ತೆರಿಗೆಯಲ್ಲಿ ಶೇ 60ರಷ್ಟು ಪಾಲು ಕೊಡಿ: 16ನೇ ಹಣಕಾಸು ಆಯೋಗಕ್ಕೆ ಸಿಎಂ ಒತ್ತಾಯ

Date:

Advertisements

ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿ ರಾಜ್ಯಗಳ ಬಾಬ್ತಿಗೆ ಕರ್ನಾಟಕದಿಂದ ಹೋಗುವ ಮೊತ್ತದಲ್ಲಿ ಶೇ 60ರಷ್ಟು ನಮಗೇ ವಾಪಸ್‌ ಬರಬೇಕು. ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಹಣಕಾಸು ಆಯೋಗವನ್ನು ಒತ್ತಾಯಿಸಿದರು.

ರಾಜ್ಯಗಳಿಗೆ ತೆರಿಗೆ ಪಾಲು ಮತ್ತು ಇತರ ಸಹಾಯಾನುದಾನಗಳ ಪ್ರಮಾಣ ನಿರ್ಧರಿಸುವ ಸಂಬಂಧ ರಾಜ್ಯಗಳ ಜತೆಗೆ ಸಮಾಲೋಚನಾ ಸಭೆ ಆರಂಭಿಸಿರುವ 16ನೇ ಹಣಕಾಸು ಆಯೋಗವು, ಗುರುವಾರ ರಾಜ್ಯಕ್ಕೆ ಭೇಟಿ ನೀಡಿದೆ.

ಅರವಿಂದ್ ಪನಗಡಿಯಾ ಅಧ್ಯಕ್ಷತೆಯ ಆಯೋಗದ ಜತೆಗೆ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಾವು ಕೇಂದ್ರಕ್ಕೆ ಒಂದು ರೂಪಾಯಿ ನೀಡಿದರೆ, ನಮಗೆ ವಾಪಸ್‌ ಬರುತ್ತಿರುವುದು 15 ಪೈಸೆಯಷ್ಟೆ. ಬಡ ರಾಜ್ಯಗಳಿಗೆ ನೆರವು ನೀಡಬೇಕು ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಅದಕ್ಕೆಂದು ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಡಲಾಗದು. ಉತ್ತಮವಾಗಿ ಕಾರ್ಯನಿರ್ವಹಿಸಿ, ತೆರಿಗೆ ಸಂಗ್ರಹದಲ್ಲಿ ಗುರಿ ಮುಟ್ಟಿರುವ ಕರ್ನಾಟಕದಂತಹ ರಾಜ್ಯಗಳಿಗೆ ನಷ್ಟವಾಗುವುದನ್ನು ತಡೆಯಿರಿ’ ಎಂದು ಅವರು ಒತ್ತಾಯಿಸಿದರು.

Advertisements

‘15ನೇ ಹಣಕಾಸು ಆಯೋಗವು ಕೇಂದ್ರದ ತೆರಿಗೆ ಆದಾಯದಲ್ಲಿ ಕರ್ನಾಟಕದ ಪಾಲನ್ನು ಶೇ 4.713ರಿಂದ ಶೇ 3.647ಕ್ಕೆ ಇಳಿಕೆ ಮಾಡಿತ್ತು. ಇದರಿಂದ ಐದು ವರ್ಷಗಳಲ್ಲಿ ರಾಜ್ಯಕ್ಕೆ ಸುಮಾರು ₹80,000 ಕೋಟಿ ನಷ್ಟವಾಗಿದೆ. ಈ ಅನ್ಯಾಯವನ್ನು ಸರಿ ಪಡಿಸಬೇಕು. ತೆರಿಗೆ ಪಾಲು ನಿರ್ಧರಿಸುವಲ್ಲಿ 15ನೇ ಹಣಕಾಸು ಆಯೋಗವು ಪರಿಗಣಿಸಿದ್ದ ಮಾನದಂಡಗಳನ್ನು ಪರಿಷ್ಕರಿಸಬೇಕು’ ಎಂದು ಕೋರಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೇಕೆದಾಟು ಮಧ್ಯಸ್ಥಿಕೆ ವಹಿಸದ ಕೇಂದ್ರ, ದಕ್ಷಿಣದ ರಾಜ್ಯಗಳಿಗಿದು ಸಕಾಲ

ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನಷ್ಟವಾದ ಕಾರಣ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ದತ್ತಾಂಶಗಳ ರೂಪದಲ್ಲಿ ಆಯೋಗಕ್ಕೆ ವಿವರಿಸಿದರು. ಈ ವಿವರ ಮತ್ತು ರಾಜ್ಯದ ಬೇಡಿಕೆಗಳನ್ನು ಒಳಗೊಂಡ ವರದಿಯನ್ನು ಮುಖ್ಯಮಂತ್ರಿ, ಆಯೋಗಕ್ಕೆ ಸಲ್ಲಿಸಿದರು.

ಆಯೋಗದ ಸದಸ್ಯರಾದ ಅಜಯ್‌ ನಾರಾಯಣ ಝಾ, ಅನ್ನಿ ಜಾರ್ಜ್‌ ಮ್ಯಾಥ್ಯೂ, ಮನೋಜ್‌ ಪಾಂಡಾ ಮತ್ತು ಸೌಮ್ಯಕಾಂತಿ ಘೋಷ್‌ ಸಭೆಯಲ್ಲಿ ಇದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಇದ್ದರು.

