2023ರ ವಿಧಾನಸಭಾ ಚುನಾವಣೆ | ಮತದಾರರ ಓಲೈಕೆಗೆ ‘ಉಚಿತ’ಗಳ ಸುರಿಮಳೆ; ಇವು ಕೇವಲ ಭರವಸೆಗಳೇ?

Date:

Advertisements

2019ರ ಲೋಕಸಭೆ ಮತ್ತು ಉಪಚುನಾವಣೆಗಳ ಬಳಿಕ ರಾಜಕಾರಣಿಗಳಿಗೆ ರಾಜ್ಯದ ಜನರು ನೆನಪಾಗಿದ್ದಾರೆ. ಪಕ್ಷಗಳ ನಾಯಕರು ಮತ್ತು ಅಭ್ಯರ್ಥಿಗಳು ಉರಿ ಬಿಸಿಲಿನಲ್ಲೂ ಬೀದಿ-ಬೀದಿ ಸುತ್ತಿ ಜನರ ಬಳಿ ಮತಯಾಚನೆ ಮಾಡುತ್ತಿದ್ದಾರೆ. ದುಡ್ಡು, ಹೆಂಡ, ಸೀರೆ, ಕುಕ್ಕರ್‌ ನೀಡುವ ಮೂಲಕ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಜನರಿಗೆ ಉಚಿತಗಳ ಸುರಿಮಳೆ ಸುರಿಸುತ್ತಿವೆ.

ರಾಜ್ಯದಲ್ಲಿ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದೆ. ಅಧಿಕಾರ ಗದ್ದುಗೆ ಏರಲು ಮೂರು ಪಕ್ಷಗಳು ಭಾರೀ ಸೆಣಸಾಟ ನಡೆಸುತ್ತಿವೆ. ವಿಧಾನಸೌಧದ ಕುರ್ಚಿಗಾಗಿ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಗುದ್ದಾಟ ನಡೆಸಿದ್ದಾರೆ. ಮತದಾರರನ್ನು ಓಲೈಸಲು ರಾಜ್ಯದ ಪ್ರಮುಖ ಮೂರು ಪಕ್ಷಗಳು ‘ಉಚಿತ’ಗಳ ಭರವಸೆಯ ಸರಮಾಲೆಯನ್ನೇ ನೀಡುತ್ತಿದ್ದಾರೆ.

2019ರ ಲೋಕಸಭೆ ಮತ್ತು ಉಪಚುನಾವಣೆಗಳ ಬಳಿಕ ರಾಜಕಾರಣಿಗಳಿಗೆ ರಾಜ್ಯದ ಜನರು ನೆನಪಾಗಿದ್ದಾರೆ. ಪಕ್ಷಗಳ ನಾಯಕರು ಮತ್ತು ಅಭ್ಯರ್ಥಿಗಳು ಉರಿ ಬಿಸಿಲಿನಲ್ಲೂ ಬೀದಿ-ಬೀದಿ ಸುತ್ತುತ್ತಿದ್ದಾರೆ. ದುಡ್ಡು, ಹೆಂಡ, ಸೀರೆ, ಕುಕ್ಕರ್‌ಗಳನ್ನು ನೀಡುವ ಜೊತೆಗೆ, ಹಲವು ಆಮಿಷಗಳನ್ನು ಮತದಾರರಿಗೆ ಒಡ್ಡುತ್ತಿದ್ದಾರೆ.

