ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಸಿದ್ದಪ್ಪ ಸುಳ್ಳದ್ ಅವರನ್ನು ಸರ್ಕಾರ ನೇಮಕ ಮಾಡಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೆರೂರು ಗ್ರಾಮದವರಾದ ಸಿದ್ದಪ್ಪ ಸುಳ್ಳದ್ ಅವರು ಶಿಕ್ಷಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಸಾಮಾಜಿಕ ಹೊರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಜ್ಯಪಾಲರ ಸಚಿವಾಲಯದಿಂದ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿಗಳಿಗೆ ಬರೆದ ನೇಮಕಾತಿ ಪತ್ರದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಸಿದ್ದಪ್ಪ ಸುಳ್ಳದ್, ಸಿದ್ದಪ್ಪ ಮೂಲಗೆ, ಡಾ. ಶ್ರೀದೇವಿ ಎಸ್ ಕಟ್ಟಿಮನಿ, ಡಾ. ಪೀರ್‌ಜಾದ ಫಹೀಮುದ್ದೀನ್ ಬಿನ್ ಅಲಿ ಶೇರ್, ಮಲ್ಲಣ್ಣ ಎಸ್ ಮಾಡಿವಾಳ, ಉದಯ್ ಕಾಂತ್ ಸೇರಿದಂತೆ ಒಟ್ಟು ಆರು ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ಗುಲಬರ್ಗಾ ವಿಶ್ವವಿದ್ಯಾಲಯಾದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಕರ್ನಾಟಕ ವಿದ್ಯಾವಿದ್ಯಾಲಯದ ಅಧಿನಿಯಮ, 2000ರ ಪ್ರಕರಣ 28(1)(ಜಿ)ರಡಿ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಪ್ರಕರಣ 38(1)ಮತ್ತು 39(1)ರ ಉಪಬಂಧಗಳಿಗೊಳಪಟ್ಟು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ಸರ್ಕಾರದಿಂದ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ.
ಅಂತೆಯೇ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಪ್ರೊ.ಸಾಕಮ್ಮ ಬಿ, ಶಿವಕುಮಾರ ಎಂ, ಮುಸಾವೀರ್ ಬಾಷಾ ಎಂ, ಲಕ್ಷ್ಮೀಕಾಂತ ಚಿಮನೂರ, ಕೆ ಪಿ ಶ್ರೀಪಾಲ್, ಹೆಚ್ ಜಿ ಅರವಿಂದ ಸೇರಿ ಆರು ಮಂದಿ ಆಯ್ಕೆಯಾಗಿದ್ದಾರೆ. ರಾಯಚೂರು ವಿಶ್ವವಿದ್ಯಾಲಯದಿಂದ ಡಾ. ಮೀನಾಕ್ಷಿ ಖಂಡಿಮಠ, ಡಿ ಆರ್ ಚಿನ್ನ, ಜೀಶಾನ್ ಆಖಿಲ್ ಸಿದ್ದಿಖಿ ಮಾನ್ವಿ, ಶಿವಣ್ಣ ಬಿ, ಚನ್ನಬಸವ ಬಿ, ಕೆ ಪ್ರಾತಿಮಾ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕ್ಷೌರ ವಿಚಾರಕ್ಕೆ ಕೊಲೆ: ದಲಿತ ಯುವಕನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಲು ಸಿಪಿಐಎಂ ಆಗ್ರಹ
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಡಾ.ಜಯಲಕ್ಷ್ಮೀ ನಾಯಕ, ಡಾ ವೈ ಆರ್ಥೋಬ ನಾಯಕ, ಬಿ ಪೀರ್ ಬಾಷಾ, ಶಿವಕುಮಾರ್, ಡಾ.ಅಮರೇಶ ನುಗಡೋಣಿ ಸಿರಿವಾರ, ಚ ಹ ರಘುನಾಥ್ ಆಯ್ಕೆಗೊಂಡಿದ್ದಾರೆ.
ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಮಹಾಂತೇಶ ಕಂಬಾರ, ಡಾ.ಕಾವೇರಿ, ರವೀಂದ್ರ ಮಲ್ಲಪ್ಪ ನಾಯ್ಕರ್, ರಫೀಕ್ ಭಂಡಾರಿ, ಮಾರುತಿ ಮುಂಡರಗಿ, ಎಸ್ ಎಸ್ ಅಂಗಡಿ ಸೇರಿದಂತೆ ಆರು ಮಂದಿಯನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.