ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ನಾಲ್ಕನೇ ಪದಕ ಲಭಿಸಿದ್ದು ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಶೂಟರ್ ಮನೀಶ್ ನರ್ವಾಲ್ ಬೆಳ್ಳಿಗೆ ಗುರಿಯಿಟ್ಟಿದ್ದಾರೆ.
10 ಮೀಟರ್ ಏರ್ ಪಿಸ್ತೂಲ್ ಎಸ್‌ಎಚ್1 ಫೈನಲ್‌ನಲ್ಲಿ ಒಟ್ಟು 234.9 ಪಾಯಿಂಟ್ ಗಳಿಸಿ ಎರಡನೇ ಸ್ಥಾನ ಪಡೆದರು.
ದಕ್ಷಿಣ ಕೊರಿಯಾದ ಜಿಯೊಂಗ್ಡು ಜೋ 237.4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೀನಾದ ಚಾವೊ ಯಾಂಗ್ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು.
ಇದನ್ನು ಓದಿದ್ದೀರಾ? ಪ್ಯಾರಿಸ್ ಪ್ಯಾರಾಲಿಂಪಿಕ್ಸ್ | ಚಿನ್ನ ಗೆದ್ದ ಅವನಿ ಲೆಖರಾ, ಮೋನಾ ಅಗರ್ವಾಲ್‌ಗೆ ಕಂಚು
ಇದಕ್ಕೂ ಮುನ್ನ ಶುಕ್ರವಾರದಂದು ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸ್ಟಾರ್ ಶೂಟರ್ ಅವನಿ ಚಿನ್ನ ಗೆದ್ದರೆ ಮತ್ತು ಮೋನಾ ಅಗರ್ವಾಲ್ ಕಂಚಿನ ಪದಕವನ್ನು ಗೆದಿದ್ದಾರೆ. ಈ ಮೂಲಕ ಭಾರತದ ಪದಕ ಖಾತೆಯನ್ನು ತೆರೆದರು.
ಅದಾದ ಬಳಿಕ ಭಾರತದ ಪ್ರೀತಿ ಪಾಲ್ ಮಹಿಳೆಯರ ಟಿ35 100 ಮೀಟರ್ ಓಟ ಸ್ಪರ್ಧೆಯಲ್ಲಿ 14.21 ಸೆಕೆಂಡುಗಳಲ್ಲಿ ಕ್ರಮಿಸಿ ಕಂಚಿನ ಪದಕ ಗೆದ್ದರು. ಇದೀಗ ಮನೀಶ್ ನರ್ವಾಲ್ ಭಾರತಕ್ಕೆ ನಾಲ್ಕನೇ ಪದಕ ಗೆದ್ದು ತಂದಿದ್ದಾರೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಒಟ್ಟಾಗಿ ಎರಡು ಕಂಚು, ಒಂದು ಬೆಳ್ಳಿ, ಒಂದು ಚಿನ್ನದ ಪದಕ ಲಭ್ಯವಾಗಿದೆ.
ITS RAINING MEDAL HERE AT THE PARALYMPICS
— SPORTS ARENA🇮🇳 (@SportsArena1234) August 30, 2024
Manish Narwal won Silver medal in Men's 10m Air Pistol SH1 category with a score of 234.9
🇮🇳🏅- 1🥇1🥈2🥉#Paralympics2024 #Paris2024 #ParaShooting pic.twitter.com/AutUEdGAOo
