ಕೊಪ್ಪಳ ಜಿಲ್ಲೆಯ ಸಂಗನ ಹಾಲ ಗ್ರಾಮದಲ್ಲಿ ಕ್ಷೌರ ನಿರಾಕರಿಸಿ ಕೊಲೆ ಮಾಡಿದ ಮುದುಕಪ್ಪ ಹಡಪದ್ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ತಹಶೀಲ್ದಾರ್ ಗ್ರೇಡ್ 2 ವೆಂಕಟೇಶ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳು ಗತಿಸಿದರು ಇನ್ನೂ ಕೂಡ ಅಸ್ಪೃಶ್ಯತೆ ಎಂಬುದು ನಿವಾರಣೆ ಆಗದೆ ಇನ್ನೂ ಜೀವಂತವಾಗಿದೆ, ಇನ್ನೂ ಕೂಡ ಕೆಲ ಜಿಲ್ಲೆಗಳಲ್ಲಿ ಅಸ್ಪೃಶ್ಯರಿಗೆ ಇದುವರೆಗೂ ಗುಡಿ -ಗುಂಡಾರಗಳಲ್ಲಿ , ಚಹಾ ಹೋಟೆಲ್ಗಳಲ್ಲಿ, ಮತ್ತು ಅತಿ ಹೆಚ್ಚು ದಲಿತ ಅತ್ಯಾಚಾರ ಕೊಲೆ ಸುಲಿಗೆಯ ಘಟನೆಗಳು ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು .
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನ ಹಾಲ ಗ್ರಾಮದಲ್ಲಿ ಸೆಲ್ಯೂನ್ ಅಂಗಡಿಗೆ ತೆರಳಿದ ದಲಿತ ಯುವಕನಿಗೆ ನೀನು ಕೆಳ ಜಾತಿಯವನು ನಾನು ಮಾಡುವುದಿಲ್ಲ ಜಾತಿ ನಿಂದನೆ ಮಾಡಿ, ನಂತರ ಕೊಲೆ ಮಾಡಿದ್ದಾನೆ . ತೀವ್ರ ಕಡು ಬಡತನದಿಂದ ನರಳುತ್ತಿದ್ದ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು . ಕೊಲೆ ಮಾಡಿದ ಆರೋಪಿಯ ಆಸ್ತಿ ಸರ್ಕಾರ ಮುಟ್ಟುಗೊಲು ಹಾಕಬೇಕು, ನೊಂದ ಕುಟುಂಬಕ್ಕೆ ಪೊಲೀಸ್ ಬಂದೋಬಸ್ತ್ ನೀಡಬೇಕು ಎಂದು ಒತ್ತಾಯಿಸಿದರು .
ಜಿಲ್ಲೆಯ ಎಲ್ಲಾ ದಲಿತ ಕಾಲೋನಿಗಳಿಗೆ ಪೊಲೀಸ್ ರಕ್ಷಣೆ ನೀಡಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು , ಜಾಗೃತ ಮೂಡಿಸಬೇಕು ಎಂದು ಮನವಿ ಮಾಡಿದರು.
.ಈ ಸಂದರ್ಭದಲ್ಲಿ ಎಮ್ ಆರ್ ಎಚ್ ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ, ಗೌರವ ಸಲಹೆಗಾರ ಬಸವರಾಜ (ಜಯಂ) ಮಸರಕಲ್, ಬುರಪ್ಪ ಮರೆಡ್ಡಿ, ವಿಜಯಕುಮಾರ್ ಬಲ್ಲಿದವ್, ಸೇರಿದಂತೆ ಇತರರು ಇದ್ದರು
ವರದಿ :ಶಿವರಾಮ ಕಟ್ಟಿಮನಿ
