ಹೊಲದಲ್ಲಿ ದನಗಳನ್ನು ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಸಾವಿಗೀಡಾಗಿದ್ದ ದೇವದುರ್ಗ ತಾಲೂಕಿನ ಮೂಡಲಗುಂಡ ಗ್ರಾಮದ ರೈತ ಬಸವರಾಜ ಕುಟುಂಬಕ್ಕೆ ಶಾಸಕಿ ಕರೆಮ್ಮಾ ಜಿ.ನಾಯಕ ₹5 ಲಕ್ಷ ಪರಿಹಾರ ಚೆಕ್ ವಿತರಿಸಿದರು.
ಆಗಸ್ಟ್ 16 ರಂದು ಸುರಿದ ಗುಡುಗು ಸಹಿತ ಮಳೆಗೆ ರೈತ ಬಸವರಾಜ (33) ಎಂಬುವರು ಸಾವನ್ನಪ್ಪಿದ್ದರು.
ವಿಷಯ ತಿಳಿದು ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಭೇಟಿ ನೀಡಿ, ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿ ಕುಟುಂಬದ ಸದಸ್ಯರಿಗೆ ಸರ್ಕಾರದ ₹5 ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಇಒ ಬಸವರಾಜ ಹಟ್ಟಿ, ಕಂದಾಯ ನಿರೀಕ್ಷಕ ದೇವರೇಡ್ಡಿ ಹಾಗೂ ಮುಖಂಡರಾದ ಸಿದ್ದನಗೌಡ ಮೂಡಲಗುಂಡ, ರಾಮಣ್ಣ ನಾಯಕ, ಮದರಕಲ್, ರೇಣುಕಾ ಎಂ. ಸ್ವಾಮಿ, ಲಕ್ಷ್ಮಣ ಊಟಿ, ಬಾಲಯ್ಯ, ಸೇರಿದಂತೆ ಇತರರಿದ್ದರು.