ಗಂಗಾವತಿ ಪಟ್ಟಣದಲ್ಲಿ ಅಳವಡಿಸಲಾದ ಬೀದಿ ದೀಪ ಕಂಬಗಳಿಗೆ ತಿರುಪತಿ ತಿಮ್ಮಪ್ಪ ನಾಮ, ಚಿಹ್ನೆ, ಗಧ ಹಾಗೂ ಬಿಲ್ಲು-ಬಾಣ ಇರುವ ಸಂಕೇತವಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ಎಸ್‌ಡಿಪಿಐ ಕಾರ್ಯಕರ್ತ ಸಲೀಂ ಆಗ್ರಹಿಸಿದ್ದಾರೆ .
ಗಂಗಾವತಿಯ ಜುಲೈ ನಗರ ವೃತ್ತದಿಂದ ಇಸ್ಲಾಂಪೂರ್ ವೃತ್ತದವರೆಗೆ ಅಳವಡಿಸಲಾದ ಒಂದು ಧರ್ಮ ಸಂಕೇತದ ವಿನ್ಯಾಸದಲ್ಲಿ ಬೀದಿ ದೀಪಗಳು ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತದೆʼ ಎಂದು ದೂರಿದರು.
ʼಗಂಗಾವತಿಯಲ್ಲಿ ಹಲವು ಬಾರಿ ಸಣ್ಣ ಸಣ್ಣ ವಿಚಾರಕ್ಕೆ ಗಲಭೆಗಳು ನಡೆದ ಕಾರಣ ಈಗಾಗಲೇ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಈ ಮಧ್ಯೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ದೀಪದ ಕಂಬ ನೆಟ್ಟಿದ್ದು ಹೊಸ ಸಂಘರ್ಷಕ್ಕೆ ಎಡೆಮಾಡಿಕೊಡುವಂತಿದೆʼ ಎಂದಿದ್ದಾರೆ.
ಈ ಬೀದಿ ದೀಪಗಳ ಪೋಟೊ, ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಇದು ಕೋಮು ಭಾವನಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬೀದಿ ದೀಪಗಳು ತೆರವುಗೊಳಿಸಲು ಮುಂದಾಗಬೇಕುʼ ಎಂದು ಆಗ್ರಹಿಸಿದರು.