ಜೀವನದಲ್ಲಿ ಜಿಗುಪ್ಸೆ, ಸಾಲಬಾಧೆಗೆ ಮನನೊಂದು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಯೊಬ್ಬರು ಬೀದರ್ ತಾಲೂಕಿನ ಚಿಟ್ಟಾ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೀದರ್ ನಗರದ ರಾವ್ ತಾಲೀಂ ನಿವಾಸಿ ಮೊಹಮ್ಮದ್ ಸೋಹೆಲ್ (29) ಮೃತ ವಿದ್ಯಾರ್ಥಿ. ಸೋಹೆಲ್ ಬ್ರಿಮ್ಸ್‌ನ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ, ವ್ಯಾಸಂಗಕ್ಕಾಗಿ ವಿವಿಧ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರು ಎನ್ನಲಾಗುತ್ತಿದೆ.
ಇತ್ತೀಚೆಗೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಕ್ಲಿನಿಕ್ ಶುರು ಮಾಡಿದ್ದರು. ಆದರೆ, ಕ್ಲಿನಿಕ್ ಚನ್ನಾಗಿ ನಡೆದಿರಲಿಲ್ಲ. ಅದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಷಕರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸೋಹೆಲ್ ಸೆ.4 ರಂದು ಕಾಣೆಯಾಗಿದ್ದಾರೆ ಎಂದು ಅವರ ತಂದೆ ಮಹಮ್ಮದ್ ಯುಸೂಫ್ ಸೆ.7 ರಂದು ಚೌಬಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೆ.10 ಚಿಟ್ಟಾ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಅವರ ಬೈಕ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | 35 ಗುಂಟೆಯಲ್ಲಿ ʼಡ್ರ್ಯಾಗನ್ ಫ್ರೂಟ್ʼ ಬೆಳೆದ ರೈತ; ವರ್ಷಕ್ಕೆ ಲಕ್ಷ ಲಕ್ಷ ಆದಾಯ
ಈ ಕುರಿತು ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.