ಯಾದಗಿರಿ | ಕಾಲುವೆ ಮುಚ್ಚಿ ಹಾಕಿದ ಬಗ್ಗೆ ದೂರು ನೀಡಿದರೂ ಕ್ರಮವಿಲ್ಲ; ಅಧಿಕಾರಿಗಳ ವಿರುದ್ಧ ಆರೋಪ

Date:

Advertisements

ಯಾದಗಿರಿ ಜಿಲ್ಲೆಯ ಗುರುಮಠಕಲ್ ಪುರಸಭಾ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. 81/2 ಮತ್ತು 85ರ ಮಧ್ಯೆದಲ್ಲಿ ಬರುವ ಕಾಲುವೆಯನ್ನು ದೌರ್ಜನ್ಯದಿಂದ ಮುಚ್ಚಿ ಹಾಕಿ ಪ್ಲಾಟ್‌ಗಳನ್ನು ಮಾಡಲಾಗಿದ್ದು, ಈ ಕಾಲುವೆಯನ್ನು ಯಥಾ ಸ್ಥಿತಿ ಮಾಡಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಿರು ಯಾವುದೇ ಪ್ರಯೋಜನ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಸಮಸ್ಯೆಯ ಬಗ್ಗೆ ಈ ದಿನ. ಕಾಮ್ನೊಂದಿಗೆ ಮಾತನಾಡಿರುವ ಲಾಲಪ್ಪ ತಲಾರಿ ಎಂಬುವವರು, “ಗುರುಮಠಕಲ್ ಪುರಸಭೆ ವ್ಯಾಪ್ತಿಯಲ್ಲಿರುವ ಗುರಮಿಠಕಲ್ ಗ್ರಾಮದ ಸೀಮಾಂತರದಲ್ಲಿ ಬರುವ ಮತ್ತು ಟೌನ್ ಹಾಲ್ ಹಾಗೂ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ ಪಕ್ಕದಲ್ಲಿರುವ ಕಾಲುವೆಗಳನ್ನು ದೌರ್ಜನ್ಯದಿಂದ ಮುಚ್ಚಿ ಹಾಕಲಾಗಿದೆ. ಗುರಮಿಠಕಲ್ ಪಟ್ಟಣದ ಹರಿಜನವಾಡ ಮಾರ್ಗವಾಗಿ ಧಬ್ ಧಬಿ ಜಲಪಾತದವರೆಗೆ ಹಾದು ಹೋಗುವ ಕಾಲುವೆಯ ಜಾಗದಲ್ಲಿ ಪ್ಲಾಟ್‌ಗಳನ್ನು ಮಾಡುವವರು ಸಂಪೂರ್ಣವಾಗಿ ಮುಚ್ಚಿ ಹಾಕಿದ್ದಾರೆ. ಕಾಲುವೆಯನ್ನು ಮುಚ್ಚುವುದರಿಂದ ಮಳೆ ಬಂದರೆ ಸಂಪೂರ್ಣ ಜಲಾವೃತವಾಗಿ ನದಿಯಂತೆ ನೀರು ಹರಿಯುತ್ತವೆ. ಇದರಿಂದ ಲೇಔಟ್‌ನಲ್ಲಿ ಕಟ್ಟಿರುವ ಮನೆಗಳಿಗೆ ಹಾನಿ ಆಗುತ್ತಿವೆ” ಎಂದು ದೂರಿದ್ದಾರೆ.

“ಸರ್ವೆ ನಂಬರ್‌ಗಳ ಮೇಲ್ಬಾಗದ ಜಮೀನುಗಳಲ್ಲಿ ಈಗಾಗಲೇ ನೀರು ನಿಂತಿರುತ್ತವೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನೀರು ನಿಂತು ಬೆಳೆ ನೀರಿನಲ್ಲಿ ನಾಶವಾಗುವ ಸ್ಥಿತಿ ಉಂಟಾಗುತ್ತದೆ. ಕಾಲುವೆಯಿಂದ ಹಾದು ಹೋಗುವ ನೀರನ್ನು ಪ್ರತಿದಿನ ದನ-ಕರುಗಳು ಮೇಯಲು ಹೋದಾಗ ನೀರಿನ ದಾಹವನ್ನು ತೀರಿಸಿಕೊಳ್ಳುತ್ತಿದ್ದವು. ಕಾಲುವೆ ಮುಚ್ಚಿರುವುದರಿಂದ ದನ ಕರುಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ” ಎಂದು ತಿಳಿಸಿದ್ದಾರೆ.

