ರಾಜ್ಯಪಾಲರ ಮೂಲಕ ಕೇಂದ್ರದ ಪ್ರಾಯೋಜಿತ ಪ್ರಜಾಪ್ರಭುತ್ವ ಕಗ್ಗೊಲೆ ನಿಲ್ಲಲಿ: ಪ್ರಜ್ಞಾವಂತರ ಆಗ್ರಹ

Date:

Advertisements

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೂಡಿರುವ ಸಂವಿಧಾನ ವಿರೋಧಿ ಬಿಜೆಪಿ ಮತ್ತು ರಾಜ್ಯಪಾಲರ ಕುತಂತ್ರಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಪ್ರಜ್ಞಾವಂತ ವಲಯ ಹೇಳಿದೆ.

ರಾಜ್ಯಪಾಲರ ನಡೆ ಖಂಡಿಸಿ ಸಹಿ ಚಳವಳಿ ನಡೆಸಿರುವ ಪ್ರಜ್ಞಾವಂತ ವಲಯ, “ರಾಜ್ಯಪಾಲರ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರವನ್ನು ರಾಜಕೀಯ ಕುತಂತ್ರದಿಂದ ಅಸ್ಥಿರಗೊಳಿಸಿ ಕೇಂದ್ರ ಸರ್ಕಾರ ಮುಂದಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಕೇಂದ್ರ ಸರ್ಕಾರದ ನಡೆಯನ್ನು ಪ್ರಜ್ಞಾವಂತರಾದ ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ” ಎಂದು ಸುಮಾರು 200 ಹೆಚ್ಚು ಜನ ಸಾಹಿತಿಗಳು, ಪ್ರಾಧ್ಯಾಪಕರು, ಚಿಂತಕರು, ಶಿಕ್ಷಣ ತಜ್ಞರು ಹಾಗೂ ಪತ್ರಕರ್ತರು ಸಹಿ ಮಾಡಿದ್ದಾರೆ.

“ತಪ್ಪು ಮಾಡಿದವರಿಗೆ ನೆಲದ ಕಾನೂನಿನ ರೀತಿ ಶಿಕ್ಷೆಯಾಗುವುದನ್ನು ಒಪ್ಪುತ್ತಲೇ,ಅದನ್ನು ರಾಜಕೀಯವಾಗಿ ಬಳಸಿಕೊಂಡು ವಾಮ ಮಾರ್ಗದಿಂದ ಚುನಾಯಿತ ಸರ್ಕಾರಗಳನ್ನು ಬೀಳಿಸುವ ಎಲ್ಲ ಬಗೆಯ ಹುನ್ನಾರಗಳನ್ನು ಬಹಿರಂಗಗೊಳಿಸಬೇಕಿದೆ” ಎಂದು ಹೇಳಿದ್ದಾರೆ.

Advertisements

“ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮುಕ್ತ ಜನಪರ ಆಡಳಿತ ನಡೆಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದ್ದು , ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಏಕೈಕ ಮಾರ್ಗವಾಗಿದೆ ಎಂದು ನಾವು ಬಲವಾಗಿ ನಂಬಿದ್ದೇವೆ” ಎಂದು ಪ್ರಜ್ಞಾವಂತ ವಲಯ ಹೇಳಿದೆ.

“ಎಲ್ಲ ಬಗೆಯ ಭ್ರಷ್ಟಾಚಾರಣಕ್ಕೆ ಕಾರಣವಾಗಿರುವ ಭ್ರಷ್ಟ ಚುನಾವಣಾ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಿ ಸುಧಾರಣೆಗಳನ್ನು ತರಲು ಸರ್ಕಾರಗಳು ಕ್ರಮವಹಿಸಬೇಕು” ಎಂದು ಇದೇ ವೇಳೆ ಆಗ್ರಹಿಸಲಾಗಿದೆ.

ಪ್ರೊ. ನಿರಂಜನಾರಾಧ್ಯ ವಿ ಪಿ ಬೆಂಗಳೂರು, ಬಸವರಾಜ ಸೂಳಿಭಾವಿ ಗದಗ, ರಂಜಾನ್ ದರ್ಗಾ ಧಾರವಾಡ, ಡಾ. ಎಚ್ ಎಸ್ ಅನುಪಮಾ ಕವಲಕ್ಕಿ, ನಾ ದಿವಾಕರ ಮೈಸೂರ, ಕೆ.ಶ್ರೀನಾಥ್ ಬೆಂಗಳೂರ, ಡಿ.ಉಮಾಪತಿ ದೆಹಲಿ, ಡಾ ವಿಜಯಾ ಬೆಂಗಳೂರ, ಎಂ.ಅಬ್ದುಲ್ ರೆಹಮಾನ್ ಪಾಷ ಬೆಂಗಳೂರ, ಜಿ ಪಿ ಬಸವರಾಜು ಮೈಸೂರ, ಬಿ. ಸುರೇಶ ಬೆಂಗಳೂರ, ಕೆ. ಪಿ. ಸುರೇಶ್ ಬೆಂಗಳೂರ ಸೇರಿದಂತೆ ನೂರಾರು ಜನರು ಸಹಿ ಚಳವಳಿಯಲ್ಲಿ ಭಾಗಿಯಾಗಿದ್ದಾರೆ.

    eedina
    ಈ ದಿನ ಡೆಸ್ಕ್‌
    Website |  + posts

    ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

    ಪೋಸ್ಟ್ ಹಂಚಿಕೊಳ್ಳಿ:

    LEAVE A REPLY

    Please enter your comment!
    Please enter your name here

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

    ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

    ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

    ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

    ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

    ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

    Download Eedina App Android / iOS

    X