ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಆಗಸ್ಟ್ 29ರವರೆಗೆ ಮುಂದೂಡಿಕೆ ಮಾಡಿದೆ.
ಜೊತೆಗೆ ಆಗಸ್ಟ್ 29ರವರೆಗೆ ವಿಚಾರಣೆ ಮುಂದೂಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ಇದನ್ನು ಓದಿದ್ದೀರಾ? ಮುಡಾ ಪ್ರಕರಣ | ನನ್ನ ಆತ್ಮಸಾಕ್ಷಿ ಸ್ಪಷ್ಟವಾಗಿದ್ದು, ನಾನು ಯಾವ ತಪ್ಪನ್ನೂ ಎಸಗಿಲ್ಲ: ಸಿದ್ದರಾಮಯ್ಯ
ಸಿಎಂ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಕೈಗೆತ್ತಿಕೊಳ್ಳುತ್ತಿದ್ದಂತೆ ರಾಜ್ಯಪಾಲರ ಪರ ವಾದ ಹಾಜರಾದ ವಕೀಲ ತುಷಾರ್ ಮೆಹ್ತಾ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದ್ದರು.
“ರಾಜ್ಯಪಾಲರ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಲಾಗಿತ್ತು. ಶೋಕಾಸ್ ನೋಟಿಸ್ ಹಿಂಪಡೆಯುವ ಸಲಹೆಯನ್ನು ರಾಜ್ಯ ಸಂಪುಟವು ಆಗಸ್ಟ್ 1ರಂದು ನೀಡಿದೆ. ಆದರೆ ಸಲಹೆಯನ್ನು ಧಿಕ್ಕರಿಸಿ ರಾಜ್ಯಪಾಲರು ಈ ನಿರ್ಧಾರ ಮಾಡಿದ್ದು, ಅಸಾಂವಿಧಾನಿಕವಾಗಿದೆ. ರಾಜ್ಯಪಾಲರು ಕಾನೂನಿನ ಎಲ್ಲಾ ಅಂಶಗಳನ್ನು ಗಾಳಿಗೆ ತೂರಿ ಆದೇಶ ಮಾಡಿರುವುದರಿಂದ ಅದನ್ನು ವಜಾ ಮಾಡಬೇಕು” ಎಂದು ಸಿಎಂ ಪರ ವಕೀಲರು ಮನು ಸಿಂಘ್ವಿ ವಾದಿಸಿದ್ದಾರೆ.
“ಅತ್ಯುನ್ನತ ಸ್ಥಾನದಲ್ಲಿರುವ ಹಲವರ ವಿರುದ್ಧ ಅಭಿಯೋಜನಾ ಮಂಜೂರಾತಿ ಕೋರಿರುವ ಅರ್ಜಿಗಳು ವರ್ಷಗಳಿಂದ ಬಾಕಿಯಿದೆ. ಹಾಗಿರುವಾಗ ರಾಜ್ಯಪಾಲರು ತಮ್ಮ ವಿಚಾರದಲ್ಲಿ ಶರವೇಗದಲ್ಲಿ ನಿರ್ಧಾರ ಕೈಗೊಂಡಿರುವುದು ಪಕ್ಷಪಾತದಿಂದ ಕೂಡಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಸಿಎಂ ರಾಜೀನಾಮೆ ನೀಡುವಂತೆ ಮಾಡಲು ಈ ದೂರು ನೀಡಲಾಗಿದೆ” ಎಂದು ವಕೀಲರು ಆರೋಪಿಸಿದರು.
ಇನ್ನು ಈ ರಿಟ್ ಅರ್ಜಿ ಪ್ರತಿ ಇಂದು ಬೆಳಿಗ್ಗೆಯಷ್ಟೆ ಲಭ್ಯವಾದ ಕಾರಣ ವಾದ ಮಂಡಿಸಲು ಹೆಚ್ಚಿನ ಕಾಲಾವಕಾಶ ಬೇಕು. ಆದ್ದರಿಂದಾಗಿ ವಿಚಾರಣೆಯನ್ನು ಮುಂದೂಡಬೇಕು ಎಂದು ರಾಜ್ಯಪಾಲರ ಪರ ವಕೀಲರು ಪ್ರಕರಣದ ಆರಂಭದಲ್ಲಿಯೇ ಮನವಿ ಮಾಡಿದ್ದಾರೆ. ಹಾಗೆಯೇ ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡಬೇಡಿ ಎಂದೂ ಸಾಲಿಟರಲ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದ್ದಾರೆ.
#Breaking Relief for Karnataka CM @siddaramaiah by Karnataka High Court in the MUDA Scam
— Bar and Bench (@barandbench) August 19, 2024
Karnataka High Court ORDERS deferment of proceedings before the Special Court against Karnataka Chief Minister Siddaramaiah till the next date of hearing (August 29th)#Siddaramaiah