ಸುಮಾರು 17 ದಿನಗಳ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಹಬ್ಬಕ್ಕೆ ವರ್ಣರಂಜಿತ ತೆರೆ ಬಿದ್ದಿದ್ದು ಪ್ರೇಮನಗರಿ ಪ್ಯಾರಿಸ್‌ನಿಂದ ಮನರಂಜನೆ ನಗರಿ ಲಾಸ್ ಏಂಜಲೀಸ್‌ಗೆ ಧ್ವಜ ಹಸ್ತಾಂತರಿಸಲಾಯಿತು.
ಭಾನುವಾರ ಸಾವಿರಾರು ಕ್ಯಾಲಿಫೋರ್ನಿಯಾದ ಸಂಗೀತ ಐಕಾನ್‌ಗಳಾದ ರೆಡ್ ಹಾಟ್ ಚಿಲ್ಲಿ ಪೆಪ್ಪರ್ಸ್‌ನ ಬಿಲ್ಲಿ ಎಲಿಶ್ ಮತ್ತು ಸ್ನೂಪ್ ಡಾಗ್ ಸಾವಿರಾರು ಅಭಿಮಾನಿಗಳಿಗೆ ಪ್ರದರ್ಶನ ನೀಡಿದರು.
33ನೇ ಬೇಸಿಗೆ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಅಂತ್ಯ ಹೇಳುವ ಮೊದಲು ಐಒಸಿ ಅಧ್ಯಕ್ಷ ಥಾಮಸ್ ಬಾಚ್, ಅಥ್ಲೀಟ್‌ಗಳು ಮತ್ತು ಫ್ರೆಂಚ್ ಈಜುಗಾರ ಲಿಯಾನ್ ಮಾರ್ಚಂಡ್ ಒಲಿಂಪಿಕ್ ಜ್ವಾಲೆಯನ್ನು ಆರಿಸಿದರು.
ಇದನ್ನು ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್: ಹಾಕಿಯಲ್ಲಿ ಕಂಚು ಗೆದ್ದ ಭಾರತ, ಪದಕಗಳ ಸಂಖ್ಯೆ 4ಕ್ಕೆ ಏರಿಕೆ
ಫ್ರೆಂಚ್ ರಗ್ಬಿ ಫುಟ್ಬಾಲ್ ತಾರೆ ಆಂಟೊಯಿನ್ ಡುಪಾಂಟ್ ನೇತೃತ್ವದಲ್ಲಿ 205 ದೇಶಗಳ ಕ್ರೀಡಾಪಟುಗಳು ಕ್ರೀಡಾಂಗಣಕ್ಕೆ ಮೆರವಣಿಗೆ ನಡೆಸಿದರು. ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ನಟ ಟಾಮ್ ಕ್ರೂಸ್ ಪ್ರದರ್ಶನವೂ ಕೂಡಾ ಜನರನ್ನು ಮನರಂಜಿಸಿದೆ.
2021ರ ಟೋಕಿಯೋ ಒಲಿಂಪಿಕ್ಸ್ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಪ್ರೇಕ್ಷಕರಿಲ್ಲದೆ ನಡೆದಿತ್ತು. ಅದಾದ ಬಳಿಕ ಈಗ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಅದ್ದೂರಿಯಾಗಿ ನಡೆದಿದೆ. 70,000ಕ್ಕೂ ಹೆಚ್ಚು ಪ್ರೇಕ್ಷಕರು ಕ್ವೀನ್ಸ್ ಗೀತೆ ‘ವಿ ಆರ್ ದಿ ಚಾಂಪಿಯನ್ಸ್’ ಹಾಡಿಗೆ ಕ್ರೀಡಾಪಟುಗಳೊಂದಿಗೆ ಧ್ವನಿಗೂಡಿಸಿದ್ದಾರೆ.
ಸಂಪ್ರದಾಯದಂತೆ, ಮಹಿಳಾ ಮ್ಯಾರಥಾನ್‌ಗಳಿಗೆ ಪದಕ ಭಾಜನ ಸಮಾರಂಭದ ನಂತರ ಗ್ರೀಸ್‌ನ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಈ ಮೂಲಕ 1896ರಲ್ಲಿ ಮೊದಲ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ ದೇಶವನ್ನು ಗೌರವಿಸಲಾಯಿತು. ನಂತರ 280ಕ್ಕೂ ಹೆಚ್ಚು ಕಲಾವಿದರು ಕ್ರೀಡಾಂಗಣವನ್ನು ತುಂಬಿ ತಮ್ಮ ಕಲೆ ಪ್ರದರ್ಶಿಸಿದರು.
"The #OlympicGames #Paris2024 were a celebration of the athletes and sport at its best."
— IOC MEDIA (@iocmedia) August 11, 2024
Read the full speech of IOC President Thomas Bach, during the Closing Ceremony: https://t.co/h54nkXDTFa pic.twitter.com/MbjzHsTun3