬಾಂಗ್ಲಾದ ಬಡವರ ಅಗತ್ಯಗಳನ್ನು ಪೂರೈಸಿದರು. ಯೂನುಸ್ ಅವರ ಗ್ರಾಮೀಣ ಬ್ಯಾಂಕ್‌ ಯೋಜನೆಯು ಆರ್ಥಿಕವಾಗಿ ಹಿಂದುಳಿದಿದ್ದ ಲಕ್ಷಾಂತರ ಕೃಷಿಕರು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿತು. ದೇಶವು ಸುಧಾರಣೆ ಕಾಣುವುದರ ಜೊತೆ ಮೊಹಮ್ಮದ್ ಯೂನುಸ್ ಅವರ ಗ್ರಾಮೀಣ ಬ್ಯಾಂಕ್‌ ಸಾಧನೆಗೆ 2006ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಕೂಡ ಒಲಿದು ಬಂತು. ರಾಷ್ಟ್ರದ ಜನರನ್ನು ಆರ್ಥಿಕ ಸ್ವಾವಲಂಬಿಗಳಾಗಿಸಲು ಜೀವವನ್ನು ಸವೆಸಿದ ಕಳಂಕರಹಿತ ವ್ಯಕ್ತಿಯಾಗಿರುವ ಯೂನುಸ್‌ ಅವರಿಗೆ ಸಮಸ್ಯೆಗಳು ತಪ್ಪಲಿಲ್ಲ. ಈಗ ಸೇನೆಯ ರಕ್ಷಣೆಯೊಂದಿಗೆ ನಿರಾಳವಾಗಿ ಅಧಿಕಾರ ನಡೆಸಬಹುದು ಎಂದು ಸ್ವತಃ ಅವರೂ ಕೂಡ ಅಂದುಕೊಂಡಿಲ್ಲ. ತೊಂದರೆಗಳು ಕಟ್ಟಿಟ್ಟಬುತ್ತಿ ಎಂದು 83 ವರ್ಷ ದಾಟಿರುವ ಯೂನುಸ್ ಅವರಿಗೂ ತಿಳಿದಿದೆ.

ಬಾಂಗ್ಲಾದೇಶದ ರಕ್ತಸಿಕ್ತ ಇತಿಹಾಸವನ್ನು ನೋಡಿದವರು ಯೂನುಸ್. 1970ರಿಂದ ಪಾಕಿಸ್ತಾನದಿಂದ ಪ್ರತ್ಯೇಕ ರಾಷ್ಟ್ರವಾದ ನಂತರ ಹಲವು ಪ್ರಜಾಪ್ರಭುತ್ವ ಸರ್ಕಾರಗಳನ್ನು ಅಲ್ಲಿನ ಸೇನೆ ಕೆಡವಿದೆ ಎಂಬ ಅರಿವು ಅವರಿಗಿದೆ. ಬಾಂಗ್ಲಾದೇಶದ ಸಂಸ್ಥಾಪಕ ಮುಜೀಬ್ ಉರ್ ರೆಹಮಾನ್ ಅವರನ್ನೇ ಸೇನೆಯು ಕೊಂದು ಹಾಕಿತ್ತು. ನೂರಾರು ನಾಯಕರು ಕೂಡ ಸೇನೆಯಿಂದ ಹತರಾಗಿದ್ದಾರೆ. ಬಾಂಗ್ಲಾದಲ್ಲಿ ಹಸೀನಾ ಸರ್ಕಾರ ಕಿತ್ತೊಗೆಯಲು ವಿದ್ಯಾರ್ಥಿಗಳ ಸಂಘಟನೆ ಮೇಲುಗೈ ಸಾಧಿಸಿರಬಹುದು. ಅವರು ನಮ್ಮ ಬೆಂಬಲಕ್ಕಿರುತ್ತಾರೆ, ಸೇನೆ ತಮ್ಮನ್ನು ಅಧಿಕಾರದಿಂದ ಕೆಡವಿದರೆ ದೇಶದ ವಿದ್ಯಾರ್ಥಿಗಳು ನಮಗೆ ಸಹಾಯ ಮಾಡುತ್ತಾರೆ ಎಂದು ಮುಂದಾಲೋಚನೆ ಖಂಡಿತಾ ಅವರಿಗಿರುವುದಿಲ್ಲ. ತಮ್ಮ ಆಡಳಿತವೇನಿದ್ದರೂ ಬಂದೂಕಿನ ನಳಿಕೆಯಡಿಯಲ್ಲೇ ಎಂಬುದು ಅವರಿಗೂ ಗೊತ್ತು. ಹೆಸರಿಗಷ್ಟೆ ಪ್ರಜಾಪ್ರಭುತ್ವವಿರಿಸಿ ಎಲ್ಲವು ಪರೋಕ್ಷವಾಗಿ ತಮ್ಮ ನಿಯಂತ್ರಣದಲ್ಲಿರಬೇಕೆಂದು ಬಾಂಗ್ಲಾ ಸೇನಾಧಿಕಾರಿಗಳು ಸದಾ ಬಯಸುತ್ತಾರೆ.

Advertisements

ಈ ಸುದ್ದಿ ಓದಿದ್ದೀರಾ? ವ್ಯಕ್ತಿ ವಿಶೇಷ | ಬಾಂಗ್ಲಾದ ಬಡವರ ಬ್ಯಾಂಕರ್ ಯೂನುಸ್, ದಿಕ್ಕೆಟ್ಟ ದೇಶಕ್ಕೂ ದಿಕ್ಕಾಗುವರೇ?

