ಈ ದಿನ ಸಂಪಾದಕೀಯ | ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಫ್ಲಾಪ್‌ ಶೋ; ಪರಾಮರ್ಶೆಗೆ ಇದು ಸೂಕ್ತ ಸಮಯ

Date:

Advertisements

ನಲವತ್ತು ವರ್ಷಗಳ ಹಿಂದೆ, ಲಾಸ್ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕೂದಲೆಳೆಯಲ್ಲಿ ‘ರನ್ನಿಂಗ್ ಲೆಜೆಂಡ್‌’ ಪಿ.ಟಿ ಉಷಾ ಚಿನ್ನ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. ಆಗ, ಇಡೀ ಭಾರತವೇ ಕಣ್ಣೀರಿಟ್ಟಿತ್ತು. ಉಷಾ ಅವರ ತಂತ್ರಗಾರಿಕೆಯಲ್ಲಿ ಏನು ತಪ್ಪಾಯಿತು ಎಂಬುದರ ಕುರಿತು ನಾನಾ ವಿವರಣೆಗಳು, ವಿಶ್ಲೇಷಣೆಗಳು ಹೊರಬಂದಿದ್ದವು. ಆದರೆ, ಈಗ ಕಾಲ ಬದಲಾಗಿದೆ. ತಂತ್ರಜ್ಞಾನ ಭಾರೀ ಮುಂದೆ ಸಾಗಿದೆ. ಆದರೆ, ಮನುಷ್ಯನ ಬುದ್ಧಿ ಮೊಣಕಾಲಿನ ಕೆಳಕ್ಕೆ ಕುಸಿದಿದೆ.

ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆ.ಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿಪಟು ವಿನೇಶ್ ಫೋಗಟ್‌ ಫೈನಲ್‌ ವರೆಗೂ ತಲುಪಿದ್ದರು. ಆದರೆ, ಫೈನಲ್‌ಗೂ ಮುನ್ನ ನಡೆದ ತೂಕದಲ್ಲಿ ಅವರು 50 ಕೆ.ಜಿ.ಗಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದ ಕಾರಣಕ್ಕೆ ಆಕೆಯನ್ನು ಅನರ್ಹಗೊಳಿಸಲಾಯಿತು. ಆಕೆಯ ಅನರ್ಹತೆಯನ್ನು ಭಾರತದ ಬಹುತೇಕರು ಸಂಭ್ರಮಿಸಿದರು. ಪಟಾಕಿ ಸಿಡಿಸಿ ಖುಷಿ ಪಟ್ಟರು. ಆಕೆ ಕುಸ್ತಿ ಫೆಡರೇಷನ್ ಅಧ್ಯಕ್ಷನಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ, ನ್ಯಾಯಕ್ಕಾಗಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಭಾರತದ ಹೃದಯಹೀನರು ತಮ್ಮ ಘಾತಕತನವನ್ನು ಮೆರೆದರು. ಒಲಿಂಪಿಕ್ಸ್‌ನಿಂದ ಫೋಗಟ್‌ ಹೊರಗುಳಿದುದ್ದನ್ನು ತಮ್ಮ ಗೆಲುವೆಂಬಂತೆ ಸಂಭ್ರಮಿಸಿದರು. ಆದರೆ, ಮೋದಿ ಬೆಂಬಲಿಗರು ಅರ್ಥಾತ್ ಭಕ್ತರ ಹೇಯ ಮನಸ್ಥಿತಿ ಜಗತ್ತಿನ ಮುಂದೆ ಬೆತ್ತಲಾಗಿದ್ದನು, ಅವರು ಗಮನಿಸಲಿಲ್ಲ.

ಅದೇನೆ ಇರಲಿ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು ತೀರಾ ಕಳಪೆ ಪ್ರದರ್ಶನ ನೀಡಿದೆ. ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಭಾಗಿಯಾಗಿದ್ದ 184 ರಾಷ್ಟ್ರಗಳ ಪೈಕಿ ಭಾರತವು 71ನೇ ಸ್ಥಾನವನ್ನು ಪಡೆದುಕೊಂಡಿದೆ. ದುರದೃಷ್ಟಕರ ಸಂಗತಿ ಎಂದರೆ, ನಮ್ಮ ಪಕ್ಕದ ರಾಷ್ಟ್ರ ಪಾಕಿಸ್ತಾನಕ್ಕಿಂತ ಭಾರತ ಹೀನಾಯ ಸ್ಥಿತಿ ತಲುಪಿದೆ. ಒಲಿಂಪಿಕ್ಸ್‌ನ 32 ಕ್ರೀಡೆಗಳ 48 ವಿಭಾಗಗಳ 329 ಈವೆಂಟ್‌ಗಳಲ್ಲಿ ಭಾರತವು ಕೇವಲ 6 ಪದಕಗಳನ್ನು ಮಾತ್ರವೇ ಗೆದ್ದಿದೆ. ಅದರಲ್ಲೂ, ಒಂದೂ ಚಿನ್ನದ ಪದಕ ಭಾರತ ಗೆಲ್ಲಲಾಗಿಲ್ಲ. ಚಿನ್ನ ಗೆಲ್ಲಬಹುದಾಗಿದ್ದ ಫೋಗಟ್ ಕೊನೆ ಕ್ಷಣದಲ್ಲಿ ಅವಕಾಶ ಕಳೆದುಕೊಂಡರು. ಇದು, ಕಳಪೆ ಮಾತ್ರವಲ್ಲ, ಹೀನಾಯ ಪ್ರದರ್ಶನ.

