ವಚನಗಳು ಎಲ್ಲ ಜಾತಿಗಳಿಗೂ ಸೇರಿದ್ದೂ, ಎಲ್ಲರಿಗೂ ಆದರ್ಶವಾಗಿವೆ ಮತ್ತು ಸಾರ್ವಕಾಲಕ್ಕೂ ಸತ್ಯವಾಗಿವೆ. ಎಲ್ಲರಿಗೂ ಆದರ್ಶವಾಗಿ ನಿಲ್ಲುತ್ತವೆ ಎಂದು ಶಿವಲೀಲಾ ವಿನಯ ಕುಲಕರ್ಣಿ ಹೇಳಿದರು.
ಧಾರವಾಡ ನಗರದ ವಿದ್ಯಾವರ್ಧಕ ಸಂಘ ಸಭಾಭವನದಲ್ಲಿ ಬಸವಕೇಂದ್ರದಿಂದ ಪ್ರತಿವರ್ಷದಂತೆ ಶ್ರಾವಣ ಮಾಸದಲ್ಲಿ ನಗರದ 15 ಭಾಗಗಳಲ್ಲಿ ಮನೆ ಮನೆಯಲ್ಲಿ ನಡೆದ ವಚನೋತ್ಸವ ಚಿಂತನ ಕಾರ್ಯಕ್ರಮಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ವೇಳೆ ವಚನ, ಲೇಖನ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
“ಶರಣರ ಸಂದೇಶಗಳು ಸಾರ್ವಕಾಲಿ ಸತ್ಯವಾಗಿದ್ದು, ಅಂತಹ ಸತ್ಯ ಸಂದೇಶಗಳನ್ನು ಮನೆ ಮನಗಳಿಗೆ ತಲುಪಿಸುವಲ್ಲಿ ಬಸವಕೇಂದ್ರ ಮಹತ್ವಪೂರ್ಣ ಕಾರ್ಯ ಮಾಡಿದೆ. ವಚನಗಳನ್ನು ಮನುಷ್ಯರ ಬದುಕಿನ ದಾರಿದೀಪಗಳಾಗಿ ಮಾರ್ಗದರ್ಶನ ನೀಡುತ್ತ ಬಂದಿವೆ. ಇಂತಹ ಕಾರ್ಯಕ್ರಮಗಳಿಗೆ ನಮ್ಮಿಂದ ಮತ್ತು ಶಾಸಕ ವಿನಯ ಕುಲಕರ್ಣಿ ಅವರಿಂದ ಸದಾ ಸಹಕಾರ ಸಿಗುತ್ತದೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸ್ಮಾರ್ಟ್ ಸಿಟಿ ಅನುದಾನವಿದ್ದರೂ ಅವಳಿ ನಗರಕ್ಕಿಲ್ಲ ಸ್ಮಾರ್ಟ್ ಭಾಗ್ಯ: ರಾಜು ನಾಯಕವಾಡಿ ಆಕ್ರೋಶ
ಡಾ ವೀರಣ್ಣಾ ರಾಜೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರಿ ಮಾತಾಜಿ ಅವರ ಸಮ್ಮುಖ ಶಿವಲೀಲಾ ವಿನಯ ಕುಲಕರ್ಣಿ ಹಾಗೂ ಪ್ರದೀಪ ಪಾಟೀಲ್ ಮುಖ್ಯಾತಿಥಿಗಳಾಗಿದ್ದರು. ಗೌರವ ಉಪಸ್ಥಿತಿಯಲ್ಲಿ ಸಿದ್ದರಾಮ ನಡಕಟ್ಟಿ ಇದ್ದರು.
ವರದಿ: ಅರುಣ ಮೂಡಿ, ಸಿಟಿಜನ್ ಜರ್ನಲಿಸ್ಟ್