ನಾಗಮಂಗಲ | ರಾಜಕೀಯ ಪಿತೂರಿಗಳಿಂದ ಕೋಮುಗಲಭೆ ಸೃಷ್ಟಿ: ಎಸ್ ಹೆಚ್ ಲಿಂಗೇಗೌಡ ಆರೋಪ

Date:

Advertisements

ರಾಜಕೀಯ ಪಿತೂರಿಗಳು ಮತ್ತು ಲಾಭದಾಸೆಯ ಗುಂಪುಗಳು ಕೋಮುಗಲಭೆಗಳನ್ನು ಎಬ್ಬಿಸುವ ಮೂಲಕ ಶಾಂತಿ ಭಂಗ ಉಂಟು ಮಾಡುತ್ತಿರುವುರಿಂದ ಇಂದು ಗಂಭೀರ ಸಮಸ್ಯೆಯಾಗಿದೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್ ಹೆಚ್ ಲಿಂಗೇಗೌಡ ಆರೋಪಿಸಿದರು.

ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ದಿನಗಳಲ್ಲಿ ಕೋಮು ಹಿಂಸೆಯನ್ನು ಉಂಟುಮಾಡಲು ರಾಜಕೀಯ ಪಕ್ಷಗಳ ಪ್ರಚೋದನೆಯೊಂದಿಗೆ ಕ್ರಿಯಾಶೀಲವಾಗಿರುವ ಗುಂಪುಗಳು ಈ ಗಲಭೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಈ ಗುಂಪುಗಳ ಹಲವು ಸದಸ್ಯರು ಮದ್ಯ, ಡ್ರಗ್ಸ್‌ಗಳಿಗೆ ದಾಸರಾಗಿದ್ದು, ತಮ್ಮ ಕೃತ್ಯಗಳಿಂದ ಸಮುದಾಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಅರಿವಿಲ್ಲದೆ ಓಡಾಡುತ್ತಿದ್ದಾರೆ ಎಂದರು.

ಇಲ್ಲಿಯೂ, ಕೆಲವರು ತಮ್ಮ ಸಮುದಾಯದ ಜನರ ಬದುಕನ್ನು ಬಲಿಪಡೆದು ಹಣ ಗಳಿಸುವ ಹಪಾಹಪಿಯವರಾಗಿದ್ದಾರೆ. ರಾಜಕೀಯ ನಾಯಕರ ಆದೇಶದಂತೆ ಈ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ಕೋಮುಗಲಭೆಗಳನ್ನು ಪ್ರಚೋದಿಸುವಲ್ಲಿ ತೊಡಗಿವೆ. ಈ ಕಾರ್ಯವು ಖಾಸಗಿಯಾಗಿ, ಕೆಲವು ಪಕ್ಷಗಳ ಹಣವನ್ನೂ ಪಡೆಯುತ್ತಿದೆ. ಹಿಂದೂ ಸಮುದಾಯವನ್ನು ಕೆರಳಿಸಲು ಮುಸ್ಲಿಂ ಮತದವರನ್ನು ಬಳಸುವುದು ಹಾಗೂ ಮುಸ್ಲಿಂ ಸಮುದಾಯವನ್ನು ಕೆರಳಿಸಲು ಹಿಂದೂಗಳನ್ನು ಬಳಸುವ ರಾಜಕೀಯ ತಂತ್ರಗಳು ಇತ್ತೀಚೆಗೆ ಹೆಚ್ಚಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements
WhatsApp Image 2024 09 14 at 6.56.05 PM 1

ಜಿಲ್ಲಾಧ್ಯಕ್ಷ ಡಿ ಜಿ ನಾಗರಾಜು ಮಾತನಾಡಿ, ಈ ಗಲಭೆಗಳಲ್ಲಿ ಭಾಗಿಯಾಗಿರುವವರ ಹಣಕಾಸು ಪರಿಸ್ಥಿತಿಗಳನ್ನು ಗಮನಿಸಿದರೆ ರಾಜಕೀಯ ಲಾಭಕ್ಕಾಗಿ ನಡೆಯುವ ಪಿತೂರಿಗಳು ಎಷ್ಟು ಗಂಭೀರವಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಅನೇಕರಿಗೆ ಹಣ ಕೊಡಿಸಿ ಗಲಭೆಗಳಲ್ಲಿ ಭಾಗಿಯಾಗಲು ಪ್ರಚೋದಿಸುತ್ತಾರೆ ಎಂದರು.

ನಾಗಮಂಗಲ ತಾಲೂಕು ಅಧ್ಯಕ್ಷ ಬಾಲರಾಜು ಮಾತನಾಡಿ, ನಾಗಮಂಗಲದ ಘಟನೆ ಕೇವಲ ರಾಜಕಾರಣಿಗಳ ಪಿತೂರಿಯೇ ಅಲ್ಲ, ಪೊಲೀಸ್ ಇಲಾಖೆಯ ವೈಫಲ್ಯವೂ ಆಗಿದೆ. ಪೊಲೀಸ್ ಅಧಿಕಾರಿಗಳ ಮೇಲೆ ರಾಜಕಾರಣಿಗಳ ಒತ್ತಡದಿಂದಾಗಿ, ಕಾನೂನು ಕ್ರಮಗಳನ್ನು ಸರಿಯಾಗಿ ಕೈಗೊಳ್ಳದಿರುವುದೇ ಇಂತಹ ಅನೈತಿಕತೆಯ ಚಟುವಟಿಕೆಗಳನ್ನು ಪ್ರಚೋದಿಸುತ್ತಿದೆ. ಹಿಂದೆ ನಡೆದ ಕೋಮುಗಲಭೆಗಳಲ್ಲಿ ಭಾಗವಹಿಸಿದವರ ವಿರುದ್ಧದ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಮತ್ತು ಇಂತಹವರನ್ನು ಬೆಂಬಲಿಸುವ ರಾಜಕಾರಣಿಗಳ ಕಾರಣದಿಂದ ಈ ಸಮಸ್ಯೆ ಇನ್ನಷ್ಟು ದೊಡ್ಡದಾಗಿದೆ ಎಂದರು.

ಇದನ್ನು ಓದಿದ್ದೀರಾ? ದಾವಣಗೆರೆ | ವಿಶೇಷ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಬಾಗಿಲು ತೆರೆದಿಟ್ಟ ‘ಮಸೀದಿ’

ನಾಗಮಂಗಲ ತಾಲೂಕು ಕಾರ್ಯದರ್ಶಿ ಸಿರಾಜ್ ಅಹಮದ್ ಮಾತನಾಡಿ, ಇಂಟೆಲಿಜೆನ್ಸ್, ಪೊಲೀಸ್ ವೈಫಲ್ಯವು ಸಹ ಇಂತಹ ಗಲಭೆಗಳನ್ನು ತಡೆಯುವಲ್ಲಿ ವಿಫಲವಾಗಿವೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಸ್ಥಾಪನೆ ಕಷ್ಟವಾಗುತ್ತಿದೆ. ಈ ವೈಫಲ್ಯಗಳಿಗೆ ಸರ್ಕಾರ ಮತ್ತು ಜನರು ಗಟ್ಟಿಯಾಗಿ ಪ್ರತಿರೋಧವೊಡ್ಡಿ, ಶಿಸ್ತಾಗಿ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತ ಅಧ್ಯಕ್ಷ ಮುರುಗೇಶ್, ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್ ಹೆಬ್ಬಕವಾಡಿ, ಮಂಡ್ಯ ಅಧ್ಯಕ್ಷ ರವೀಂದ್ರ ಕೊತ್ತತ್ತಿ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X