ಆಸ್ತಿಗಾಗಿ ಸಹೋದರನನ್ನೇ ಸಹೋದರಿಯರು ಕೊಚ್ಚಿ ಕೊಂದ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೋನಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ರಾಘವೇಂದ್ರ (40) ಎಂದು ಗುರುತಿಸಲಾಗಿದೆ. ರಾಘವೇಂದ್ರ ಅವರ ಕಣ್ಣಿಗೆ ಖಾರದ ಪುಡಿ ಎರಚಿ ರಕ್ತ ಸಂಬಂಧಿಗಳು ಕೊಚ್ಚಿ ಕೊಂದಿದ್ದಾರೆ.

ಆಸ್ತಿಗಾಗಿ ಸಹೋದರನ ಜೊತೆ ಮೂವರು ಸಹೋದರಿಯರು ಆಗಾಗ್ಗೆ ಗಲಾಟೆ ನಡೆಸುತ್ತಿದ್ದರು. ಗುರುವಾರ ಭಾವನ ಜೊತೆಗೂಡಿ ಮೂವರು ಸಹೋದರಿಯರು ರಾಘವೇಂದ್ರ ಅವರ ಕೊಲೆ ಮಾಡಿದ್ದಾರೆ. ಮಲಗಿದ್ದಲ್ಲೇ ಕಣ್ಣಿಗೆ ಖಾರದ ಪುಡಿ ಎರಚಿ ಮನಸ್ಸೋ ಇಚ್ಚೆ ಕೊಚ್ಚಿ ಸಹೋದರನನ್ನು ಹತ್ಯೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ‘ಈ ದಿನ’ ಫಲಶೃತಿ | ಚಿಕ್ಕಮಗಳೂರಿನ ಬೆಳಗೋಡು ಅಂಗನವಾಡಿಗೆ ‘ವಿದ್ಯುತ್ ಭಾಗ್ಯ’
ಸ್ಥಳಕ್ಕೆ ಎಸ್‌ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
