ಸಿಂದಗಿ | ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ಯಾರೇಜ್ ಮಾಲೀಕರು, ಕಾರ್ಮಿಕರಿಂದ ಪ್ರತಿಭಟನೆ

Date:

Advertisements

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಟಿಪ್ಪು ಸುಲ್ತಾನ್ ಅಂಜುಮನ್ ಗ್ಯಾರೇಜ್ ಲೈನ್ ಮಾಲೀಕರು-ಕಾರ್ಮಿಕರ ಸಂಘ ಹಾಗೂ ಸಿಐಟಿಯು ಸಂಘಟನೆ ವತಿಯಿಂದ ವಿಜಯಪುರ ಜಿಲ್ಲೆಯ ಸಿಂದಗಿ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.

ಆ ಬಳಿಕ ತಹಶೀಲ್ದಾರ್ ಮುಖಾಂರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಣ್ಣಾರಾಯ ಇಳಗೆರಿ ಮಾತನಾಡಿ, ಸಿಂದಗಿ ನಗರದಲ್ಲಿ ಇರುವ ಮುಸ್ಲಿಂ ಸಮಾಜ ಖಬರಸ್ಥಾನಕ್ಕೆ ಹೊಂದಿಕೊಂಡು ಅಂಜುಮನ ಜಾಗದಲ್ಲಿ ಕಳೆದ 35 ರಿಂದ 40 ವರ್ಷಗಳಿಂದ ಇದ್ದಾರೆ. ಬಡ ಮುಸ್ಲಿಂ ಹಾಗೂ ಹಿಂದು ಜನರು ಗುಡಿಸಲು, ಶೆಡ್ಡುಗಳು ಕಚ್ಚಾ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಹಲವಾರು ಕುಟುಂಬಗಳು ತಮ್ಮ ಕುಟುಂಬ ನಿರ್ವಹಣೆಗೆ ಸಣ್ಣಪುಟ್ಟ ಬೀಡಾ ಅಂಗಡಿ, ಚಹಾ ಅಂಗಡಿ, ಪಂಚರ್ ಅಂಗಡಿ, ಗ್ಯಾರೇಜ್ ಗಳು, ಫ್ಯಾಬ್ರಿಕೆಟಿಂಗ ಅಂಗಡಿಗಳು ಹೀಗೆ ಹಲವಾರ ರೀತಿಯ ಕಸಬುಗಳನ್ನು ಮಾಡುತ್ತಾ ತಮ್ಮ ಕುಟುಂಬ ನಿರ್ವಣೆ ಮಾಡಿಕೊಂಡು ಬಂದಿದ್ದಾರೆ. ಸದರಿ ನಿವೇಶನ ಬಿಟ್ಟರೆ ಬೇರೆ ಯಾವುದೆ ರೀತಿಯ ಆಸ್ತಿ ಇರುವುದಿಲ್ಲ. ಈಗ ಇರುವ ಜಾಗದಲ್ಲಿ ಕಷ್ಟಪಟ್ಟು ದುಡಿದು ಜೀವನ ಸಾಗಿಸುವ ಜನರಿದ್ದಾರೆ” ಎಂದು ತಿಳಿಸಿದರು.

ಅನೇಕ ಜನ ಯುವಕ ಯುವತಿಯರು ವಿದ್ಯಾವಂತರಾಗಿದ್ದಾರೆ. ಕಂಪನಿಗಳಲ್ಲಿ ಆಗಲಿ ಸರಕಾರದಲ್ಲಾಗಲಿ ಯಾವುದೆ ಕೆಲಸ ಸಿಗದೆ ಇದ್ದುದರಿಂದ ಆನಿವಾರ್ಯವಾಗಿ ಅಂಗಡಿಗಳು ಗ್ಯಾರೇಜ್ ಹಾಕಿಕೊಂಡು ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದಾರೆ. ಆದರೆ ಕಳೆದ ಒಂದು ತಿಂಗಳ ಹಿಂದೆ ಯಾರೋ ಕೆಲವರು ಬಂದು “ನಾವು ಮುಸ್ಲಿಂ ಕಬರಸ್ಥಾನ ಕಮಿಟಿಯವರು. ಈ ಜಾಗ ನಮ್ಮದು. ಈ ಜಾಗ ಖಾಲಿ ಮಾಡಬೇಕು. ಇಲ್ಲದೆ ಹೋದರೆ ಪೊಲೀಸರನ್ನು ಕರೆ ತಂದು ನಿಮ್ಮನ್ನು ಇಲ್ಲಿಂದ ಕಿತ್ತು ಹಾಕುತ್ತೇವೆ. ಕೋರ್ಟ್ ಆದೇಶವಿದೆ. ನಿಮ್ಮನಯ ಜೈಲಿಗೆ ಕಳಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ” ಎಂದರು.

Advertisements
1001346178

ಹೀಗಾಗಿ ಸರಕಾರದ ಅಥವಾ ಸಂಬಂಧಪಟ್ಟವರು ಸರಕಾರಿ ಕಾನೂನ ಅನುಸಾರ ಸದರಿ ನಿವೇಶನವನ್ನು ಖಾಯಂ ಆಗಿ ಮಂಜೂರು ಮಾಡಬೇಕು. ಇಲ್ಲವೆ ಭೂ ಬಾಡಿಗೆ ಮಂಜೂರು ಮಾಡಬೇಕು ಎಂದು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.

ಈ ಹೋರಾಟಕ್ಕೆ ದಲಿತ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್.ಎ.ಸಿಂದಗಿಕರ ಹಾಗೂ ಮುಸ್ಲಿಂ ಮುಖಂಡರಾದ ರಹೀಮ ದುದನಿಯವರು ಬೆಂಬಲಿಸಿದರು.

ಈ ಸಂದರ್ಭದಲ್ಲಿ ಜಾಫರ್ ಇನಾಮಾದಾರ, ಇಬ್ರಾಹಿಂ ಸುತರಾ, ಬಶೀರ್ ಸಾಬ್ ಕಡಗಿ, ಸೈನಾಜಾ ಬಾಗವಾನ, ರಾಜು ಮುಲ್ಲಾ, ಪ್ರತಿಭಾ ಕೊರಡಗಿ, ಸರಸ್ವತಿ ಮಠ, ರಮೇಶ ತಳವಾರ ಇತರರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X