ಹಾಸನ | ಕಮ್ಯೂನಿಸ್ಟ್ ಹಿರಿಯ ನಾಯಕ ಸೀತಾರಾಂ ಯೆಚೂರಿಯವರಿಗೆ ಶ್ರದ್ದಾಂಜಲಿ

Date:

Advertisements

ತಮ್ಮ ಬದುಕನ್ನು ದಲಿತರು, ದುಡಿಯುವ ವರ್ಗದ ಜನರಿಗಾಗಿಯೇ ಮುಡಿಪಾಗಿಟ್ಟಿದ್ದ ಸೀತಾರಾಂ ಯೆಚೂರಿಯವರ ನಿಧನ ಕಮ್ಯೂನಿಸ್ಟ್ ಪಕ್ಷಗಳಿಗೆ ಮಾತ್ರವಲ್ಲದೆ ಇಡೀ ದೇಶದ ದುಡಿಯುವ ವರ್ಗಕ್ಕೆ ತುಂಬಲಾರದ ನಷ್ಟ ಎಂದು ಸಿಪಿಐಎಂ ಹಾಸನ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಹೇಳಿದರು.

ನಗರದ ಸಿಪಿಐಎಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಿಪಿಐಎಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಂತಕ, ವಾಗ್ಮಿ, ಮುತ್ಸದಿ ರಾಜಕಾರಣಿಯಾಗಿದ್ದ ಸೀತಾರಾಂ ಯೆಚೂರಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

“ಹಾಸನದ ಸಿಗರನಹಳ್ಳಿಯಲ್ಲಿ ನಡೆದ ದಲಿತರ ದೇವಸ್ಥಾನ ಪ್ರವೇಶ ಹೋರಾಟದಲ್ಲಿ ಭಾಗಿಯಾಗುವ ವೇಳೆ ದೆಹಲಿ ರಾಜಕಾರಣದಲ್ಲಿ ಆತ್ಮೀಯರಾಗಿರುವ ಕರ್ನಾಟಕ ಮೂಲದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸೀತಾರಾಂ ಯೆಚೂರಿಯವರಿಗೆ ಫೋನ್ ಮಾಡಿ, ʼನೀವು ಬೆಂಗಳೂರಲ್ಲೇ ಬೇಕಾದರೆ ಒಂದು ಪ್ರೆಸ್ ಮೀಟ್ ಮಾಡಿ. ದಯವಿಟ್ಟು ಹಾಸನಕ್ಕೆ ಹೋಗಬೇಡಿ. ದಲಿತರ ದೇವಸ್ಥಾನ ಪ್ರವೇಶ ರಾಜಕೀಯ ಬೇರೆ ಇದೆʼಯೆಂದು ದೇವೇಗೌಡರು ಮನವಿ ಮಾಡಿದ್ದರು. ಆದರೆ ಸೀತಾರಾಂ ಯೆಚೂರಿ ಈ ಮನವಿಗೆ ಹಿಂಜರಿಯದೆ, ʼದೇವೇಗೌಡರೇ, ಇದು ನಮ್ಮ ಪಾರ್ಟಿ ನಿರ್ಧಾರ. ಏನು ನಿರ್ಧಾರವಾಗಿದೆಯೋ ಹಾಗೆಯೇ ಮಾಡುತ್ತೇನೆʼ ಎಂದ ಅವರು ಒಂದು ಸಣ್ಣ ಹಳ್ಳಿಯಲ್ಲಿನ ದೇವಸ್ಥಾನ ಪ್ರವೇಶ ಹೋರಾಟದಲ್ಲಿ ಭಾಗಿಯಾಗಿದ್ದರು. ಇಂತಹ ನಾಯಕನ ಅಗಲಿಕೆ ಅತೀವ ನೋವನ್ನುಂಟು ಮಾಡಿದೆ” ಎಂದು ಮರುಗಿದರು.

