ಕಳ್ಳತನ ಮಾಡಿದ್ದಾರೆ ಎಂದು ಶಂಕಿಸಿ ದಲಿತ ಮಹಿಳೆ ಮತ್ತು 15 ವರ್ಷದ ಮೊಮ್ಮಗನಿಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪೊಲೀಸರು ಅಮಾನುಷವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಬ್ಬ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಘಟನೆಯ ತನಿಖೆಗೆ ಆದೇಶಿಸಲಾಗಿದೆ. ಈ ವಿಡಿಯೋ 2023ರ ಅಕ್ಟೋಬರ್‌ನಲ್ಲಿ ನಡೆದ ಘಟನೆಯದ್ದು ಎಂದು ಹೇಳಲಾಗಿದೆ.
ಜಬಲ್‌ಪುರದ ಕಟ್ನಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ನಿಲ್ದಾಣದ ಉಸ್ತುವಾರಿ ಅಧಿಕಾರಿ ಅರುಣಾ ವಗಾನೆ, ದಲಿತ ಮಹಿಳೆ ಕುಸುಮ್ ವಂಸ್ಕರ್‌ಗೆ ಕೋಲಿನಿಂದ ಹೊಡೆಯುವುದು ವಿಡಿಯೋದಲ್ಲಿ ನೋಡಬಹುದು. ಮಹಿಳೆಗೆ ಹೊಡೆದು ನಂತರ ಪ್ರಶ್ನಿಸಿದ ಆಕೆಯ ಮೊಮ್ಮಗನಿಗೂ ಥಳಿಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ಕ್ಷೌರ ವಿಚಾರಕ್ಕೆ ಕೊಲೆ: ದಲಿತ ಯುವಕನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಲು ಸಿಪಿಐಎಂ ಆಗ್ರಹ
ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಧ್ಯಪ್ರದೇಶದ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ನಾಯಕರು ಗುರಿಯಾಗಿಸಿದ್ದಾರೆ. ಈ ಘಟನೆಯು ‘ದಲಿತರ ಮೇಲಿನ ದಬ್ಬಾಳಿಕೆ’ಗೆ ಉದಾಹರಣೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ವಿಡಿಯೋ ಹಂಚಿಕೊಂಡಿದ್ದು, “ದಲಿತರ ದಬ್ಬಾಳಿಕೆಯು ಬಿಜೆಪಿಯ ದೊಡ್ಡ ಅಸ್ತ್ರವಾಗಿದೆ” ಎಂದು ಆರೋಪಿಸಿದ್ದಾರೆ. ಜೊತೆಗೆ, “ರಾಜಕೀಯ ದುರುದ್ದೇಶದ ಈ ಆಟ ನಿಲ್ಲಬೇಕು” ಎಂದು ಆಗ್ರಹಿಸಿದ್ದಾರೆ.
#कटनी जीआरपी ने झर्रा टिकुरिया के 15 साल के बालक दीपराज, उसकी दादी कुसुम वंशकार को बेरहमी से पीटा! कानून/संविधान से बड़े पुलिस के छोटे-बड़े नुमाइंदों ने यह हरकत फिर एक दलित परिवार के साथ की है!@BJP4India ने दलित उत्पीड़न को सबसे बड़ा हथियार बना लिया है! @BJP4MP सत्ता भी… pic.twitter.com/evjOBEMp6h
— Jitendra (Jitu) Patwari (@jitupatwari) August 28, 2024

Evarell samajakke kantaka ledu police suspend madi