ಬಿಹಾರದಲ್ಲಿ ಗಂಗಾ ನದಿಯ ಮೇಲೆ ನಿರ್ಮಿಸಲಾಗುತ್ತಿದ್ದ ಸೇತುವೆಯ ಒಂದು ಭಾಗವು ಶನಿವಾರ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗುವಾನಿ-ಸುಲ್ತಂಗಂಜ್ ನಡುವೆ ಸಂಪರ್ಕ ಒದಗಿಸುವ ಉದ್ದೇಶದಿಂದ ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿತ್ತು. ಸೇತುವೆಯ ಸ್ಲ್ಯಾಬ್ ಬೆಳಿಗ್ಗೆ 8 ಗಂಟೆ ಸುಮಾರಿಗೆ ಕುಸಿದುಬಿದ್ದಿದೆ ಎಂದು ಖಗಾರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
“ನಿರ್ಮಾಣ ಹಂತದಲ್ಲಿರುವ ಸೇತುವೆಯ ಸಂಪೂರ್ಣ ರಚನೆಯು ದೋಷಪೂರಿತವಾಗಿದೆ. ಅದನ್ನು ಗುತ್ತಿಗೆದಾರರು ಕೆಡವಬೇಕೆಂದು ನಾವು ಸೂಚಿಸಿದ್ದೇವೆ. ಈಗಾಗಲೇ ಅಲ್ಲಿ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಗುತ್ತಿಗೆದಾರರು ಸೇತುವೆಯನ್ನು ಕೆಡವುತ್ತಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ” ಎಂದು ಹೈಕೋರ್ಟ್ ಹೇಳಿದೆ.
ಕಳೆದ ವರ್ಷ, ಸೇತುವೆಯ ನಾಲ್ಕೈದು ಪಿಲ್ಲರ್‌ಗಳು ಕುಸಿದು ಇಡೀ ಭಾಗವು ನದಿಗೆ ಉರುಳಿತ್ತು.
ಕಳೆದ ತಿಂಗಳು ಬಿಹಾರದಲ್ಲಿ ಭಾರೀ ಮಳೆಯಾಗಿದ್ದು, ಬರೋಬ್ಬರಿ 17 ಸೇತುವೆಗಳು ಕುಸಿದು ಬಿದ್ದಿವೆ. ಎಲ್ಲ ಪ್ರಕರಣಗಳಲ್ಲಿ ಬಿಹಾರ ಸರ್ಕಾರ ಕನಿಷ್ಠ 15 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿವೆ.
ಜೂನ್ 18 ರಂದು ನೇಪಾಳದ ಗಡಿಯಲ್ಲಿರುವ ಅರಾರಿಯಾ ಜಿಲ್ಲೆಯ ಸಿಕ್ತಿ ಪ್ರದೇಶದ ಪಾಡ್ಕಿಯಾ ಘಾಟ್‌ನಲ್ಲಿ ಮೊದಲ ಸೇತುವೆ ಕುಸಿದಿದೆ. ಅದಾದ ಬಳಿಕ, ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಲ್ಲಿ 17 ಸೇತುವೆಗಳು ಕುಸಿದಿದೊದ್ದವು. ಅವುಗಳಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರು ಸೇತುವೆಗಳು ಸೇರಿವೆ.