Advertisements

“ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಯೆಚೂರಿಯವರು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 12ರಂದು ಸಾವನ್ನಪ್ಪಿದ್ದರು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ಯೆಚೂರಿಯವರು ಉನ್ನತ ವ್ಯಾಸಂಗಕ್ಕಾಗಿ ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ಪ್ರವೇಶಪಡೆಯುತ್ತಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿಯವರನ್ನು ಕುಲಸಚಿವೆ ಸ್ಥಾನಕ್ಕೆ ರಾಜಿನಾಮೆ‌ ನೀಡಬೇಕೆಂದು ಒತ್ತಾಯಿಸಿ‌ ನಡೆದ ಪ್ರತಿಭಟನೆಯಲ್ಲಿ ಮುಂದಾಳತ್ವ ವಹಿಸಿದ್ದ ಯೆಚೂರಿಯವರು ಇಂದಿರಾ ಗಾಂಧಿಯವರ ಎದುರೇ ನಿಂತು ರಾಜಿನಾಮೆ ಬೇಡಿಕೆಯನ್ನು ಮುಂದಿಟ್ಟಿದ್ದರು” ಎಂದು ತಿಳಿಸಿದರು.

“ಅಲ್ಲಿಂದ ಇವರು ರಾಜಕೀಯರಂಗ ಪ್ರವೇಶಿಸಿ ಕೊನೆಯ ಉಸಿರಿರುವವರೆಗೂ ಬಡವರ, ದುಡಿಯುವ ಜನರ ಪರವಾಗಿ ಕೆಲಸ ಮಾಡಿದರು. ಮೂರು ಬಾರಿ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಎರಡು ಬಾರಿ ಎಸ್‌ಎಫ್‌ಐನ ರಾಷ್ಟ್ರೀಯ ಅಧ್ಯಕ್ಷರಾಗಿ, ಮೂರು ಬಾರಿ ಸಿಪಿಐಎಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ, ಅತ್ಯುತ್ತಮ ಸಂಸತ್ ಪಟುವಾಗಿ ಕೆಲಸ ಮಾಡಿದ್ದಾರೆ” ಎಂದರು.

ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಎಂ ಸಿ ಡೋಂಗ್ರೆ ಮಾತನಾಡಿ, “ಯೆಚೂರಿಯವರು ಎಡಪಕ್ಷಗಳ ದೊಡ್ಡ ಶಕ್ತಿಯಾಗಿದ್ದರು. ಅವರ ಅಗಲಿಕೆ ದೊಡ್ಡ ಆಘಾತವಾಗಿದೆ. 2014ರಿಂದ ನಿರಂತರವಾಗಿ ಮೋದಿ ಸರ್ಕಾರದ ವಿರುದ್ದ ದೊಡ್ಡ ಆಂದೋಲವನ್ನು ನಡೆಸಿದ್ದರು” ಎಂದರು.