Advertisements

ಹಿಂದಿನಿಂದಲೂ ಚುನಾವಣೆ ಬಂತೆಂದರೆ ಸಾಕು, ರಾಜಕೀಯ ಪಕ್ಷಗಳು ತಮ್ಮದೇ ಆದ ಭರವಸೆಗಳ ದೊಡ್ಡ ಪಟ್ಟಿಯನ್ನೇ ಸಿದ್ದ ಮಾಡಿಟ್ಟುಕೊಳ್ಳುತ್ತವೆ. ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರ, ತಾನು ಈ ಹಿಂದೆ ನೀಡಿದ್ದ ಭರವಸೆಗಳಲ್ಲಿ ಎಷ್ಟನ್ನು ಪೂರೈಸಿದ್ದೇವೆಂದು ಜನರ ಮುಂದಿಡುವಲ್ಲಿ ವಿಫಲವಾಗಿದೆ. ತನ್ನ ಭರವಸೆಗಳು ಏನಾದವು ಎಂಬುದನ್ನು ಪರಾಮರ್ಶಿಸುವುದನ್ನೂ ಬಿಟ್ಟು, ಹೊಸ ಭರವಸೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಉಳಿದ ಪಕ್ಷಗಳೂ ತಮ್ಮ ಭರವಸೆಗಳ ಕೈಪಿಡಿಯನ್ನು ಪ್ರಕಟಿಸುತ್ತಿವೆ. ಮತದಾರರನ್ನು ಸೆಳೆಯಲು ಉಚಿತಗಳ ಸರಮಾಲೆ ಪೋಣಿಸಿ, ಪ್ರಚಾರ ಮಾಡುತ್ತಿವೆ.

ಉಚಿತಗಳ ಮೂಲಕ ಮತಬೇಟೆಗೆ ಇಳಿದ ರಾಜಕೀಯ ಪಕ್ಷಗಳು

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಭರಪೂರ ಸಿದ್ಧತೆ ನಡೆಸಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಇನ್ನಿತರ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಉಚಿತಗಳ ಪಟ್ಟಿಯನ್ನು ಮುಂದಿಡುತ್ತಿವೆ. ಕಾಂಗ್ರೆಸ್ ಐದು ಗ್ಯಾರಂಟಿಗಳ ಜೊತೆಗೆ, 200 ಯುನಿಟ್ ವಿದ್ಯುತ್, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುತ್ತೇವೆಂದರೆ, ಬಿಜೆಪಿ ವರ್ಷದಲ್ಲಿ ಮೂರು ಉಚಿತ ಸಿಲೆಂಡರ್ ಹಾಗೂ ಉಚಿತ ಹಾಲು ನೀಡುವುದಾಗಿ ಹೇಳಿದೆ. ಜೆಡಿಎಸ್, ರೈತ ಯುವಕರನ್ನು ಮದುವೆಯಾದರೆ ₹2 ಲಕ್ಷ ಪ್ರೋತ್ಸಾಹ ಧನ, ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ ₹2000 ಸಹಾಯಧನ, ವರ್ಷಕ್ಕೆ 5 ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಹೇಳಿದೆ.

ಬಿಜೆಪಿಯ ಉಚಿತಗಳು

ಕಾಂಗ್ರೆಸ್ ನೀಡಿರುವ ಉಚಿತ ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ, “ಉಚಿತ ಕೊಡುಗೆಗಳ ಸಂಪ್ರದಾಯಕ್ಕೆ ಕೊನೆ ಹಾಡಬೇಕಿದೆ. ಸರ್ಕಾರವನ್ನು ಈ ರೀತಿ ನಡೆಸಲು ಸಾಧ್ಯವಿಲ್ಲ. ಉಚಿತ ಕೊಡುಗೆಗಳ ಭರವಸೆ ಜನರನ್ನು ಮೂರ್ಖರನ್ನಾಗಿಸುವ ತಂತ್ರವಾಗಿದ್ದು, ಇವುಗಳಿಗೆ ಅಂತ್ಯ ಹಾಡಬೇಕಿದೆ. ಕಾಂಗ್ರೆಸ್ ನೀಡಿದ ಇಂಥ ಭರವಸೆಗಳು ದೇಶದಲ್ಲಿ ಎಲ್ಲಿಯೂ ಅನುಷ್ಠಾನವಾಗಿಲ್ಲ” ಎಂದು ತೀವ್ರ ವಾಗ್ದಾಳಿ ನಡೆಸಿದ್ದರು.
ಇದೀಗ ಅವರದೇ ಪಕ್ಷ ಉಚಿತಗಳ ಭರವಸೆ ನೀಡಿದೆ. ಅವುಗಳು ಹೀಗಿವೆ:

  • ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ ಮೂರು ಬಾರಿ ಅಂದರೆ, ಯುಗಾದಿ, ಗಣೇಶ ಚತುರ್ಥಿ ಹಾಗೂ ದೀಪಾವಳಿ ಸಮಯದಲ್ಲಿ ವಾರ್ಷಿಕ ಮೂರು ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ
  • ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ಉಚಿತ

ಕಾಂಗ್ರೆಸ್‌ನ ಐದು ಗ್ಯಾರಂಟಿಗಳು

ಸದ್ಯ ಅಧಿಕಾರದಿಂದ ಹೊರಗುಳಿದಿದ್ದು, ಅಧಿಕಾರ ಹಿಡಿಯಲು ಹೆಣಗಾಡುತ್ತಿರುವ ಕಾಂಗ್ರೆಸ್, ಸದ್ಯ ಐದು ಗ್ಯಾರೆಂಟಿಗಳನ್ನು ಜನರ ಮುಂದಿಟ್ಟಿದೆ. ತನ್ನ ಪ್ರಣಾಳಿಕೆ ಬಿಡುಗಡೆಗೆ ಸಿದ್ದತೆ ನಡೆಸುತ್ತಿದೆ. ಅದರಲ್ಲಿ ಇನ್ನಷ್ಟು ಉಚಿತಗಳು ಇರುವ ಸಾಧ್ಯತೆಗಳಿವೆ.

  • ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ
  • ಗೃಹ ಲಕ್ಷ್ಮೀ ಯೋಜನೆಯಡಿ ರಾಜ್ಯದ ಪ್ರತಿ ಗೃಹಿಣಿಯರಿಗೆ ತಿಂಗಳಿಗೆ ₹2,000 ನೀಡಲಾಗುತ್ತದೆ. ಈ ಯೋಜನೆಯಿಂದ 1.5 ಕೋಟಿ ಗೃಹಿಣಿಯರಿಗೆ ಅನುಕೂಲವಾಗಲಿದೆ.
  • ‘ಅನ್ನ ಭಾಗ್ಯ’ ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಿದೆ.
  • ನಿರುದ್ಯೋಗಿ ಯುವಕರಿಗೆ ನೆರವಾಗಲು ಯುವ ನಿಧಿ ಯೋಜನೆ ಅಡಿಯಲ್ಲಿ ಪದವಿ ಪಡೆದಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ₹3000 ನೀಡಲಾಗುತ್ತದೆ. ಜೊತೆಗೆ ರಾಜ್ಯದಲ್ಲಿ ಡಿಪ್ಲೊಮಾ ಪದವಿ ಪಡೆದ ನಿರುದ್ಯೋಗಿಗಳಿಗೆ ಭತ್ಯೆಯಾಗಿ ಪ್ರತಿ ತಿಂಗಳು ₹1500 ನೀಡಲಾಗುತ್ತದೆ.
  • ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ಕೊಡುಗೆಯನ್ನು ತನ್ನ ಐದನೇ ಗ್ಯಾರಂಟಿಯಾಗಿ ಘೋಷಿಸಿದೆ.

ಜೆಡಿಎಸ್ ಪ್ರಣಾಳಿಕೆಯ ಉಚಿತ ಭರವಸೆಗಳು

  • ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ ₹2000 ಸಹಾಯಧನ
  • ಪ್ರತಿ ಆಟೋ ಚಾಲಕನಿಗೆ ಪ್ರತಿ ತಿಂಗಳು ₹2 ಸಾವಿರ ಮಾಸಾಶನ
  • ರೈತ ಯುವಕರನ್ನು ಮದುವೆಯಾದ ಯುವತಿಗೆ ₹2 ಲಕ್ಷ ಪ್ರೋತ್ಸಾಹ ಧನ
  • ಗರ್ಭಿಣಿ ತಾಯಂದಿರಿಗೆ 6 ತಿಂಗಳ ಕಾಲ ₹6,000 ಭತ್ಯೆ
  • ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಪ್ರತಿ ಎಕರೆಗೆ ₹10,000 ಸಹಾಯ ಧನ
  • ನೋಂದಾಯಿತ ಖಾಸಗಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಮಾಸಿಕ ₹2 ಸಾವಿರ ಸಹಾಯಧನ