Advertisements

ಭಾರತದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿಲ್ಲ ಎಂಬುದು ಗೊತ್ತಿರುವ ವಿಚಾರ. ಆದಾಗ್ಯೂ, ಇನ್ನೂ ಹೆಚ್ಚಿನ ಪದಕಗಳನ್ನು ಗೆಲ್ಲುವ ಸಾಮರ್ಥ್ಯ ಭಾರತಕ್ಕಿತ್ತು. ಆದರೆ, ಅದಾಗಲಿಲ್ಲ. ಹಲವಾರು ಒಲಿಂಪಿಕ್ಸ್‌ನಲ್ಲಿ ಮಿಂಚಿದ್ದ, ದೇಶದ ಯುವಜನರ ಸ್ಟಾರ್ ಆಗಿದ್ದ ಪಿ.ಟಿ ಉಷಾ ಈಗ ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ನ (ಐಒಎ) ಅಧ್ಯಕ್ಷರಾಗಿದ್ದಾರೆ. ಅವರು ಈ ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಚಿನ್ನ ಗೆಲ್ಲಲು ನಾನಾ ತಂತ್ರಗಳನ್ನು ಮಾಡಬಹುದಿತ್ತು. ಒಲಿಂಪಿಕ್ ಕ್ರೀಡಾಕೂಟಕ್ಕೆ ತಂಡವನ್ನು ಆಯ್ಕೆ ಮಾಡುವಾಗ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಬಹುದಿತ್ತು. ಆದರೆ, ತಮ್ಮನ್ನು ಆ ಸ್ಥಾನಕ್ಕೆ ಕೂರಿಸಿದವರ ಪರವಿರುವ ಹಾಗೂ ಐಒಎ ಕಾರ್ಪೋರೇಟ್ ಪ್ರಾಯೋಜಕರ ಹಿತಾಸಕ್ತಿ ಕಾಯುವ ಒತ್ತಡಕ್ಕೆ ಸಿಲುಕಿ, ಕ್ರೀಡಾಪಟುಗಳ ಆಯ್ಕೆಯಲ್ಲಿ ಎಡವಿದರು. ಆಯ್ಕೆಯಾಗಿದ್ದ ಹೆಚ್ಚಿನ ಕ್ರೀಡಾಪಟುಗಳು ಅನನುಭವಿಗಳು ಎಂದು ಹೇಳಲಾಗುತ್ತಿದೆ. ಅದು, ಒಲಿಂಪಿಕ್ಸ್‌ ಅಂಕಪಟ್ಟಿಯಲ್ಲಿ ಸಾಬೀತಾಗಿದೆ.

ಬ್ಯಾಡ್ಮಿಂಟನ್ ಐಕಾನ್ ಪ್ರಕಾಶ್ ಪಡುಕೋಣೆ ಮತ್ತ ಪಿ.ಟಿ ಉಷಾ ಅವರೇ ಹೇಳುವಂತೆ, ”ಅತ್ಯುತ್ತಮ ಆಟವನ್ನು ಪ್ರದರ್ಶಿಸುವ ಮತ್ತು ಪದಕವನ್ನು ಗೆಲ್ಲುವ ಜವಾಬ್ದಾರಿ ಅಂತಿಮವಾಗಿ ಕ್ರೀಡಾಪಟುವಿನ ಮೇಲೆಯೇ ಇರುತ್ತದೆ.” ಆದರೆ, ಇದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ, ಕ್ರೀಡಾಪಟುಗಳಿಗೆ ಅಗತ್ಯ ಮೂಲಸೌಕರ್ಯ, ತರಬೇತಿಗಳನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿರಬೇಕು. ಆದರೆ, ಭಾರತ ಸರ್ಕಾರ ಎಂದಿಗೂ ಕ್ರೀಡೆಗೆ ಆದ್ಯತೆ ನೀಡಿಲ್ಲ. ಇಂತಹ ಕಾರಣಕ್ಕಾಗಿಯೇ, ಟೆನಿಸ್ ಪಟು ಲಿಯಾಂಡರ್ ಪೇಸ್ ಅವರು ಈ ಹಿಂದೆ, “ನಾನು ಅತ್ಯುತ್ತಮ ಪ್ರದರ್ಶನವನ್ನು ನೀಡಬಲ್ಲೆ. ಆದರೆ, ಫಲಿತಾಂಶವನ್ನು ಖಾತರಿಪಡಿಸಲಾರೆ” ಎಂದಿದ್ದರು. ಇದು, ನಮ್ಮ ಒಲಿಂಪಿಕ್ ಕ್ರೀಡಾಪಟುಗಳಿಗೂ ಅನ್ವಯಿಸುತ್ತದೆ. ದುರದೃಷ್ಟವಶಾತ್, ನಮ್ಮ ಕ್ರೀಡಾಪಟುಗಳು ಉತ್ತಮ ಆಟವನ್ನೂ ಪ್ರದರ್ಶಿಸುವಲ್ಲಿ ವಿಫಲರಾದರು ಎಂಬುದು ನಿರಾಶೆಯ ಸಂಗತಿ.