ಹಿರಿಯ ಪತ್ರಕರ್ತ ಆರ್ ಪಿ ವೆಂಕಟೇಶ್ ಮೂರ್ತಿ ಮಾತನಾಡಿ, “ಯೆಚೂರಿಯವರು ನೇಪಾಳದ ಪ್ರಜಾಪ್ರಭುತ್ವ ಸರ್ಕಾರದ ರಚನೆಯಲ್ಲಿ ಯೆಚೂರಿಯವರ ಪಾತ್ರ ಬಹಳ ಪ್ರಮುಖವಾಗಿತ್ತು. ಇವರು ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ಮಲಗಿದ್ದಾಗಲೂ ದೇಶದ ಬಗ್ಗೆ, ಬಡಜನರ ಬಗ್ಗೆ ಯೋಚಿಸುತ್ತಿದ್ದರು ಅಂತ ಅನಿಸುತ್ತದೆ. ಕಮ್ಯೂನಿಸ್ಟ್ ಬದ್ದತೆ ನಿಜಕ್ಕೂ ಪ್ರಶಂಸನೀಯವಾದದ್ದು” ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್ ಆರ್ ನವೀನ್ ಕುಮಾರ್ ಮಾತನಾಡಿ, “ಯೆಚೂರಿಯವರು ಕಮ್ಯೂನಿಸ್ಟ್ ಪಕ್ಷದ ಒಳಗೆ ಮಾತ್ರವಲ್ಲದೆ ಇತರೆ ಎಲ್ಲ ಪಕ್ಷ ಮತ್ತು ಎಲ್ಲ ವಿಭಾಗಗಳ ನಡುವೆ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ಅವರು ಸಂಸತ್ತಿನಲ್ಲಿ ಮಾಡಿದ ಪ್ರತಿಯೊಂದು ಭಾಷಣಗಳೂ ಸಂಶೋಧನೆಯಂತೆ ನಿರಂತರವಾಗಿ ಕಾಯ್ದಿಟ್ಟುಕೊಳ್ಳಬೇಕಾದಂತಹ ನುಡಿಗಳು. 2004ರಲ್ಲಿ ರಚನೆಯಾದ ಯುಪಿಗೆ ಒಂದು ಸರ್ಕಾರದ ಸಮಾನ ಕನಿಷ್ಟ ಕಾರ್ಯಕ್ರಮ ರಚಿಸುವಲ್ಲಿ ಆ ಮೂಲಕ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕಡ್ಡಾಯ ಶಿಕ್ಷಣ ಹಕ್ಕು, ಅರಣ್ಯ ಹಕ್ಕು ಕಾಯ್ದೆಗಳನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯೆಚೂರಿಯವರು ನಿರಂತರವಾಗಿ ಕರ್ನಾಟಕಕ್ಕೆ ಭೇಟಿ‌ಕೊಟ್ಟು ದುಡಿಯುವ ವರ್ಗದ ಚಳವಳಿ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಚಳುವಳಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದರು” ಎಂದು ಸ್ಮರಿಸಿದರು.

ಈ ಸುದ್ದಿ ಓದಿದ್ದೀರಾ? ಮಾಗಡಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಸರ್ಕಾರ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

“ಕೋಮುವಾದಿ ಫ್ಯಾಸಿಸ್ಟ್ ಮೋದಿ ಸರ್ಕಾರದ ವಿರುದ್ದ ಸಂವಿಧಾನದ ಉಳಿವಿಗಾಗಿ, ಒಕ್ಕೂಟ ವ್ಯವಸ್ಥೆಯ ಉಳಿವುಗಾಗಿ ದೇಶದ ಎಲ್ಲ ಜಾತ್ಯತೀತ ಪ್ರಜಾಪ್ರಭುತ್ವ ಶಕ್ತಿಗಳನ್ನು ಒಂದುಗೂಡಿಸುವಲ್ಲಿ ಯೆಚೂರಿಯವರ ಪಾತ್ರ ದೊಡ್ಡದು. ಸಾವಿನಲ್ಲೂ ಸಾರ್ಥಕತೆ ಮೆರೆದ ಯೆಚೂರಿಯವರು ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆಗೆ ಅನುಕೂಲವಾಗುವಂತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ನೀಡಿದ್ದಾರೆ” ಎಂದರು.

ಸಭೆಗೂ ಮುನ್ನ ಯೆಚೂರಿಯವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ‌ ಮಾಡಿ ಮೌನಾಚರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ಕಾಂಗ್ರೆಸ್ ಮುಖಂಡ ದೇವರಾಜೇಗೌಡ, ಮಲ್ಲಿಗೆವಾಳು ದ್ಯಾವಪ್ಪ, ಹಿರಿಯ ದಲಿತ ಮುಖಂಡ ಎಚ್ ಕೆ ಸಂದೇಶ್, ಪರಮಶಿವಯ್ಯ, ರಾಜು ಗೊರೂರು, ಪುಷ್ಪ ಎಂ ಬಿ, ಜಿ ಪಿ ಸತ್ಯನಾರಾಯಣ, ಅರವಿಂದ, ಮುಬಷಿರ್ ಅಹಮದ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X