ನನ್ನೂರಿನ ಅರಸು | ಹುಟ್ಟಿದ ಮಣ್ಣಿಗೂ, ಮೆಟ್ಟಿದ ಮಣ್ಣಿಗೂ ಕೀರ್ತಿ ತಂದವರು

Date:

Advertisements

ನನ್ನೂರಿನ ಮಣ್ಣಲಿ ಹುಟ್ಟಿದ, ನನ್ನೂರಿನ ಮಣ್ಣನ್ನು ಮೆಟ್ಟಿದ ಸಮ ಸಮಾಜದ ಹರಿಕಾರ, ಜೀತಗಾರಿಕೆ ತೊಲಗಿಸಿ, ತಲೆ ಮೇಲೆ ಮಲ ಹೊರುವ ಅನಿಷ್ಟ ತೊಡೆದ ನಾಯಕ ಡಿ ದೇವರಾಜ ಅರಸು.

ಸಾಮಾಜಿಕ ನ್ಯಾಯದ ಪರಿಕಲ್ಪನೆ ಅರಸು ಅವರ ಆಡಳಿತ. ಹಿಂದುಳಿದ ವರ್ಗಗಳು ಬಸವಳಿದ ಸಮಯದಲ್ಲಿ ಆಸರೆಯಾಗಿ ನಿಂತ ನೇತಾರ. ಅಸ್ಪೃಶ್ಯತೆ, ಜಾತಿಯ ಪಿಡುಗನ್ನು ತೊಲಗಿಸುವ ಗಟ್ಟಿತನಕ್ಕೆ ಮುಂದಾದ ಏಕೈಕ ಮುಖ್ಯಮಂತ್ರಿ.

ಈ ದಿನ.ಕಾಮ್ ವರದಿಗಾರನಾಗಿ ಹೆಮ್ಮೆಯಿಂದ ರಾಜ್ಯದಲ್ಲಿ ಗಟ್ಟಿಯಾಗಿ ಕೂಗಿ ಹೇಳುವ ಮಾತೊಂದು ಅಂದರೆ ಅದುವೆ ಡಿ ದೇವರಾಜ ಅರಸು ಹುಟ್ಟಿದ ನೆಲ ಪಿರಿಯಾಪಟ್ಟಣದ ಬೆಟ್ಟದ ತುಂಗ. ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಕಳೆದ ಬಾರಿಯ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಇದೇ ಊರನ್ನು ದತ್ತು ಪಡೆದು ಅಭಿವೃದ್ಧಿಗೆ ಮುಂದಾಗಿದ್ದರು. ಆದರೆ, ನಿರೀಕ್ಷಿತ ಅಭಿವೃದ್ಧಿ ಕೆಲಸಗಳಾಗಿಲ್ಲ ಅನ್ನುವುದು ಮಾತ್ರ ವಾಸ್ತವ.

Advertisements

ಅಂದಿನ ರಾಜಕೀಯದಲ್ಲಿ ದಲಿತರ, ಶೋಷಿತರ, ಬಡವರ ಬಗ್ಗೆ ಕಾಳಜಿ, ದೂರದೃಷ್ಟಿ ಹೊಂದಿದ್ದ ಅರಸು, ಜನರ ಕಲ್ಯಾಣಕ್ಕಾಗಿ ಬಹಳ ಯೋಜನೆಗಳನ್ನ ರೂಪಿಸಿ ಜನರಿಗೆ ತಲುಪುವಂತೆ ಮಾಡಿದ ಕೀರ್ತಿ. ಇವತ್ತಿಗೂ ಮುಂದಕ್ಕೂ ಅರಸು ಚಿರಸ್ಮರಣೀಯ.

