ಬಳ್ಳಾರಿ | ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ ಗೇಟನ್ನು ತಕ್ಷಣವೇ ದುರಸ್ತಿ ಮಾಡಲು ರೈತ ಸಂಘ ಮನವಿ

Date:

Advertisements

ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ 19ನೇ ಗೇಟನ್ನು ತಕ್ಷಣವೇ ದುರಸ್ತಿ ಮಾಡಿ ಕೆಳ ಭಾಗದ ಜನರಿಗೆ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಬಳ್ಳಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹೆಚ್ಚಿನ ಪ್ರಮಾಣದ ನೀರಿನಿಂದಾಗಿ ಅಣೆಕಟ್ಟಿನ 19ನೇ ಗೇಟ್ ಕೊಚ್ಚಿ ಹೋಗಿದೆ. ಇದರಿಂದ ರೈತರಿಗೆ ಆತಂಕ ಸೃಷ್ಟಿಯಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಿ, ಕಾರ್ಯಾರಂಭ ಪ್ರಾರಂಭ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ರೈತ ಮುಖಂಡ ಕೃಷ್ಣಪ್ಪ ಮಾತನಾಡಿ, “ಕರ್ನಾಟಕ ರೈತರು ಮತ್ತು ಗಡಿ ಭಾಗದ ಆಂಧ್ರ ರೈತರು ಈ ವರ್ಷ ಸಂಪೂರ್ಣವಾಗಿ ಮಳೆಯಾಗಿ ಡ್ಯಾಂ ತುಂಬಿದ್ದರಿಂದ ಒಂದು ಕಡೆ ಖುಷಿಯಾಗಿತ್ತು .ರೈತರು ಗದ್ದೆ ಮತ್ತು ಹತ್ತಿ, ಮೆಣಸಿನಗಿಡ, ಮೆಕ್ಕೆಜೋಳ, ಹೊಲದಲ್ಲಿ ಬಿತ್ತನೆ ಮಾಡಿದ್ದಾರೆ. ಮಳೆಗಾಲದಲ್ಲಿ ಡ್ಯಾಂ ಹಾಗೂ ಕಾಲುವೆಗಳಿಗೆ ಭೇಟಿ ನೀಡುವುದು, ಪರಿಶೀಲಿಸುವುದು ಅವರ ಅಧಿಕಾರಿಗಳ ಕರ್ತವ್ಯ. ಅವರ ನಿರ್ಲಕ್ಷ್ಯ ಕಾರಣಕ್ಕೆ ಘಟನೆ ಸಂಭವಿಸಿದೆ” ಎಂದು ಆರೋಪಿಸಿದರು.

Advertisements

ಪ್ರತಿ ತಿಂಗಳು ಅಧಿಕಾರಿಗಳು , ಇಂಜಿನಿಯರ್‌ಗಳು , ಸ್ಥಳೀಯ ರೈತರಿಗೆ ಕರೆದು ಕುಂದು ಕೊರತೆ ಸಭೆ ಮಾಡಬೇಕು. ಇಲ್ಲಿಯವರೆಗೂ ಯಾವುದೇ ಸಭೆಯಿಲ್ಲದೆ ಯಾರು ಅಧಿಕಾರಿಗಳು, ಯಾರು ಇಂಜಿನಿಯಯರ್ ಗೊತ್ತಾಗುತ್ತಿಲ್ಲ. ಜವಾಬ್ದಾರಿಯುತ ಇಂಜಿನಿಯರ್ 6 ತಿಂಗಳು ರಜಾ ಇದ್ದಾರೆ. ಅದಕ್ಕೆ ಸರಕಾರ ಹೊಸ ಇಂಜಿನಿಯರ್ ಅವರನ್ನು ನೇಮಕ ಮಾಡಬೇಕು ಎಂದು ರೈತ ಮುಖಂಡ ಕೃಷ್ಣಪ್ಪ ಆಗ್ರಹಿಸಿದರು.

ಮನವಿ ಸಲ್ಲಿಸುವ ವೇಳೆ ಮಾರೆಣ್ಣ, ತಿಮ್ಮಪ್ಪ, ಚಿನ್ನ ರಾಯುಡು, ಯರ್ರಿ ಸ್ವಾಮಿ ಅನೇಕರು ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

Download Eedina App Android / iOS

X