ಈ ವರದಿ ಓದಿದ್ದೀರಾ?: ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌ಗೆ ಪ್ರಧಾನಿಗೆ ಸಮನಾದ ಭದ್ರತೆ ಏಕೆ, ಏನಿದರ ಗುಟ್ಟು?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 62 ದೇಶಗಳು ತಮ್ಮ ರಾಷ್ಟ್ರಧ್ವಜಗಳನ್ನು 329 ಬಾರಿ ಹಾರಿಸಿ, ಅವರ ರಾಷ್ಟ್ರಗೀತೆಗಳೊಂದಿಗೆ ವಿವಿಧ ಸ್ಥಳಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದರು. ತಮ್ಮ ವಿಜೇತರನ್ನು ಸಂಭ್ರಮಿಸಿದರು. ಆದರೆ, ಭಾರತೀಯರು, ಪ್ಯಾರೀಸ್ ಒಲಿಂಪಿಕ್ಸ್‌ನ ಧ್ವಜಸ್ತಂಭದ ಮೇಲ್ಭಾಗದಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ಒಮ್ಮೆಯೂ ವೀಕ್ಷಿಸಲು ಸಾಧ್ಯವಾಗಲಿಲ್ಲ. ಒಮ್ಮೆಯಾದರೂ ವೀಕ್ಷಿಸಲು ಸಾಧ್ಯವಿದ್ದ ವಿನೇಶ್ ಫೋಗಟ್ ಕೊನೆ ಕ್ಷಣದಲ್ಲಿ ಅವಕಾಶ ವಂಚಿತರಾದಾಗ ಕಣ್ಣೀರು ಸುರಿಸಬೇಕಿದ್ದ ಭಾರತೀಯ ಮೋದಿ ಭಕ್ತರು ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದರು.

ಒಂದೂ ಚಿನ್ನ ಗೆಲ್ಲದ ಭಾರತ ಒಂದು ಬೆಳ್ಳಿ, ಐದು ಕಂಚಿನ ಪದಕಗಳಿಗೆ ತೃಪ್ತಿಪಟ್ಟುಕೊಂಡಿದೆ. ಈ ಕಳಪೆ ಪ್ರದರ್ಶನಕ್ಕೆ ಕಾರಣವೇನು? ಕ್ರೀಡಾಪಟುಗಳು ಕ್ರೀಡಾಕೂಟದ ಉದ್ದಕ್ಕೂ ಎದುರಾಳಿಗಳಿಗೆ ಶರಣಾಗಿದ್ದೇಕೆ? ಕ್ರಿಡಾಪಟುಗಳು ಎಡವಿದ್ದೆಲ್ಲಿ? ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ನಿಂದಾದ ತಪ್ಪುಗಳೇನು? ಭಾರತದ ಸರ್ಕಾರ ಮಾಡಬೇಕಾದ್ದು ಏನು? –ಇದೆಲ್ಲದರ ಬಗ್ಗೆ ವಿಶ್ಲೇಷಿಸುವ, ವಿಮರ್ಶಿಸುವ ತುರ್ತು ಭಾರತಕ್ಕಿದೆ. ಭಾರತದ ಕ್ರೀಡಾ ಸಚಿವಾಲಯವು ತನಿಖಾ ಸಮಿತಿಯೊಂದನ್ನು ರಚಿಸಿ, ಈ ಎಲ್ಲದರ ಬಗ್ಗೆ ಪರಾಮರ್ಶೆ ನಡೆಸಬೇಕಿದೆ. ಹಾಗೆಯೇ, ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಇನ್ನೂ ಬಿಡ್ ಮಾಡದೇ ಇರುವುದರ ಬಗ್ಗೆಯೂ ಚಿಂತನೆ ನಡೆಸಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X