Advertisements

“ಸರಕಾರವು ನೀರು ಶೇಖರಣೆಗಾಗಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್, ಗ್ರಾಮ ಪಂಚಾಯತಿ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡುವ ಕಾಮಗಾರಿಗಳನ್ನು ಏರ್ಪಡಿಸಿದ್ದು, ತಿಳಿದು ಬಂದಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇವರು ಕಾಲುವೆಯನ್ನು ಮುಚ್ಚಿರುವುದು ಮತ್ತು ಸದರಿ ಕಾಲುವೆಯು ಸುಮಾರು ವರ್ಷಗಳಿಂದ ಬಂದಿದ್ದು, ಅದನ್ನು ಗಮನಿಸಿದ ಪುರಸಭೆ ಅಧಿಕಾರಿಗಳು ಕಾಲುವೆ ಮುಚ್ಚಿ ಪ್ಲಾಟ್‌ಗಳನ್ನು ಮಾಡುತ್ತಿರುವುದು ಕಂಡು ಬಂದರೂ ಯಾವುದೇ ಕ್ರಮ ಮತ್ತು ನೋಟಿಸ್ ನೀಡಿಲ್ಲ. ಕಾಲುವೆಯು ತಹಶೀಲ್ದಾರರ್ ಹಾಗೂ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯಕ್ಕೆ ಹಿಂಭಾಗದಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ನೋಡಿಯೂ ನೋಡದಂತೆ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ” ಎಂದು ಲಾಲಪ್ಪ ತಲಾರಿ ಆರೋಪಿಸಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಧಬ್ ಧಬಿ ಜಲಪಾತವು ಪ್ರವಾಸಿಗರ ತಾಣವಾಗಿದ್ದು, ಸದರಿ ಧಬಿ ಧಭಿಗೆ ಹಾದು ಹೋಗುವ ಕಾಲುವೆಯ ನೀರು ನಿಲ್ಲಿಸಿ, ಪ್ರವಾಸಿಗರ ತಾಣವನ್ನು ಸಂಪೂರ್ಣವಾಗಿ ನಾಶ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಕೂಡಲೇ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಭೇಟಿ ನೀಡಿ, ಪರಿಶೀಲನೆ ನಡೆಸಿ ನ್ಯಾಯ ಒದಗಿಸಿಕೊಡಬೇಕು. ಮುಚ್ಚಿದ ಕಾಲುವೆಯಲ್ಲಿ ಮೊದಲಿನಂತೆ ನೀರು ಹಾದು ಹೋಗುವಂತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿದ್ದೀರಾ? ತೀರ್ಥಹಳ್ಳಿ | ಪತ್ರಕರ್ತನ ಮೇಲೆ ಪೊಲೀಸ್ ಅಧಿಕಾರಿಯಿಂದ ದರ್ಪ; ಜಿಲ್ಲಾಡಳಿತಕ್ಕೆ ದೂರು

ಈ ಸಮಸ್ಯೆಯ ಬಗ್ಗೆ ಈ ದಿನ.ಕಾಮ್ ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿ ಭಾರತಿ ಅವರಿಗೆ ಕರೆ ಮಾಡಿ ಸಮಸ್ಯೆ ಕುರಿತು ವಿಚಾರಿಸಿದಾಗ, “ಸಮಸ್ಯೆಯ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಸದರಿ ಜಾಗದಲ್ಲಿ ಲೇಔಟ್‌ನಲ್ಲಿ ಯಾವುದೇ ಅಕ್ರಮ ಆಗಿಲ್ಲ. ಲೇಔಟ್ ಮಾಲೀಕರಿಗೆ ಕಾಲುವೆ ದುರಸ್ಥಿ ಮಾಡುವಂತೆ ನೋಟೀಸ್ ಕಳುಹಿಸುತ್ತೇವೆ. ಮುಂದಿನ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ” ಎಂದು ತಿಳಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X