ದೆಹಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಇಡಿ ಅಮಾನತುಲ್ಲಾ ಖಾನ್ ಅವರ ಮನೆಗೆ ಇಂದು ಮುಂಜಾನೆ 6 ಗಂಟೆಗೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ.
“ನನ್ನ ಬಂಧನ ಮಾಡುವ ಉದ್ದೇಶದಿಂದಲೇ ನನ್ನ ನಿವಾಸದ ಮೇಲೆ ದಾಳಿ ಮಾಡಲಾಗಿದೆ” ಎಂದು ಅಮಾನತುಲ್ಲಾ ಖಾನ್ ದಾಳಿ ಬಳಿಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಪ್ರಕರಣ | ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ತನ್ನ ಮನೆಗೆ ಇಡಿ ದಾಳಿಯಾಗುತ್ತಿದ್ದಂತೆ ಹೇಳಿಕೆ ನೀಡಿದ್ದ ಎಎಪಿ ಶಾಸಕ ಅಮಾನತುಲ್ಲಾ ಖಾನ್, “ವಾರಂಟ್‌ನೊಂದಿಗೆ ಇಡಿ ನನ್ನ ನಿವಾಸಕ್ಕೆ ಬಂದಿದೆ. ಇದು 2016ರ ಪ್ರಕರಣವಾಗಿದ್ದು, ಪ್ರಸ್ತುತ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನನ್ನನ್ನು 2022ರಲ್ಲಿ ಎಸಿಪಿ ಬಂಧಿಸಿದ್ದರು. ಆದರೆ 10 ದಿನಗಳಲ್ಲಿ ಜಾಮೀನು ಸಿಕ್ಕಿತ್ತು” ಎಂದಿದ್ದಾರೆ.
“ಕಳೆದ ವರ್ಷ ಅಕ್ಟೋಬರ್ 10ರಂದು ಇಡಿ ನನ್ನ ಸ್ಥಳದಲ್ಲಿ ಹುಡುಕಾಟ ನಡೆಸಿತ್ತು. ಆದರೆ ಈಗ ಮತ್ತೆ ಯಾಕೆ ಬಂದಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ. ಅವರು ಇನ್ನೇನು ಹುಡುಕಲು ಬಯಸುತ್ತಾರೆ? ಇಲ್ಲಿಯವರೆಗೆ ಯಾವುದೂ ಸಾಬೀತಾಗಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಪ್ರಕರಣ | ಬಿಆರ್‌ಎಸ್ ನಾಯಕಿ ಕವಿತಾಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್
ದೆಹಲಿ ವಕ್ಫ್ ಬೋರ್ಡ್ ಪ್ರಕರಣದಲ್ಲಿ ನೇಮಕಾತಿ ಮತ್ತು ಅದರ ಆಸ್ತಿಗಳನ್ನು ಗುತ್ತಿಗೆಗೆ ನೀಡಿದ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಖಾನ್ ಹಾಜರಾಗುತ್ತಿಲ್ಲ ಎಂದು ಇತ್ತೀಚೆಗೆ ಖಾನ್ ದೂರು ಸಲ್ಲಿಸಿದ್ದರು. ಖಾನ್ ವಿಚಾರಣೆಗೆ ಹಾಜರಾಗದ ಕಾರಣ ಈ ತನಿಖೆಯನ್ನು ಮುಕ್ತಾಯಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಇಡಿ ಹೇಳಿದೆ.
ದೆಹಲಿ ವಕ್ಫ್ ಬೋರ್ಡ್ ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳು ಮತ್ತು ಒಂದು ಸಂಸ್ಥೆಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಖಾನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಗುತ್ತಿಗೆ ನೀಡಿದ ಆರೋಪ ಇದಾಗಿದೆ. ದೆಹಲಿ ವಕ್ಫ್ ಮಂಡಳಿಗೆ ನಿಯಮಗಳನ್ನು ಉಲ್ಲಂಘಿಸಿ 32 ಗುತ್ತಿಗೆ ನೌಕರರನ್ನು ನೇಮಿಸಲಾಗಿದೆ ಎಂದು ಆರೋಪಿಸಲಾಗಿದೆ.
STORY | ED arrests AAP MLA Amanatullah Khan in money laundering case
— Press Trust of India (@PTI_News) September 2, 2024
READ: https://t.co/l13UZKTICs pic.twitter.com/OPGkpnGsfJ