ಪಿರಿಯಾಪಟ್ಟಣ ತಾಲೂಕು ಬೆಟ್ಟದ ತುಂಗಾ ಗ್ರಾಮದ ಹುಲ್ಲಟ್ಟಿ ದೇವರಾಜ ಅರಸ್ ಹಾಗೂ ದೇವರಮ್ಮಣಿ ಅವರ ಮೊದಲ ಪುತ್ರ 8 ನೆಯ ವಯಸ್ಸಿನವರೆಗೂ ಸದರಿ ಗ್ರಾಮದಲ್ಲೇ ವಿದ್ಯಾಭ್ಯಾಸ ನೆರವೇರಿಸಿದರು. ಸೋದರ ಸಂಬಂಧಿ ಹುಣಸೂರಿನ ಕಲ್ಲಹಳ್ಳಿ ನಿವಾಸಿ ಪದ್ಮರಾಜೆ ಅರಸ್ ಹಾಗೂ ಗೌರಮ್ಮಣ್ಣಿ ದಂಪತಿಗಳಿಗೆ ಮಕ್ಕಳಿರದ ಕಾರಣ ದತ್ತು ಮಗನಾಗಿದ್ದರು. ಇದು ಅರಸು ಜೀವನ ವೃತ್ತಾಂತ.

ಅರಸು ಅವರ ವರ್ಚಸ್ಸು ಬೆಳೆದೆಂತೆಲ್ಲ ಕಲ್ಲಳ್ಳಿ ಹೋಗಿ ಅವರೆಸರಿನೊಡನೆ ಅರಸು ಕಲ್ಲಳ್ಳಿಯಾಗಿ ಹುಣಸೂರು ಸಂಪೂರ್ಣವಾಗಿ ಆವರಿಸಿಕೊಂಡಿದ್ದು. ದೇವರಾಜ ಅರಸರು 1979 ನವೆಂಬರ್ 20 ರಲ್ಲಿ ಬೆಟ್ಟದತುಂಗಕ್ಕೆ ಭೇಟಿ ಕೊಟ್ಟಾಗ ಜನರು ಶಿಲಾಶಾಸನ ಬರೆಸಿ ಗರಡುಗಂಬ ಸ್ಥಾಪಿಸಿದ್ದಾರೆ. ಅದು ಇಂದಿಗೂ ಇದೆ.

ಎರಡು ಬಾರಿ ಮುಖ್ಯಮಂತ್ರಿಗಳಾಗಿ ಸುಮಾರು 8 ವರ್ಷಗಳ ಕಾಲ ಆಳ್ವಿಕೆ ನಡೆಸಿ ಜನಮಾನಸದಲ್ಲಿ ನೆಲೆ ನಿಂತವರು .ಈಗಲೂ ಹುಣಸೂರಿನ ಪಕ್ಷಿರಾಜಪುರ, ಟೈಗರ್ ಬ್ಲಾಕ್ ಸೇರಿದಂತೆ ಹಲವು ಗ್ರಾಮಗಳ ಆದಿವಾಸಿಗಳಿಗೆ ನೆಲೆ ಒದಗಿಸಿ, ಜೀವನ ಕಟ್ಟಿಕೊಟ್ಟ ಕೀರ್ತಿ ಅರಸು ಅವರಿಗೆ ಸಲ್ಲಬೇಕು. ಇಂದಿಗೂ ಈ ಜನರಿಗೆ ಅರಸು ಅಂದ್ರೆ ಅದೇನೋ ಅಪರಿಮಿತವಾದ ಅಭಿಮಾನ. ಇಂದು ಕೂಡ ಅರಸು ಅವರ ನೆನೆದೇ ಮತ ಹಾಕುವ ಮಟ್ಟಿಗೆ ಮನವನ್ನಾವರಿಸಿದ್ದಾರೆ.