ಎಎಪಿ ಪ್ರಣಾಳಿಕೆ

  • ಆಪ್ ಅಧಿಕಾರದ ಚುಕ್ಕಾಣಿ ಹಿಡಿದರೆ, ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್
  • ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಸಿಟಿ ಬಸ್ ಸಾರಿಗೆ ಸೌಲಭ್ಯ
  • 12 ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ, ತಿಂಗಳಿಗೆ ₹5,000 ಮಾಸಾಶಾನದೊಂದಿಗೆ ಆರು ತಿಂಗಳ ಅವಧಿಯ ಉದ್ಯೋಗ ತರಬೇತಿ
  • ಬಡತನ ರೇಖೆಗಿಂತ ಕೆಳಗಿರುವ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ ₹1,000 ಸಬಲೀಕರಣ ಭತ್ಯೆ
  • ಕೃಷಿಗೆ 12 ಗಂಟೆಗಳ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.

ಈ ಸುದ್ದಿ ಓದಿದ್ದೀರಾ? ಮೋದಿ ರೋಡ್‌ ಶೋ | 45 ನಿಮಿಷದ ಮೆರವಣಿಗೆಗೆ 5 ಗಂಟೆ ರಸ್ತೆಗಳು ಬಂದ್; ಬಸವಳಿದ ಬೆಂಗಳೂರು

ಉಚಿತಗಳ ಘೋಷಣೆ ಮಾಡುವುದು ಖಂಡಿತ ತಪ್ಪಲ್ಲ. ದೊಡ್ಡ ದೊಡ್ಡ ಉದ್ದಿಮೆಗಳಿಗೆ ಕೋಟ್ಯಂತರ ರೂಪಾಯಿ ಸಬ್ಸಿಡಿ, ಸಾಲ ಕೊಡುವುದಕ್ಕೆ ಹೋಲಿಸಿದರೆ, ಬಡಜನರಿಗೆ ಉಚಿತವಾಗಿ ಕೊಡುವುದಕ್ಕೆ ವ್ಯಯವಾಗುವ ಹಣ ಏನೇನೂ ಅಲ್ಲ. ರಾಜಕೀಯ ಪಕ್ಷಗಳು ಜನರಿಗೆ ರಸ್ತೆ, ನೀರು, ಆರೋಗ್ಯ ಸೇವೆ, ಶಿಕ್ಷಣ, ಮನೆಯಂಥ ಮೂಲಸೌಕರ್ಯಗಳನ್ನು ಮೊದಲು ಕಲ್ಪಿಸಬೇಕು. ನಂತರ ಅವರವರ ಆದ್ಯತೆ ಮೇರೆಗೆ ಉಚಿತವಾಗಿ ಏನಾದರೂ ಘೋಷಿಸಬಹುದು, ಏನಾದರೂ ಕೊಡಬಹುದು. ಆದರೆ, ಉಚಿತಗಳ ಭರವಸೆ ಕೇವಲ ಭರವಸೆಯಾಗಿಯೇ ಉಳಿಯಬಾರದು. ಜನರ ಮತ ಪಡೆಯುವ ಏಕೈಕ ಉದ್ದೇಶದಿಂದ ಮಾಡಿದ ಘೋಷಣೆ ಅದಾಗಿರಬಾರದು. ಆಗ ಮಾತ್ರ ಜನರಿಗೆ ಅಂಥ ಪಕ್ಷಗಳ, ಅಂಥ ಘೋಷಣೆಗಳ ಬಗ್ಗೆ ವಿಶ್ವಾಸ ಉಳಿಯುತ್ತದೆ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X