ಶುಕ್ರವಾರ ನಡೆದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ ಪುರುಷರ ಶಾಟ್‌ಪುಟ್ F57 ಫೈನಲ್ ಸ್ಪರ್ಧೆಯಲ್ಲಿ ಭಾರತದ ಹೊಕಾಟೊ ಹೊಟೊಜೆ ಸೆಮಾ ಕಂಚಿನ ಪದಕವನ್ನು ಗೆದಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ 14.65 ಮೀ ಎಸೆತದೊಂದಿಗೆ ಮೂರನೇ ಸ್ಥಾನವನ್ನು ಅವರು ಪಡೆದಿದ್ದು, ಇದು ಅವರ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವಾಗಿದೆ.
ಈ ಪಂದ್ಯದಲ್ಲೇ ಭಾರತದ ಸೋಮನ್ ರಾಣಾ 14.07 ಮೀಟರ್ ಎಸೆತದೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ. ವಿಶ್ವ ದಾಖಲೆ ಹೊಂದಿರುವ ಇರಾನ್‌ನ ಯಾಸಿನ್ ಖೋಸ್ರಾವಿ 15.96 ಮೀಟರ್ ಎಸೆದು ಚಿನ್ನ ಗೆದ್ದರೆ, ಬ್ರೆಜಿಲ್‌ನ ಥಿಯಾಗೊ ಪಾಲಿನೊ ಡಾಸ್ ಸ್ಯಾಂಟೋಸ್ 14.76 ಮೀ ಎಸೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.
ಹೊಕಾಟೊ ಹೊಟೊಜೆ ಪ್ಯಾರಾಲಿಂಪಿಕ್ಸ್ ಶಾಟ್ ಪುಟ್ ಪದಕವನ್ನು ಪಡೆದ ನಾಲ್ಕನೇ ಭಾರತೀಯರಾಗಿದ್ದಾರೆ. ಜೋಗಿಂದರ್ ಶರ್ಮಾ 1984ರ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ (ಪುರುಷರ ಶಾಟ್‌ಪುಟ್ L6), ದೀಪಾ ಮಲಿಕ್ 2016 ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ (ಮಹಿಳೆಯರ ಶಾಟ್‌ಪುಟ್ F53), ಸಚಿನ್ ಖಿಲಾರಿ 2024 ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ (ಪುರುಷರ ಶಾಟ್‌ಪುಟ್ F46) ಗೆದಿದ್ದಾರೆ.
ಇದನ್ನು ಓದಿದ್ದೀರಾ? ಪ್ಯಾರಾಲಿಂಪಿಕ್ಸ್ | ಇತಿಹಾಸ ಬರೆದ ಬಿಲ್ಲುಗಾರ ಹರ್ವಿಂದರ್ ಸಿಂಗ್; ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನ
ನಾಗಾಲ್ಯಾಂಡ್‌ನ ಹೊಕಾಟೊ ವಿಶೇಷ ಪಡೆ ಸೇರುವ ಕನಸು ಕಂಡಿದ್ದವರು. ಆದರೆ ಕಾರ್ಯಾಚರಣೆಯೊಂದರಲ್ಲಿ ಗಣಿ ಸ್ಫೋಟವಾಗಿ ತಮ್ಮ ಎಡಗಾಲನ್ನು ಕಳೆದುಕೊಂಡರು. 40 ವರ್ಷ ವಯಸ್ಸಿನ ಹೊಕಾಟೊ ಕಳೆದ ವರ್ಷ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಮತ್ತು 2022ರಲ್ಲಿ ಮೊರಾಕೊ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಬೆಳ್ಳಿ ಗೆದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ನಾಲ್ಕನೇ ಸ್ಥಾನ ಪಡೆದರು.
ಇದಕ್ಕೂ ಮುನ್ನ ಶುಕ್ರವಾರ ನಡೆದ ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ಪ್ರವೀಣ್ ಕುಮಾರ್ ಚಿನ್ನದ ಪದಕ ಗಳಿಸಿದ್ದಾರೆ. ಈ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಈವರೆಗೆ ಒಟ್ಟು 27 ಪದಕಗಳನ್ನು ಗೆದ್ದಿದೆ. ಆರು ಚಿನ್ನ, 9 ಬೆಳ್ಳಿ ಮತ್ತು 12 ಕಂಚಿನ ಪದಕಕ್ಕೆ ಭಾರತದ ಅಥ್ಲೀಟ್‌ಗಳು ಕೊರಳೊಡ್ಡಿದ್ದಾರೆ.
Fabulous news to start off the day folks 💫
— India_AllSports (@India_AllSports) September 7, 2024
Medal no. 27 for India at Paris Paralympics late yesterday night.
Hokato Hotozhe Sema wins Bronze medal in Shot put F57 event. #Paralympics2024 pic.twitter.com/wJXXt8a58Q