WhatsApp Image 2024 08 20 at 8.32.19 AM

ಹುಣಸೂರು ಅಂದ್ರೆ ಅರಸು ರಾಜಕಾರಣ, ಆದರೆ, ಆದೆ ಹುಣಸೂರಿನಲ್ಲಿ ಅರಸು ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಕೆಯಾಗದೆ ಇರುವುದು, ಅರಸು ಗೌರವಾರ್ಥ ಸ್ಮಾರಕ ಇರದಿರುವುದು ಶೋಚನೀಯ.

ಅರಸು ಭವನ ನಿರ್ಮಾಣವಾಗಿ ಐದು ವರ್ಷಗಳೇ ಕಳೆದರೂ ಲೋಕಾರ್ಪಣೆ ಆಗಲಿಲ್ಲ. ಪಿರಿಯಾಪಟ್ಟಣ , ಹುಣಸೂರಿನಲ್ಲಿ ಅರಸು ಹೆಸರು ಉಳಿಸುವ ಯಾವುದೊಂದು ಕೆಲಸ ಆಗದೆ ಇರುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ.

ಯಾರೆ ನೆನಸಲಿ, ಯಾರೆ ನೆನಸದಿರಲಿ. ಅರಸಿಗೆ ಅರಸು ಒಬ್ಬರೆ ಸರಿಸಾಟಿ ಮೈಸೂರು ರಾಜ್ಯದ, ಕರ್ನಾಟಕ ಏಕೀಕರಣದ ಮುಖ್ಯಮಂತ್ರಿಗಳಾಗಿ ರಾಜ್ಯದಲ್ಲಿ ಕೈಗೊಂಡ ಕೆಲಸಗಳು ಇಂದಿಗೂ ಜನಜನಿತ. ರಾಜ್ಯದುದ್ಧಗಲಕ್ಕೂ ಅರಸು ಅರಸು ಅನ್ನುವ ಸಾಮಾಜಿಕ ಹರಿಕಾರ ಜನಿಸಿದ 109 ವರ್ಷದ ಜನ್ಮ ದಿನೋತ್ಸವದಲ್ಲಿ ಅರಸು ರಾಜಕಾರಣ ಯುವಕರಿಗೆ ಪ್ರೇರಣೆಯಾಗಬೇಕು. ಪರ್ಯಾಯ ರಾಜಕಾರಣಕ್ಕೆ ದಿಕ್ಸೂಚಿಯಾಗಬೇಕು. ಯುವ ಜನತೆ ಅರಸು ಅವರ ಆದರ್ಶ ಗುಣಗಳನ್ನ ಬೆಳೆಸಿಕೊಂಡು ರಾಜಕೀಯ ಒಲವು ಬೆಳೆಸಿಕೊಳ್ಳಬೇಕು. ಭವಿಷ್ಯದ ಭಾರತದ ಪರಿಕಲ್ಪನೆಗೆ ಅಡಿಪಾಯವಾಗಬೇಕು.

ಮಾಜಿ ಡಿವೈಎಸ್ಪಿ ಹುಣಸೂರಿನ ಮರೂರಿನವರಾದ ಸುಹೇಲ್ ಅಹಮದ್ ಈ ದಿನ.ಕಾಮ್ ಜೊತೆ ಮಾತನಾಡಿ, “ವಿದ್ಯಾರ್ಥಿ ದೆಸೆಯಲ್ಲಿ ಬಿಸಿಎಂ ಹಾಸ್ಟೆಲ್‌ನಲ್ಲಿ ನಿತ್ಯ ಊಟಕ್ಕೆ ಕೂರುವಾಗ, ಡೈನಿಂಗ್ ಹಾಲ್ನಲ್ಲಿ ಒಂದು ಫೋಟೋ ನೋಡುತಿದ್ದೆ. ಯಾರೀ ಈ ಪುಣ್ಯಾತ್ಮ. ಇವರ ಹೆಸರಿನಲ್ಲಿ ನಮ್ಮಂತವರಿಗೆ ಮೈಸೂರಿನಂತಹ ಜಿಲ್ಲೆಯಲ್ಲಿ ಉಚಿತ ಊಟ ವಸತಿ ಸೌಕರ್ಯ ಕಲ್ಪಿಸಿ, ನಾವು ಸಹಾ ಉತ್ತಮ ಶಿಕ್ಷಣ ಪಡೆಯಲು ಕಾರ ಕರ್ತರಾಗಿದ್ದಾರಲ್ಲ. ಭಾವಚಿತ್ರ ನೋಡಿದಾಗಲೆಲ್ಲ ಒಂದು ರೀತಿಯ ಗೌರವಪೂರ್ವ ಕೃತಜ್ಞತೆಯ ಭಾವ ಮೂಡುತಿತ್ತು. ಅಲ್ಲಿಯವರೆಗೆ ನನ್ನ ಅಜ್ಜಿ, ಅರಸು ಅವರ ವ್ಯಕ್ತಿತ್ವದ ಬಗ್ಗೆ ಆಗಾಗ ಹೇಳುತ್ತಿದ್ದ ಅರೆಬರೆ ವಿಷಯಗಳು ಮಾತ್ರ ತಿಳಿದಿತ್ತು” ಎಂದರು.

