ಗುಬ್ಬಿ ತಾಲೂಕಿನ ನಿಟ್ಟೂರು ಪುರ ರೈಲ್ವೆ ಗೇಟ್ ಮೇಲ್ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಕಾಮಗಾರಿ ಆರಂಭಕ್ಕೆ ಮುನ್ನ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅಲ್ಲಿನ ಸಾಧಕ ಬಾಧಕಗಳ ಕುರಿತು ಸ್ಥಳೀಯರ ಜೊತೆ ಚರ್ಚಿಸಿದರು.
ತುಮಕೂರು ಜಿಲ್ಲೆಯಲ್ಲಿ ಐದು ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಅಸ್ತು ನೀಡಿದ ಸಚಿವರು ತುಮಕೂರು, ಮಲ್ಲಸಂದ್ರ ನಂತರ ನಿಟ್ಟೂರು ರೈಲ್ವೆ ನಿಲ್ದಾಣ ಭೇಟಿ ನೀಡಿದರು. ರೈಲ್ವೆ ಮೇಲ್ಸೇತುವೆ ಪಕ್ಕದಲ್ಲಿ ಸರ್ವಿಸ್ ರಸ್ತೆಯನ್ನು ಮಾಡಲು ಅಲ್ಲಿನ ಸ್ಥಳೀಯ ರೈತರ ಸಹಕಾರಕ್ಕೆ ಮನವಿ ಮಾಡಿದರು. ಈ ಬಗ್ಗೆ ಅಲ್ಲಿನ ಮುಖಂಡರ ಜೊತೆ ಚರ್ಚೆ ನಡೆಸಿ ವಾಸ್ತವ ಅನುಕೂಲ ಬಗ್ಗೆ ಮನವರಿಕೆ ಮಾಡಿದರು.
ಮೈಸೂರು ರಸ್ತೆಯಲ್ಲಿ ಅಗತ್ಯವಿದ್ದ ಈ ರೈಲ್ವೆ ಮೇಲ್ಸೇತುವೆ ಅಂದಾಜು 600 ಮೀಟರ್ ಬರಲಿದೆ. ಪ್ರತಿ ದಿನ ಸುಮಾರು 70 ಕ್ಕೂ ಹೆಚ್ಚು ಟ್ರೈನ್ ಗಳು ಸಂಚರಿಸುವ ಈ ಮಾರ್ಗಕ್ಕೆ ರೈಲ್ವೆ ಮೇಲ್ಸೇತುವೆ ಅವಶ್ಯಕವಾಗಿ ಬೇಕಾಗಿದೆ. ಒಮ್ಮೆಲೆ ಎರಡು ಮೂರು ಟ್ರೈನ್ ಓಡಾಡುವ ವೇಳೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನಲೆ ಶೀಘ್ರ ಸೇತುವೆ ಕಾಮಗಾರಿ ಆರಂಭಿಸಲಾಗುವುದು ಎಂದರು.
ಈ ವೇಳೆ ಬಿಜಿಪಿಯ ಎಲ್ಲಾ ಮುಖಂಡರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈಲ್ವೇ ಅಧಿಕಾರಿಗಳು ಹಾಜರಿದ್ದರು.
