ಛಲವಾದಿ ನಾರಾಯಣಸ್ವಾಮಿಗೆ ಸಮಾಜದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಕಲಬುರಗಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಬೆಣ್ಣೂರಕರ್ ಕಿಡಿಕಾರಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ದಲಿತ ಸಂಘರ್ಷ ಸಮಿತಿಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಖರ್ಗೆ ಕುಟುಂಬದವರಿಂದ ಸಮಾಜದಲ್ಲಿ ಗುರುತಿಸಿಕೊಂಡಿರುವ ಛಲವಾದಿ ನಾರಾಯಣಸ್ವಾಮಿ ಅವರು ನಮ್ಮ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ. ಸಮಾಜದ ಪರವಾಗಿ ಇವರು ಯಾವುದೇ ಹೋರಾಟ ಮಾಡಿಲ್ಲ, ಇವರು ಬಿಜೆಪಿ ಪಕ್ಷದಲ್ಲಿ ಒಂದು ಸ್ಥಾನವನ್ನು ಪಡೆದಿರುವ ಮಾತ್ರಕ್ಕೆ ಖರ್ಗೆ ಕುಟಂಬದವರ ವಿರುದ್ದವಾಗಿ ಮಾತನಾಡುವುದು ಸರಿಯಲ್ಲ” ಎಂದರು.
“ಬುದ್ದ ವಿಹಾರ ಖರ್ಗೆ ಅವರ ಒಡೆತನದ್ದು ಎಂದು ಅವರು ಎಲ್ಲಿಯೂ ಹೆಳಿಕೊಂಡಿಲ್ಲ ವಿಹಾರವು ಸರ್ವ ಜನಾಂಗದವರು ಆಗಮಿಸಿ ಪ್ರತಿದಿನ ಧ್ಯಾನ ಮಾಡುವ ಸ್ಥಳವಾಗಿದೆ. ಇದು ಸಮುದಾಯದ ಒಂದು ಟ್ರಸ್ಟ್ ಆಗಿರುವುದರಿಂದ ಆ ಟ್ರಸ್ಟ್‌ನ ಅಡಿಯಲ್ಲಿ ಖರ್ಗೆ ಅವರು ಇದ್ದಾರೆಯೇ ಹೊರತು ಈ ವಿಷಯದಲ್ಲಿ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿಲ್ಲ. ಇಂಥಹ ಒಬ್ಬ ನಾಯಕರ ಬಗ್ಗೆ ನಾರಾಯಣ ಸ್ವಾಮಿ ಅವರು ಇಲ್ಲಸಲ್ಲದ ಆರೋಪ ಮಾಡುವುದು ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ.
ಇನ್ನು ಮುಂದೆ ಖರ್ಗೆ ಕುಟುಂಬದವರ ಬಗ್ಗೆಯಾಗಲೀ, ಸಮಾಜದ ಬಗ್ಗೆಯಾಗಲೀ ಮಾತನಾಡಿದರೆ ಮುಂಬರುವ ದಿನಗಳಲ್ಲಿ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ‘ಗಗನಚುಕ್ಕಿ’ ಅಭಿವೃದ್ಧಿಪಡಿಸಿ ಶೀಘ್ರದಲ್ಲಿ ಜಲಪಾತೋತ್ಸವ: ಶಾಸಕ ಪಿ ಎಂ ನರೇಂದ್ರಸ್ವಾಮಿ
ಸುದ್ದಿಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಲೋಹಿತ್ ಮುದ್ದುಡಗಿ, ನಗರ ಸಂಚಾಲಕ ಬಸವಾಜ ಮುಡಬೂಳಕರ್ ಇದ್ದರು.
