ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಹಲವಾರು ಗ್ರಾಮಗಳ ಹೊರಭಾಗದಲ್ಲಿ ಹಿಂದೂಯೇತರರಿಗೆ, ರೋಹಿಂಗ್ಯಾ ಮುಸ್ಲಿಮರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳ ಪ್ರವೇಶವನ್ನು ನಿಷೇಧಿಸುವ ಫಲಕಗಳನ್ನು ಹಾಕಲಾಗಿದ್ದು, ಸ್ಥಳೀಯ ಮುಸ್ಲಿಂ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿದೆ. ಸದ್ಯ ಉತ್ತರಾಖಂಡ ರಾಜ್ಯ ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಭಿನವ್ ಕುಮಾರ್, “ಹಲವು ಗ್ರಾಮಗಳಲ್ಲಿ ಇಂತಹ ಬೋರ್ಡ್ಗಳನ್ನು ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಪೊಲೀಸ್ ಮತ್ತು ಗುಪ್ತಚರ ಘಟಕಗಳಿಗೆ ಆದೇಶ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಇನ್ನು ರುದ್ರಪ್ರಯಾಗದ ಪೊಲೀಸ್ ಅಧಿಕಾರಿ ಪ್ರಬೋಧ್ ಕುಮಾರ್ ಗಿಲ್ಡಿಯಾಲ್, “ಹಲವಾರು ಫಲಕಗಳನ್ನು ತೆಗೆದುಹಾಕಲಾಗಿದೆ. ಯಾರು ಈ ಅಪರಾಧವನ್ನು ಮಾಡಿದ್ದಾರೆ ಎಂದು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
“ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ವಿವಿಧ ಗ್ರಾಮ ಪ್ರಧಾನರೊಂದಿಗೆ (ಗ್ರಾಮ ಮುಖ್ಯಸ್ಥರು) ಸಭೆ ನಡೆಸಲಾಗಿದೆ” ಎಂದೂ ತಿಳಿಸಿದ್ದಾರೆ.
ಫಲಕದಲ್ಲಿ ಏನಿದೆ?
“ಹಿಂದೂಯೇತರರು/ ರೋಹಿಂಗ್ಯಾ ಮುಸ್ಲಿಮರು ಮತ್ತು ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುವುದು/ಗ್ರಾಮದಲ್ಲಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಗ್ರಾಮದಲ್ಲಿ ಎಲ್ಲಿಯಾದರೂ ಕಂಡು ಬಂದರೆ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗುವುದು” ಎಂದು ನ್ಯಾಲ್ಸು ಗ್ರಾಮದ ಹೊರಗೆ ಅಳವಡಿಸಿರುವ ಫಲಕದಲ್ಲಿ ಹಿಂದಿಯಲ್ಲಿ ಬರೆಯಲಾಗಿದೆ. ಗ್ರಾಮಸಭೆಯಿಂದ ಈ ನಿರ್ದೇಶನ ನೀಡಲಾಗಿದೆ ಎಂದು ಫಲಕದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಮೋದಿ 173 ಭಾಷಣಗಳ ಪೈಕಿ 110 ‘ಮುಸ್ಲಿಂ ದ್ವೇಷ’ದಿಂದ ಕೂಡಿವೆ
ಶೇರ್ಸಿ, ಗೌರಿಕುಂಡ, ತ್ರಿಯುಗಿನಾರಾಯಣ, ಸೋನ್ಪ್ರಯಾಗ, ಬರಸು, ಜಾಮು, ಏರಿಯಾ, ರವಿಗ್ರಾಮ, ಮೈಖಂಡ ಸೇರಿದಂತೆ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಇದೇ ರೀತಿಯ ಬೋರ್ಡ್ಗಳು ಇದೆ.
“ತಮ್ಮ ಗ್ರಾಮದ ಹೊರಗೆ ಸೂಚನಾ ಫಲಕವನ್ನು ಗ್ರಾಮಸ್ಥರು ಅಳವಡಿಸಿದ್ದಾರೆಯೇ ಹೊರತು ಗ್ರಾಮ ಪಂಚಾಯಿತಿ ಅಳವಡಿಸಿರುವುದಲ್ಲ” ಎಂದು ನ್ಯಾಲ್ಸುವಿನ ಪ್ರಧಾನ್ ಪ್ರಮೋದ್ ಸಿಂಗ್ ಹೇಳಿದ್ದಾರೆ.
ಜೊತೆಗೆ “ಗಂಡಸರು ಬೇರೆಡೆ ಕೆಲಸದಲ್ಲಿರುತ್ತಾರೆ. ಇಲ್ಲಿ ಹೆಂಗಸರು ಮಾತ್ರ ಇರುತ್ತಾರೆ. ಅದಕ್ಕೆ ಆ ರೀತಿ ಫಲಕಗಳನ್ನು ಹಾಕಲಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ ಎರಡು ಮುಸ್ಲಿಂ ನಿಯೋಗಗಳಾದ ಮುಸ್ಲಿಂ ಸೇವಾ ಸಂಘಟನೆ ಮತ್ತು ಎಐಎಂಐಎಂ ಸೆಪ್ಟೆಂಬರ್ 5ರಂದು ಡಿಜಿಪಿ ಕುಮಾರ್ ಅವರನ್ನು ಭೇಟಿಯಾಗಿ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದ್ವೇಷದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೆಯೇ ದೇಶದಲ್ಲಿ ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ದ್ವೇಷದ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
Hello @RudraprayagPol, @uttarakhandcops, @pushkardhami @narendramodi Signboards of No entry to Non Hindu and hawkers displayed in Uttarakhand district. What action is being taken against the culprits installing these Signboards?
— Mohammed Zubair (@zoo_bear) September 8, 2024
The board reads "Non Hindus/Rohingya Muslims and… pic.twitter.com/nODP4SJkHz
