ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ದೇಶದ ಅಭಿವೃದ್ಧಿಯಲ್ಲಿ ಶಾಸಕಾಂಗ ಉತ್ತಮವಾಗಿರುವುದು ಅವಶ್ಯಕವಾಗಿದೆ. ಹಾಗಾಗಿ ಉತ್ತಮರ ಆಯ್ಕೆ ಮಾಡುವಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಮಾಲಿಪಾಟೀಲ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ನಿಂಗನಗೌಡ ಪಾಟೀಲ್ ಕರೆ ನೀಡಿದರು.
ಗದಗದಲ್ಲಿ ಟ್ರಸ್ಟ್ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಮತದಾನ ಮಾಡಿ ದೇಶದ ಅಭಿವೃದ್ಧಿಯಲ್ಲಿ ನಮ್ಮ ಪಾತ್ರ ನಿರ್ವಹಣೆ ಮಾಡಬೇಕು” ಎಂದು ಮತದಾರರಲ್ಲಿ ವಿನಂತಿಸಿದರು.
ಈ ಸುದ್ದಿ ಓದಿದ್ದೀರಾ? ಸತ್ಯ ಎದುರಿಸುವ ತಾಕತ್ತು ಮೋದಿ ಸರ್ಕಾರಕ್ಕೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ
ಈ ಸಂದರ್ಭದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಶೇಖರಗೌಡ ಎನ್ ಮಾಲಿಪಾಟೀಲ್ ಕಾರ್ಯದರ್ಶಿಗಳಾದ ವಿದ್ಯಾಶ್ರೀ ಎನ್ ಮಾಲಿ ಪಾಟೀಲ್, ಮಂಜು ಮಾಲಿ ಪಾಟೀಲ್ ಗುರುರಾಜ್ ಬಂಡಿಹಾಳ, ಭೀಮನಗೌಡ ಮಾಲಿ ಪಾಟೀಲ್, ಮಾಂತೇಶ್ ಗೌಡ ಮಾಲಿ ಪಾಟೀಲ್, ವಿದ್ಯಾ ಮಾಲಿ ಪಾಟೀಲ್, ಪವಿತ್ರ ಬಂಡಿಹಾಳ ಸೇರಿದಂತೆ ಟ್ರಸ್ಟ್‌ನ ಇತರೆ ಸದಸ್ಯರು ಇದ್ದರು.
ಗದಗದಿಂದ ಯಲವಿಗಿ ಹರಪನಹಳ್ಳಿ ವಾಡಿ ಕೃಷ್ಣ ಹಾಗೂ ಗದಗ ನರಗುಂದ ಗೋಕಾಕ ರಸ್ತೆ ಹೊಸ ರೈಲ್ವೇ ಮಾರ್ಗ ಚಾಲನೆ ಆದರೆ ಮಾತ್ರ ನಾನು ಮಾತು ಚಲಾವಣೆ ಮಾಡುವೆ. ಇಲ್ಲ ಅಂದ್ರೆ ಇಲ್ಲ