ಕಾವೇರಿ ನೀರಾವರಿ ನಿಗಮದ ಕೃಷ್ಣರಾಜಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನೆಗಳ ವೃತ್ತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟಾಸ್ಕ್ ವರ್ಕ್(ಸೌಡಿ) ದಿನಗೂಲಿ ನೌಕರರು ವೇತನ ಪಾವತಿಸುವಂತೆ ಆಗ್ರಹಿಸಿ ಮಂಡ್ಯ ನಗರದ ಕಾವೇರಿ ಭವನ ಆವರಣದಲ್ಲಿ ಧರಣಿ ನಡೆಸಿದರು.
ಕಳೆದ ಏಳು ತಿಂಗಳಿಂದ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸುಮಾರು 650 ಮಂದಿ ನೌಕರರು ಭಾಗವಹಿಸಿದ್ದಾರೆ.
“ಫೆಬ್ರವರಿ 1ರಿಂದ ವೇತನ ಪಾವತಿ ಮಾಡಿಲ್ಲ. ಸಂಬಳವಿಲ್ಲದೆ ತಮ್ಮ ಕುಟುಂಬಗಳನ್ನು ನಿರ್ವಹಿಸಲು, ಮಕ್ಕಳನ್ನು ಶಾಲೆ-ಕಾಲೇಜಿಗೆ ಸೇರಿಸಲು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಹಕ್ಕುಗಳನ್ನು ಹೊಂದಲು ನಿರಂತರವಾಗಿ ಹೋರಾಡುತ್ತೇವೆ” ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಕ್ಫ್ ಆಸ್ತಿ ಪ್ರಕರಣಗಳನ್ನು ಒಂದು ತಿಂಗಳಲ್ಲಿ ಪರಿಹರಿಸಬೇಕು: ಸಚಿವ ಜಮೀರ್ ಅಹ್ಮದ್ ಸೂಚನೆ
ಅಧಿಕಾರಿಗಳು ನೌಕರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ಪರಿಹಾರ ನೀಡಬೇಕು. ಕೂಡಲೇ ಬಾಕಿ ವೇತನ ಪಾವತಿಸಬೇಕು. ಇಲ್ಲದಿದ್ದರೆ ಮುಷ್ಕರವನ್ನು ಮುಂದುವರೆಸುತ್ತೇವೆ” ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ರಾಮೇಗೌಡ, ಮಹೇಶ್, ಎಸ್ ಎಂ ರವಿ, ವೈರಮುಡಿ, ಸತೀಶ್ ಮತ್ತು ಜೆ ನಾಗರಾಜ್ ಮುಷ್ಕರದ ಮುಂದಾಳತ್ವ ವಹಿಸಿದ್ದರು.