‘ಎಲ್ಲದಕ್ಕೂ ಕೇಂದ್ರ ಬದ್ಧವಾಗಿರಬೇಕಿಲ್ಲ’: ಅರವಿಂದ್ ಪನಗಡಿಯಾ

‘ತೆರಿಗೆ ಆದಾಯದಲ್ಲಿನ ಪಾಲಿಗೆ ಸಂಬಂಧಿಸಿದಂತೆ ಆಯೋಗವು ಮಾಡುವ ಶಿಫಾರಸಿಗೆ ಮಾತ್ರ ಕೇಂದ್ರ ಸರ್ಕಾರ ಬದ್ಧವಾಗಿರಬೇಕು. ಸಂಚಿತ ನಿಧಿಯಿಂದ ಅನುದಾನ ನೀಡುವಂತೆ ಮಾಡುವ ಶಿಫಾರಸನ್ನು ಕೇಂದ್ರ ಸರ್ಕಾರ ಪಾಲಿಸಲೇಬೇಕು ಎಂದೇನೂ ಇಲ್ಲ’ ಎಂದು ಅರವಿಂದ್‌ ಪನಗಡಿಯಾ ಹೇಳಿದರು.

ಕರ್ನಾಟಕಕ್ಕೆ ಸಹಾಯಾನುದಾನದ ರೂಪದಲ್ಲಿ ₹5,495 ಕೋಟಿ ನೀಡುವಂತೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ಪಾಲಿಸಲಿಲ್ಲ. ನೀವು ಮಾಡುವ ಶಿಫಾರಸುಗಳನ್ನು ಕೇಂದ್ರ ಪಾಲಿಸುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಜಿಎಸ್‌ಟಿ ಮತ್ತು ಇತರ ತೆರಿಗೆ ದರ ಇಳಿಸಿ: ಎಫ್‌ಕೆಸಿಸಿಐ ಮನವಿ

‘ಕೇಂದ್ರ ಸರ್ಕಾರವು ಎಂಎಸ್‌ಎಂಇಗಳಿಗೆ ಆರ್ಥಿಕ ನೆರವು ಹೆಚ್ಚಿಸಬೇಕು, ಜಿಎಸ್‌ಟಿ ಮತ್ತು ಇತರ ತೆರಿಗೆ ದರಗಳನ್ನು ಇಳಿಸಬೇಕು, ಸಾಮರ್ಥ್ಯ ವೃದ್ಧಿ ಮತ್ತು ಕೌಶಲ ಅಭಿವೃದ್ಧಿಗೆ ಅನುದಾನ ಒದಗಿಸಬೇಕು. ಈ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಆಯೋಗಕ್ಕೆ ಮನವಿ ಸಲ್ಲಿಸಿದರು.

ಸೆಸ್‌ಗೆ ಮಿತಿ ಹಾಕಿ: ರಾಜ್ಯದ ಒತ್ತಾಯ

1.ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿನ ರಾಜ್ಯಗಳ ಪಾಲು ಈಗ ಶೇ 41ರಷ್ಟು ಇದೆ. ಅದನ್ನು ಶೇ 50ಕ್ಕೆ ಏರಿಕೆ ಮಾಡಬೇಕು. ಸೆಸ್‌ ಮತ್ತು ಸರ್‌ಚಾರ್ಜ್‌ನ ಪ್ರಮಾಣವು ಕೇಂದ್ರದ ಒಟ್ಟು ತೆರಿಗೆ ಆದಾಯದ ಶೇ 5ರಷ್ಟನ್ನು ಮೀರಬಾರದು. ಶೇ 5ರಷ್ಟನ್ನು ಮೀರಿದ ಮೊತ್ತವು ರಾಜ್ಯಗಳ ಬಾಬ್ತಿಗೆ ಜಮೆಯಾಗುವಂತೆ ಕಾನೂನು ತಿದ್ದುಪಡಿ ಮಾಡಬೇಕು

2.ಕೇಂದ್ರ ಸರ್ಕಾರದ ಎಲ್ಲ ತೆರಿಗೆಯೇತರ ಆದಾಯವನ್ನೂ ರಾಜ್ಯಗಳ ಬಾಬ್ತಿನ ವ್ಯಾಪ್ತಿಗೆ ತರಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು

3.ಬೆಂಗಳೂರಿನ ಹೂಡಿಕೆಗೆ ಐದು ವರ್ಷಗಳಲ್ಲಿ ₹55,586 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಕೇಂದ್ರವು ₹27,793 ಕೋಟಿ ಅನುದಾನ ನೀಡಬೇಕು.

4.ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯವು ₹25,000 ಕೋಟಿ ವೆಚ್ಚ ಮಾಡಲಿದ್ದು, ಕೇಂದ್ರವೂ ಅಷ್ಟೇ ಮೊತ್ತದ ಅನುದಾನ ನೀಡಬೇಕು. ಪಶ್ಚಿಮ ಘಟ್ಟದಲ್ಲಿ ವಿಕೋಪ ನಿರ್ವಹಣೆ ಮತ್ತು ಪುನರ್ವಸತಿಗೆ ₹10,000 ಕೋಟಿ ಸೇರಿ ಒಟ್ಟು ₹62,793 ಕೋಟಿ ಅನುದಾನ ನೀಡಬೇಕು

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X