ಇದನ್ನು ಓದಿದ್ದೀರಾ? ಕ್ಷೌರ ಮಾಡಲು ನಿರಾಕರಿಸಿದ ಮುದುಕಪ್ಪ ಹಡಪದ್ ಆಸ್ತಿ ಮುಟ್ಟುಗೋಲು ಹಾಕಬೇಕು : ಮಾದಿಗ ಸಮುದಾಯ ಒತ್ತಾಯ

“ನಮ್ಮ ಊರಿನ ಸುತ್ತಮುತ್ತ ಇಂದು ಹಚ್ಚ ಹಸಿರಿನ ನೀರಾವರಿ ಬೆಳೆ ಬೆಳೆಯಲು ಕಾರಣೀಭೂತರು. ಅಂದಿನ ಕಾಲಘಟ್ಟದಲ್ಲಿ ಅರಸು ಆಡಳಿತದ ಅಭಿವೃದ್ಧಿ ಕೆಲಸಗಳಾದ ಕಾಲುವೆಗಳನ್ನು ಅಗೆಯಲು, ತೋಡಲು, ಲಾರಿ ಓಡಿಸುವ ಕೆಲಸಕ್ಕೆ ಅಪ್ಪಾ ಚಿಕ್ಕಪ್ಪಂದಿರು ಹೋಗುತ್ತಿದ್ದು, ಆ ಕಾಲುವೆಗಳನ್ನು ನಿರ್ಮಿಸಿದ ಬಗ್ಗೆ ಅಸ್ಪಷ್ಟವಾಗಿ ಕೇಳಿದ್ದೆ. ನಂತರ ಸಾಕಷ್ಟು ಪುಸ್ತಕಗಳ ಮೂಲಕ ಮತ್ತಷ್ಟು ಮಾಹಿತಿ ತಿಳಿದುಕೊಂಡೆ. ಸಾಲದ್ದಕ್ಕೆ ಆ ಮಹಾನ್ ವ್ಯಕ್ತಿ ನಮ್ಮ ಹುಣಸೂರು ತಾಲೂಕಿನವರು ಎಂದು ತಿಳಿದಾಗ ಪ್ರೀತಿ, ಗೌರವ, ಹೆಮ್ಮೆ ಇಮ್ಮಡಿಯಾಯಿತು. ಅವರ ಅಂದಿನ ಸೇವೆಯ ಮತ್ತು ಕೊಡುಗೆಯ ಫಲಾನುಭವಿಗಳಾದ ನಾವು ಎಷ್ಟು ನೆನೆದರೂ ಕಡಿಮೆಯೇ. ಅರಸು ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿವೆ” ಎಂದು ನೆನಪಿನ ಬುತ್ತಿ ಹಂಚಿಕೊಂಡರು.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X