ಗುಜರಾತ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿರುವ ನಡುವೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುಜರಾತ್‌ನ ಸೌರಾಷ್ಟ್ರ-ಕಚ್ಚ್ ಪ್ರದೇಶಕ್ಕೆ ಚಂಡಮಾರುತದ ಎಚ್ಚರಿಕೆ ನೀಡಿದೆ. ಶುಕ್ರವಾರ ಗುಜರಾತ್‌ನಲ್ಲಿ ಚಂಡಮಾರುತ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹವಾಮನಾ ಇಲಾಖೆಯು ತಿಳಿಸಿದೆ.
1976ರ ಬಳಿಕ ಮೊದಲ ಬಾರಿಗೆ 2024ರ ಆಗಸ್ಟ್‌ನಲ್ಲಿ ಅರಬ್ಬಿ ಸಮುದ್ರದ ಮೇಲೆ ಕಾಣಿಸಿಕೊಳ್ಳುವ ಮೊದಲ ಚಂಡಮಾರುತ ಇದಾಗಿದ್ದು, ಪಾಕಿಸ್ತಾನದ ಪ್ರಸ್ತಾಪದಂತೆ ಈ ಚಂಡಮಾರುತಕ್ಕೆ ‘ಸೈಕ್ಲೋನ್ ಅಸ್ನಾ’ ಎಂದು ಹೆಸರಿಡುವ ಸಾಧ್ಯತೆಯಿದೆ.
ಕರಾವಳಿಯಲ್ಲಿರುವ ಎಲ್ಲ ರಾಜ್ಯಗಳಲ್ಲಿಯೂ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಈಗಾಗಲೇ ಹವಾಮಾನ ಇಲಾಖೆ ನೀಡಿದೆ. ಶುಕ್ರವಾರ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
ಇದನ್ನು ಓದಿದ್ದೀರಾ? ಗುಜರಾತ್ ಪ್ರವಾಹ | 15ಕ್ಕೂ ಅಧಿಕ ಸಾವು: ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಚಂಡಮಾರುತವು ಹೆಚ್ಚಾಗಿ ಗುಜರಾತ್‌ನ ಜಾಮ್‌ನಗರ, ಪೋರಬಂದರ್ ಮತ್ತು ದ್ವಾರಕಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಭಾವ ಬೀರುವ ಸಾಧ್ಯತೆಯಿದ್ದು, ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಗುಜರಾತ್‌ನ ಚಂಡಮಾರುತಕ್ಕೆ ತುತ್ತಾಗುವ ಆತಂಕ ಎದುರಾಗಿರುವಾಗ, ಈಗಾಗಲೇ ಭಾರೀ ಮಳೆಯಿಂದಾಗಿ ಗುಜರಾತ್‌ನಲ್ಲಿ ಹಲವಾರು ದುರಂತಗಳು ನಡೆದಿದೆ. ಭಾರೀ ಮಳೆಯಿಂದಾಗಿ ನಡೆದ ಅವಘಡಗಳಿಂದಾಗಿ ಗುಜರಾತ್‌ನ ವಿವಿಧ ಜಿಲ್ಲೆಗಳಲ್ಲಿ ಒಟ್ಟಾಗಿ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
To move W, emerge into NE Arabian Sea off Kachchh and adjoining Pakistan coasts and intensify into a Cyclonic Storm on 30th August. Thereafter, it would continue to move nearly west-northwestwards over northeast Arabian Sea away from Indian coast during subsequent 2 days. pic.twitter.com/F4GXfrWor7
— India Meteorological Department (@Indiametdept) August 30, 2024
