ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಆದ್ದರಿಂದ ಮುಸ್ಲಿಮರನ್ನು ಅನುಮಾನದಿಂದ ನೋಡುವುದನ್ನು ನಿಲ್ಲಿಸಬೇಕು ಎಂದು ಡಾ. ಕೆ ಆರ್ ದುರ್ಗಾದಾಸ್ ತಿಳಿಸಿದರು.
ಧಾರವಾಡ ನಗರದ ರಂಗಾಯಣದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ವತಿಯಿಂದ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್ ಲೇಖನ ಸಂಕಲನ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಮ್ಮ ದೇಶದಲ್ಲಿ ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ನಿಲ್ಲಿಸಬೇಕು. ಜಾತಿ, ಮತ, ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳು ದಿನಂಪ್ರತಿ ನಡೆಯುತ್ತಿವೆ. ಅಲ್ಲದೆ ಪೂರ್ವಾಗ್ರಹ ಪೀಡಿತರು ಮುಸಲ್ಮಾನ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮತ್ತೊಂದು ಸಮುದಾಯವನ್ನು ಎತ್ತಿಕಟ್ಟಿ ಜನರಲ್ಲಿ ದ್ವೇಷ ಬಿತ್ತುವುದು ಮತ್ತು ಮುಸ್ಲಿಮರನ್ನು ಅನುಮಾನದಿಂದ ನೋಡುವುದನ್ನು ನಿಲ್ಲಿಸಬೇಕು. ಸಂವಿಧಾನದ ದೃಷ್ಟಿಯಲ್ಲಿ ಸರ್ವರೂ ಸಮಾನರಾಗಲದ ಕಾರಣ ಸರ್ಕಾರಗಳು ಎಲ್ಲರನ್ನೂ ಸಮಾನವಾಗಿ ಕಾಣಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಜುಮನ ಸಂಸ್ಥೆ ಉಪಾಧ್ಯಕ್ಷ ಬಸೀರ ಅಹ್ಮದ್ ಜಾಗೀರದಾರ, ಲಜನತ್ ಉಲ್ ಉಮೇಲಾ ಅಧ್ಯಕ್ಷ ಮುಫ್ತಿ ಮೊಹಮ್ಮದ್ ಯೂಸುಫ್, ಮುಸ್ತಾಕ್ ಅಹ್ಮದ್ ಹಾವೇರಿ ಪೇಟ, ಎಸ್,ವಾಯ್, ಶೇಖ್ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ದಾವಣಗೆರೆ | ವಿಶೇಷ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಬಾಗಿಲು ತೆರೆದಿಟ್ಟ ‘ಮಸೀದಿ’
ಕಾರ್ಯಕ್ರಮದ ಮೊದಲು ಮೊಹಮ್ಮದ್ ಇಸ್ಮಾಯಿಲ್ ಬೀಡಿವಾಲೆ ಕುರಾನ್ ಪಠಣ ಮಾಡಿದರು,
ಜಾವೀದ್ ಗೋಲಂದಾಜ ಕಾರ್ಯಕ್ರಮ ನಿರೂಪಿಸಿದರು.