ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ನೀಡಲು ಪ್ಯಾಲೆಸ್ತೀನ್‌ನಲ್ಲಿ ಅಭಿಯಾನ ನಡೆಯುತ್ತಿದ್ದು, ಈ ನಡುವೆ ಗಾಜಾದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಈ ದಾಳಿಯಿಂದಾಗಿ 35 ಮಂದಿ ಸಾವನ್ನಪ್ಪಿದ್ದಾರೆ.
ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ಹಾಕುವ ನಿಟ್ಟಿನಲ್ಲಿ ಮಧ್ಯ ಗಾಜಾದಲ್ಲಿ ಯುದ್ಧಕ್ಕೆ ಭಾಗಶಃ ವಿರಾಮವನ್ನು ಘೋಷಿಸಲಾಗಿತ್ತು. ಈ ದಿನವನ್ನು ಮತ್ತಷ್ಟು ವಿಸ್ತರಿಸಿ ಮಕ್ಕಳಿಗೆ ಪೋಲಿಯೊ ಲಸಿಕೆಗಳನ್ನು ಹಾಕಲು ವೈದ್ಯರಿಗೆ ಅವಕಾಶ ನೀಡಲಾಗಿದೆ. ಆದರೂ ಇಸ್ರೇಲ್ ಪಡೆಗಳು ಗಾಜಾದಾದ್ಯಂತ ದಾಳಿ ನಡೆಸಿ ಕನಿಷ್ಠ 35 ಮಂದಿಯನ್ನು ಕೊಂದಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.
24 ಗಂಟೆಗಳಲ್ಲಿ ಇಸ್ರೇಲ್ ದಾಳಿಯಿಂದ ಹತ್ಯೆಯಾದವರಲ್ಲಿ ದಕ್ಷಿಣದ ನಗರವಾದ ರಾಫಾದ ನಾಲ್ವರು ಮಹಿಳೆಯರು ಮತ್ತು ಉತ್ತರದ ಗಾಜಾ ನಗರದ ಆಸ್ಪತ್ರೆಯೊಂದರ ಬಳಿ ಎಂಟು ಜನರು ಕೂಡಾ ಸೇರಿದ್ದಾರೆ ಎಂದು ಪ್ಯಾಲೆಸ್ತೀನ್ ನಾಗರಿಕ ತುರ್ತು ಸೇವೆ ಮಂಗಳವಾರ ತಿಳಿಸಿದೆ.
ಇದನ್ನು ಓದಿದ್ದೀರಾ? ಗಾಜಾ ಮೇಲೆ ಇಸ್ರೇಲ್ ದಾಳಿಯನ್ನು ಜನಾಂಗೀಯ ಹತ್ಯೆ ಎಂದು ಖಂಡಿಸಿದ ಅಮೆರಿಕದ ಮುಸ್ಲಿಂ ನರ್ಸ್ ಕೆಲಸದಿಂದ ವಜಾ
ಇಸ್ರೇಲ್‌ನ ವೈಮಾನಿಕ ದಾಳಿಯಿಂದಾಗಿ ಗಾಜಾ ನಗರದ ಮಧ್ಯದಲ್ಲಿರುವ ಒಮರ್ ಅಲ್-ಮೊಖ್ತಾರ್ ಸ್ಟ್ರೀಟ್ ಬಳಿಯ ಮನೆಯಲ್ಲಿದ್ದ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಗರದ ಉತ್ತರದ ಉಪನಗರವಾದ ಶೇಖ್ ರಾದ್ವಾನ್‌ನಲ್ಲಿರುವ ಕಾಲೇಜಿನ ಬಳಿ ಮತ್ತೊಂದು ದಾಳಿ ನಡೆದಿದ್ದು, ಇಲ್ಲಿಯೂ ಸಾವುಗಳು ಸಂಭವಿಸಿದೆ ಎಂದು ವೈದ್ಯರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
Israeli attacks in Gaza kill 35 people as polio vaccinations continue
— Breaking News (@FastNews77) September 3, 2024
WHO says it surpasses its polio vaccination targets in first days of campaign to immunise more than 640,000 children.#News #DailyNews #LiveNews #World
