ಟೊಮ್ಯಾಟೊ ಗಿಡಗಳ ಮಧ್ಯೆ 34 ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಿಂಗಾನಹಳ್ಳಿ ಗ್ರಾಮದ ಶ್ರೀನಿವಾಸ್ ಅಲಿಯಾಸ್ ಸೀನಪ್ಪ ಬಂಧಿತ ಆರೋಪಿ.

ಸೀನಪ್ಪ ತನ್ನ ಹೊಲದಲ್ಲಿ ಬೆಳೆದಿದ್ದ ಟೊಮ್ಯಾಟೋ ಗಿಡಗಳ ಮಧ್ಯೆ ತೊಗರಿ ಗಿಡಗಳನ್ನು ಹಾಕಿ ಅದರ ನಡುವೆ ಯಾರಿಗೂ ಗೊತ್ತಾಗದಂತೆ ಗಾಂಜಾ ಗಿಡಗಳನ್ನು ಬೆಳಸಿದ್ದ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಗಾಂಜಾ ಗಿಡಗಳು ಮತ್ತು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಸೆ.16, 17ರಂದು ಮುರುಗಮಲ್ಲ ದರ್ಗಾ ಉರೂಸ್; ಆರೋಗ್ಯಾಧಿಕಾರಿಯಾಗಿ ಡಾ.ಸೂಫಿಯನ್ ನೇಮಕ
17 ಲಕ್ಷ ಮೌಲ್ಯದ ಗಾಂಜಾ ಗಿಡಗಳು ವಶ
ಆರೋಪಿ ಸೀನಪ್ಪ ತನ್ನ ಹೊಲದಲ್ಲಿ 17,64,800 ಮೌಲ್ಯದ, ಸುಮಾರು 44 ಕೆ.ಜಿ ತೂಕದ 34 ಗಾಂಜಾ ಗಿಡಗಳನ್ನು ಬೆಳೆಸಿದ್ದ ಎನ್ನಲಾಗಿದ್ದು, ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.