ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಹೆಚ್ಚಳ ಖಂಡಿಸಿ ಎಸ್‌ಎಫ್‌ಐ ಕಲಬುರಗಿ ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕಲಬುರಗಿ ಜಿಲ್ಲಾ ಸಂಚಾಲಕಿ ಸುಜಾತ ಮಾತನಾಡಿ, ಬಿಎ, ಬಿಕಾಂ ಹಾಗೂ ಬಿಎಸ್ಸಿ ವಿವಿಧ ಪದವಿ ಕೋರ್ಸ್‌ಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ಈ ವರ್ಷದ ದಾಖಲಾತಿ ಶುಲ್ಕ ಕಳೆದ ವರ್ಷಕ್ಕಿಂತ ಹೆಚ್ಚಳ ಮಾಡಲಾಗಿದೆ” ಎಂದು ಹೇಳಿದರು.
“ಈ ಬಾರಿ ಎಸ್ಸಿ,ಎಸ್ಟಿ, ಓಬಿಸಿ, ಸಾಮಾನ್ಯ ವಿದ್ಯಾರ್ಥಿಗಳಿಗೆ ದಾಖಲಾತಿ ಶುಲ್ಕ ಸಮನಾಗಿ ಮಾಡಲಾಗಿದೆ. ಸರ್ಕಾರದ ಆದೇಶ ಪ್ರಕಾರ ಎಸ್ ಸಿ, ಎಸ್ ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಕಡಿತಗೊಳಿಸಿ ಕಲ್ಯಾಣ ಕರ್ನಾಟಕದ ಭಾಗವಾದ ನಮ್ಮ ಕಲ್ಬುರ್ಗಿ ಜಿಲ್ಲೆ ಇವತ್ತು ಹಲವಾರು ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಶುಲ್ಕ ಕಟ್ಟಲು ತಾವು ಕೆಲಸ ಮಾಡಿ ಕಾಲೇಜ್ ಶುಲ್ಕ ಕಟ್ಟುತ್ತಿದ್ದಾರೆ ಮತ್ತು ಬಹುತೇಕ ಗ್ರಾಮೀಣದ ಭಾಗದ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶ ಶುಲ್ಕ ಕಟ್ಟಲು ತುಂಬಾ ಕಷ್ಟ ಆಗುತ್ತದೆ” ಎಂದು ತಿಳಿಸಿದರು.
ಬಿಎಸ್ಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯ ಶುಲ್ಕದಿಂದ ವಿನಾಯಿತಿ ನೀಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಕಲ್ಬುರ್ಗಿ ಜಿಲ್ಲಾ ಸಮಿತಿ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಪ್ರೇಮ್, ನಾಗಮ್ಮ, ಮಾಲಾಶ್ರೀ, ರಾಹುಲ್, ರವಿಕಿರಣ , ರಮೇಶ್, ಅನುಪ, ಪಲ್ಲವಿ ಇನ್ನಿತರರು ಉಪಸ್ಥಿತರಿದ್ದರು.