ಶೇಖ್‌ ಹಸೀನಾ ಸರ್ಕಾರ ಬೀಳಲು ಮೀಸಲಾತಿ ಹಾಗೂ ಪ್ರಧಾನಿಯ ರಾಜೀನಾಮೆ ಕಾರಣವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದರ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಬೇಹುಗಾರಿಕೆ ಕೆಲಸ ಮಾಡಿದೆ ಎಂಬ ಅನುಮಾನದ ವಾಸನೆ ಕೂಡ ಈಗ ಬಡಿಯುತ್ತಿದೆ. ಹಸೀನಾ ಸರ್ಕಾರ ಪತನಕ್ಕೆ ಕಾರಣವಾದ ಪ್ರತಿಭಟನೆ, ಹಿಂಸಾಚಾರದಲ್ಲಿ ಪಾಕ್‌, ಚೀನಾ ಪರ ಒಲವು ಉಳ್ಳವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ, ಇವೆರೆಡು ರಾಷ್ಟ್ರಗಳು ಸರ್ಕಾರ ಉರುಳಿಸಲು ಶಕ್ತಿಮೀರಿ ಶ್ರಮಿಸಿವೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಾಂಗ್ಲಾದಲ್ಲಿ ಶೇಖ್‌ ಹಸೀನಾರ ಅವಾಮಿ ಲೀಗ್ ಬಿಟ್ಟು ಇತರ ಪಕ್ಷಗಳಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ), ಜಮಾತ್– ಇ–ಇಸ್ಲಾಮಿ ಪಾಕಿಸ್ತಾನದತ್ತ ಒಲವು ಹೊಂದಿವೆ. ಪಾಕಿಸ್ತಾನ ಮತ್ತು ಚೀನಾ ಸಂಬಂಧ ಅತ್ಯುತ್ತಮವಾಗಿರುವುದರಿಂದ ಬಾಂಗ್ಲಾದೇಶದ ಆಡಳಿತದ ಮೇಲೆ ಈ ಎರಡೂ ರಾಷ್ಟ್ರಗಳು ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಈ ಹಿಂದೆ ಜೈಲಿಗೆ ಕಳಿಸಿದ್ದ ಶೇಖ್‌ ಹಸೀನಾ ಹಾಗೂ ಆಕೆಯ ಪಕ್ಷದ ಕಾರ್ಯಕರ್ತರು ಯೂನುಸ್‌ ಅವರ ಮೇಲೆ ಕತ್ತಿ ಮಸೆಯುತ್ತಲೇ ಇರುತ್ತಾರೆ. ಪ್ರಜಾಪ್ರಭುತ್ವ ಸ್ಥಾಪನೆಯಾದ ನಂತರ ತಾವು ಯಾವಾಗ ಬೇಕಾದರೂ ದೇಶಕ್ಕೆ ಮರಳಿಬರಬಹುದು ಎಂಬ ಸುಳಿವನ್ನು ಹಸೀನಾ ಹಾಗೂ ಅವರ ಪುತ್ರ ಬಹಿರಂಗವಾಗಿ ತಿಳಿಸಿದ್ದಾರೆ. ಇವೆಲ್ಲ ಕಾರಣಗಳಿಂದ ಮೊಹಮ್ಮದ್ ಯೂನುಸ್ ಯಾವಾಗ ಬೇಕಾದರೂ ಅಧಿಕಾರದ ಕುರ್ಚಿಯಿಂದ ಕೆಳಗಿಳಿಯಬಹುದು. ಆದರೆ ಕುರ್ಚಿಯಿಂದ ಕೆಳಗಿಳಿಯುವ ಮುನ್ನ ದೇಶದ ಹಲವು ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ಅವರ ಹೆಗಲ ಮೇಲಿದೆ. ಹಣದುಬ್ಬರ, ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಬಡತನ, ಹಿಂದುಳಿದ ಅಭಿವೃದ್ಧಿ ಸೇರಿ ನೂರಾರು ಸಮಸ್ಯೆಗಳನ್ನು ನಿವಾರಿಸಬೇಕಿದೆ. ಸೇನೆ ಹಾಗೂ ಹಸ್ತಕ್ಷೇಪ ನಡೆಸುವ ನೆರೆರಾಷ್ಟ್ರಗಳ ಮರ್ಜಿಗೆ ಸಿಗದೆ ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಸವಾಲಿನ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಹಿಂಸಾಚಾರ ಕೊನೆಗೊಳಿಸಿ, ಎಲ್ಲ ಸಮಸ್ಯೆಗಳನ್ನು ನಿಭಾಯಿಸಿ, ದೇಶದಲ್ಲಿ ಶಾಂತಿ ನೆಲಸಿ ಲಕ್ಷಾಂತರ ಅಮಾಯಕ ಜನರು ನೆಮ್ಮದಿಯ ಬದುಕಿನತ್ತ; ಪ್ರಜಾಪ್ರಭುತ್ವ ಸರ್ಕಾರ ಶಾಶ್ವತವಾಗಿ ಸಾಕಾರಗೊಳ್ಳುವತ್ತ ಮೊಹಮ್ಮದ್ ಯೂನುಸ್ ಮನಸ್ಸು ಮಾಡಬೇಕಿದೆ.  

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X