ವಾಲ್ಮೀಕಿ ನಿಗಮದ ಇಡೀ ಹಗರಣ ಹೊಣೆ ಸಿಎಂ ಸಿದ್ದರಾಮಯ್ಯ ಹೊರಬೇಕು: ಸಿ ಟಿ ರವಿ ಆಗ್ರಹ

Date:

Advertisements

ಎಸ್‍ಐಟಿಯು ನಾಗೇಂದ್ರರ ಹೆಸರನ್ನು ಉಲ್ಲೇಖಿಸದೆ ಇರುವುದು, ನಾಗೇಂದ್ರರನ್ನು ತನಿಖೆಗೆ ಒಳಪಡಿಸದೆ ಇರುವುದು ಗಮನಿಸಿದಾಗ ವಾಲ್ಮೀಕಿ ನಿಗಮದ ಇಡೀ ಹಗರಣವನ್ನು ಮುಚ್ಚಿ ಹಾಕುವ ಸಂಚನ್ನು ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖರು ಮಾಡಿದಂತಿದೆ. ಇಲ್ಲವಾದರೆ ಎಸ್‍ಐಟಿ ಮತ್ತು ಇ.ಡಿ. ಚಾರ್ಜ್‍ಶೀಟಿಗೆ ಹೀಗೆ ಅಜಗಜಾಂತರ ಇರಲು ಹೇಗೆ ಸಾಧ್ಯ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಪ್ರಶ್ನಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಬೆಂಗಳೂರಿನಲ್ಲಿ ಇಂದು (ಸೆ.10) ಮಾತನಾಡಿದ ಅವರು, “ನಾಗೇಂದ್ರರ ಮೌಖಿಕ ಸೂಚನೆಯ ಕುರಿತು ತಿಳಿಸಿದ್ದೆವು. ಚುನಾವಣೆಗೆ ಹಣ ಬಳಕೆ, ಬಾರ್‌ಗಳಿಗೆ ಹಣ ಹೋಗಿರುವುದರ ಕುರಿತು ಆರೋಪಿಸಿದ್ದೆವು. ನೆಕ್ಕುಂಟಿ ನಾಗರಾಜ್ ಮತ್ತು ಸಿದ್ದರಾಮಯ್ಯನವರಿಗೆ ಇರುವ ಸಂಬಂಧ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಗೇಂದ್ರ- ನೆಕ್ಕುಂಟಿ ಸಂಬಂಧ ಬಗ್ಗೆಯೂ ಕೂಡ ಫೋಟೊ ಸಹಿತ ಬೆಳಕು ಚೆಲ್ಲಿದ್ದೆವು. ಎಸ್‍ಐಟಿ ಚಾರ್ಜ್‍ಶೀಟಿನಲ್ಲಿ ನಾಗೇಂದ್ರ- ಬಸನಗೌಡ ದದ್ದಲ್ ಹೆಸರೇ ಇಲ್ಲ” ಎಂದು ಆಕ್ಷೇಪಿಸಿದರು.

“ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ಆರೋಪ ಮುಕ್ತವಾಗಲು ಮತ್ತು ಕ್ಲೀನ್ ಚಿಟ್ ಪಡೆಯಲು ಎಸಿಬಿಯನ್ನು ಬಳಸಿಕೊಂಡಿತ್ತು. ಅದೇ ಥರ ಎಸ್‍ಐಟಿಯನ್ನು ಬಳಸಿಕೊಂಡದ್ದು ವ್ಯಕ್ತವಾಗುತ್ತಿದೆ. ಇ.ಡಿ. ಚಾರ್ಜ್‍ಶೀಟಿನಲ್ಲಿ ಹಣದ ಬಳಕೆ, ಮಾಸ್ಟರ್‍ಮೈಂಡ್ ಯಾರೆಂಬ ಕುರಿತು ಉಲ್ಲೇಖಿಸಿದ್ದಾರೆ. ನಾಗೇಂದ್ರ, ಸತ್ಯನಾರಾಯಣವರ್ಮ ಎಲ್ಲರೂ ಸೇರಿ ಸಂಚು ನಡೆಸಿದ್ದಾಗಿ ಹೇಳಿದ್ದಾರೆ ಎಂದರು. ಇದರ ನೈತಿಕ ಹೊಣೆಯನ್ನು ಮುಖ್ಯಮಂತ್ರಿಗಳೇ ಹೊರಬೇಕು” ಎಂದು ಆಗ್ರಹಿಸಿದರು.

Advertisements

“ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕುರಿತು ಎನ್‍ಐಎ ತನ್ನ ಚಾರ್ಜ್‍ಶೀಟಿನಲ್ಲಿ ಅವರ ಹುನ್ನಾರ, ವಿಧ್ವಂಸಕ ಕೃತ್ಯ ನಡೆಸಲು ಮಾಡಿದ್ದ ಸಂಚು, ಐಸಿಸ್ ಜೊತೆಗಿನ ಸಂಬಂಧ, ಬಿಜೆಪಿ ರಾಜ್ಯ ಕಚೇರಿ ಗುರಿಯಾಗಿ ಇಟ್ಟುಕೊಂಡು ಬಾಂಬ್ ಸ್ಫೋಟ ಮಾಡಲು ನಡೆಸಿದ ಯೋಜನೆ ಕುರಿತು ವಿವರವಾಗಿ ತಿಳಿಸಿದ್ದಾರೆ. ಇಷ್ಟಾದ ಮೇಲೆಯೂ ಕೆಲವರಿಗೆ ಅವರು ಶಾಂತಿದೂತರು ಅನಿಸಿದರೆ, ಶಾಂತಿಗಾಗಿಯೇ ಇಸ್ಲಾಂ ಇರುವುದು ಎಂದು ಅನಿಸಿದರೆ, ಭಯೋತ್ಪಾದನೆ ಮತ್ತು ಇಸ್ಲಾಂಗೆ ಇರುವ ಸಂಬಂಧ ಅರ್ಥವಾಗದೆ ಇದ್ದರೆ ನಮ್ಮ ದೇಶ ಉಳಿಸಿಕೊಳ್ಳಲು ಸಾಧ್ಯವಿಲ್ಲ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಬಿಜೆಪಿ ಯವರಿಗೆ ಸಿದ್ದರಾಮಯ್ಯ ಭಯ ಕನಸಿನಲ್ಲೂ ಕಾಡುತ್ತಿದೆ,, ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಇಂಥಾ ಅನೇಕ ಹಗರಣಗಳು ಸುದ್ದಿ ಆಗಿದ್ದವು,,ಆಗ ಪ್ರಧಾನಿಗಳು ಹೊಣೆಹೊತ್ತು ಸ್ಥಾನ ತ್ಯಜಿಸಿದರಾ ,, ಭಯಂಕರ ದೇಶ ಭಕ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X