ಪಕ್ಷ ಸಂಘಟನೆ, ನಿಸ್ವಾರ್ಥ ಸೇವೆ ಆಧಾರದಲ್ಲಿ ಕಾಂಗ್ರೆಸ್ ಮುಖಂಡ ನಂದಕುಮಾರ್ ಅವರನ್ನು ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಕೆಪಿಸಿಸಿ ಶುಕ್ರವಾರ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಮಾಹಿತಿ ಸಿಕ್ಕ ಕೂಡಲೇ ರಾಜ್ಯಾಧ್ಯಕ್ಷರನ್ನು ಸನ್ಮಾನಿಸಿದ ನೂರಾರು ಕಾರ್ಯಕರ್ತರು, ನಗರದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು.
ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ನಂದಕುಮಾರ್, ‘ಕಾರ್ಮಿಕ ಇಲಾಖೆಯ ಸಣ್ಣಪುಟ್ಟ ಲೋಪಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ನಿಷ್ಠೆಯಿಂದ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ’ ಎಂದರು.
ಬಾಲಕಾರ್ಮಿಕ ಪದ್ಧತಿ ಸಮಾಜದ ಪಿಡುಗಾಗಿದೆ. ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ. ಯಾರಾದರೂ ಬಾಲ ಕಾರ್ಮಿಕರನ್ನು ದುಡಿಸಿಕೊಂಡಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಹಿರಿಯ ನಾಯಕ ಮಂಡಿಕಲ್ ಕುಪೇಂದ್ರ ಮಾತನಾಡಿ, ಕೆಪಿಸಿಸಿಯಿಂದ ನಂದ ಕುಮಾರ್ ಅವರಿಗೆ ಅಧಿಕಾರ ಸಿಕ್ಕಿರುವುದು ಸ್ವಾಗತಾರ್ಹ ಎಂದರು.
ಪರ್ಲ್ ಸಂಸ್ಥೆಯ ನಿರ್ದೇಶಕ ಮತ್ತು ವರ್ಣ ಸೇವಾ ಟ್ರಸ್ಟಿನ ಅಧ್ಯಕ್ಷ ಜಿ.ಉಮೇಶ್ ಮಾತನಾಡಿ, ಕಿರಿಯ ವಸ್ಸಿನಲ್ಲಿ ಇಂತಹ ಅವಕಾಶ ಪಡೆದುಕೊಂಡಿರುವುದಕ್ಕೆ ನಂದಕುಮಾರ್ ಅವರ ಪ್ರಾಮಾಣಿಕ ಸೇವೆ ಕಾರಣ. ಪಕ್ಷದ ನಂಬಿಕೆಗೆ ಬದ್ಧರಾಗಿ ಉತ್ತಮ ಸೇವೆ ಸಲ್ಲಿಸಿ ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಜಮಾಅತೆ ಅಹ್ಲೇ ಇಸ್ಲಾಂ ಚುನಾವಣೆ: ಚುನಾವಣಾಧಿಕಾರಿ ಬದಲಾವಣೆಗೆ ಒತ್ತಾಯ
ಈ ವೇಳೆ ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಡ್ಯಾನ್ಸ್ ಶ್ರೀನಿವಾಸ್, ಆರ್ಯ ಅಧ್ಯಕ್ಷರು ಪರ್ಲ್ ಪೌಂಡೇಶನ್ ನ ಡಾಕ್ಟರ್ ರಜನೇಶ್, ರೂಪ ಕುಮಾರ್, ದಿನೇಶ್ ಎಸ್ ಗೌಡ, ಲಕ್ಷ್ಮಿಪತಿ, ಮಂಜುನಾಥ್, ಮೋಲ್ಡ್ ವೆಂಕಟೇಶ್, ರಾಮಚಂದ್ರಪ್ಪ, ಜಿ ಟಿ ಮಂಜುನಾಥ್, ನಾಗೇಶ್ ಗೌಡ ಹಾಗೂ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
