ಹಿಂದೂ ಮಹಿಳೆಗೆ ರಕ್ತದಾನ ಮಾಡಲು ಮುಸ್ಲಿಂ ವ್ಯಕ್ತಿಯೊಬ್ಬರಿಗೆ ವೈದ್ಯರು ಅನುಮತಿ ನಿರಾಕರಿಸಿದ ಆತಂಕಕಾರಿ ಘಟನೆ ಮಧ್ಯಪ್ರದೇಶದ ಪನ್ನಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಕ್ತದಾನದಲ್ಲೂ ಕೋಮುವಾದ ಮಾಡಿದ ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದೆ. ಪವನ್ ಸೋಂಕರ್ ಎಂಬ ವ್ಯಕ್ತಿ ತನ್ನ ತಾಯಿಯ ಚಿಕಿತ್ಸೆಗಾಗಿ ಪನ್ನಾ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದು, ವೈದ್ಯರು ತುರ್ತಾಗಿ ರಕ್ತದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಸೋಂಕರ್ ತನ್ನ ಮುಸ್ಲಿಂ ಸ್ನೇಹಿತನನ್ನು ದಾನಿಯಾಗಿ ಆಸ್ಪತ್ರೆಗೆ ಕರೆತಂದಿದ್ದಾನೆ. ಆದರೆ ವೈದ್ಯರು ಸೋಂಕರ್ ಸ್ನೇಹಿತ ಮುಸ್ಲಿಂ ಎಂಬ ಕಾರಣಕ್ಕೆ ರಕ್ತದಾನ ಮಾಡಲು ಅವಕಾಶ ನೀಡಿಲ್ಲ.
ಸೆಪ್ಟೆಂಬರ್ 8ರಂದು ಭಾನುವಾರ ಈ ಘಟನೆ ನಡೆದಿದ್ದು, ಈಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ನಾವು ಸೋಂಕರ್ ಮತ್ತು ವೈದ್ಯರ ನಡುವೆ ನಡೆದ ಕೆಲವೇ ಸೆಕೆಂಡುಗಳ ಸಂಭಾಷಣೆಯನ್ನು ನೋಡಬಹುದು.
“ಮುಸ್ಲಿಂ ವ್ಯಕ್ತಿಯಾದ ಕಾರಣ ಹಿಂದೂ ಮಹಿಳೆಗೆ ರಕ್ತದಾನ ಮಾಡಲು ಅವಕಾಶ ನೀಡಲಾಗದು” ಎಂದು ವೈದ್ಯ ಹೇಳಿರುವುದು ಈ ವಿಡಿಯೋದಲ್ಲಿ ನಾವು ಕಾಣಬಹುದು. ಒಂದು ವೇಳೆ ನಾವು ಮುಸ್ಲಿಂ ವ್ಯಕ್ತಿಯ ರಕ್ತವನ್ನು ಹಿಂದೂ ಮಹಿಳೆಗೆ ನೀಡಿದರೆ ಅವರಿಗೆ ತೊಂದರೆಯಾಗುತ್ತದೆ ಎಂದೂ ವೈದ್ಯ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮುಸ್ಲಿಂ ಶಾಸಕರಿಗಿದ್ದ ಶುಕ್ರವಾರದ ನಮಾಜ್ ವಿರಾಮ ರದ್ದುಗೊಳಿಸಿದ ಅಸ್ಸಾಂ ಸರ್ಕಾರ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಕ್ತಕ್ಕೆ ಯಾವುದೇ ಧರ್ಮವಿಲ್ಲ ಮತ್ತು ಜೀವ ಉಳಿಸುವ ರಕ್ತವನ್ನು ದಾನ ಮಾಡಲು ವ್ಯಕ್ತಿಯ ಧರ್ಮ ಎಂದಿಗೂ ಅಡ್ಡಿಯಾಗಬಾರದು ಎಂದು ಹಲವಾರು ನೆಟ್ಟಿಗರು ಹೇಳಿದ್ದಾರೆ.
ಇಂತಹ ಘಟನೆಗಳು ದೇಶದ ಸಾಮಾಜಿಕ ಸ್ಥಿತಿ ಹೇಗೆ ಬದಲಾಗುತ್ತಿದೆ ಮತ್ತು ಧರ್ಮದ ಆಧಾರದ ಮೇಲೆ ಅಸಹಿಷ್ಣುತೆ ಹೇಗೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ವೈದ್ಯಕೀಯ ಕ್ಷೇತ್ರಕ್ಕೂ ಧರ್ಮ ದ್ವೇಷ ಬಂದಿರುವುದು ಆತಂಕಕಾರಿ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
We had to reach here:
— Apoorvanand अपूर्वानंद (@Apoorvanand__) September 8, 2024
Hindus cannot be given Muslim blood.
एमपी के अस्पताल ने हिन्दू को मुस्लिम का खून चढ़ाने से किया इनकार! https://t.co/PO9Ob1SzE5 via @SatyaHindi
“ಹಿಂದೂಗಳಿಗೆ ಮುಸ್ಲಿಮರ ರಕ್ತವನ್ನು ನೀಡುವುದಿಲ್ಲ ಎಂದು ವೈದ್ಯರೇ ಹೇಳುವಂತಹ ಸ್ಥಿತಿಗೆ ಬಂದು ನಾವು ತಲುಪಿದ್ದೇವೆ” ಎಂದು ನೆಟ್ಟಿಗರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ನೆಟ್ಟಿಗರು, “ಈಗ ರಕ್ತದಲ್ಲೂ ಹಿಂದೂ ಮುಸ್ಲಿಂ ಇದೆಯೇ? ಯಾವುದೇ ವ್ಯಕ್ತಿಯಾದರೂ ರಕ್ತದ ಬಣ್ಣ ಮಾತ್ರ ಕೆಂಪು. ಆದರೆ ನಮ್ಮ ದೇಶದಲ್ಲಿ ರಕ್ತವೂ ಹಿಂದೂ ಮುಸ್ಲಿಂ ಆಗಿಬಿಟ್ಟಿದೆ” ಎಂದು ಕಾಮೆಂಟ್ ಮಾಡಿದ್ದಾರೆ.
In MP's Panna, a doctor refused to transfuse blood of Muslim to a Hindu woman at govt hospital. Last month,the mother of a man Pawan Sonkar was in need of blood. he brought his Muslim friend to transfuse the blood but the doctor said that he can't transfuse Muslim blood to Hindu pic.twitter.com/ApvPv9fK3O
— Waquar Hasan (@WaqarHasan1231) September 8, 2024

ಈತ ವೈದ್ಯನಲ್ಲ. ರಾಕ್ಷಸ. ಇದಕ್ಕೆ ಮೂಲ ಕಾರಣ, ಮೋದಿ, ಯೋಗಿ ಅಡ್ವಾಣಿ ಹಾಗೂ ಹಿಂದುತ್ವ ಮಾಡಿದ ಸಂಘಿಗಳು ಕಾರಣ. ಇವರನ್ನು ಎಷ್ಟು ಬೇಗ ಸಮಾಜದಿಂದ ಹೊರ ದಬ್ಬಲು ಸಾಧ್ಯ ಆಗುತ್ತದೆಯೋ ಅಷ್ಟು ಸಮಾಜಕ್ಕೆ ಲಾಭವಿದೆ.