ಕಲ್ಯಾಣ ಕರ್ನಾಟಕದ ಜನರು ಗುಳೆ ಹೋಗುವುದನ್ನು ತಡೆಯಲು ವಿದ್ಯಾವಂತರಿಗೆ ಹಾಗೂ ಇತರರಿಗೆ ಸ್ಥಳೀಯವಾಗಿಯೇ ಕೆಲಸಗಳು ಸಿಗುವಂತಾಗಬೇಕು. ಹಾಗಾಗಿ ಐಟಿ ಕಂಪೆನಿಗಳು ಸ್ಥಾಪನೆಯಾಗಿ ತಮ್ಮ ಹುಟ್ಟೂರಿನಲ್ಲಿಯೇ ಕೆಲಸ ಸಿಗುವಂತಾಗಬೇಕು ಎಂದು ಅಪ್ಪಾರಾಯ ಬಡಿಗೇರ ಆಗ್ರಹಿಸಿದ್ದಾರೆ.
ಕಲಬುರಗಿ ನಗರದಲ್ಲಿ ಪತ್ರಕೆ ಹೇಳಿಕೆ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಜಿಲ್ಲೆಗಳ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ನೆರೆ ರಾಜ್ಯಗಳಿಗೆ ಮತ್ತು ದೂರದ ಬೆಂಗಳೂರಿಗೆ ಗುಳೆ ಹೋಗುತ್ತಾರೆ. ವಯಸ್ಸಾದ ತಂದೆ ತಾಯಿಗಳನ್ನು ಬಿಟ್ಟು ಹೋಗುವುದರಿಂದ ಇನ್ನಷ್ಟು ಕಷ್ಟವಾಗುತ್ತಿದೆ. ದೂರದ ಊರುಗಳಿಗೆ ಹೋದರೂ ಕೂಡಾ ಕಡಿಮೆ ಸಂಬಳಕ್ಕೆ ಕೆಲಸ ಮಾಬೇಕಾದ ಅನಿವಾರ್ಯತೆ ಎದುರಾಗಿದೆ” ಎಂದು ಹೇಳಿದರು.
“ಬೆಂಗಳೂರಿನಂತಹ ನಗರಗಳಲ್ಲಿ ಒಬ್ಬರು ದುಡಿದು ಜೀವನ ಸಾಗಿಸುವದೇ ಕಷ್ಟ ಹೀಗಿರುವಾಗ ಅವರು ತಮ್ಮ ಮನೆಗಳಿಗೂ ಹಣ ಕಳಿಸಬೇಕು. ಇದು ತುಂಬಾ ಹೊರೆಯಾಗುತ್ತದೆ. ಹಾಗಾಗಿ ಕಲ್ಯಾಣ ಕರ್ನಾಟಕದ ಭಾಗಗಳಲ್ಲಿಯೇ ಕಾರ್ಖಾನೆಗಳನ್ನು ಆರಂಭಿಸಬೇಕು. ಅವುಗಳನ್ನು ಬಿಟ್ಟು ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ನಡೆಸಿ ಸಚಿವ ಸಂಪುದಲ್ಲಿ ಕೆಲವು ಫೈಲ್‌ಗಳಿಗೆ ಸಹಿ ಮಾಡಿ ಬಾಯ್ ಬಾಯ್ ಕಲಬುರಗಿ ಅನ್ನುವುದನ್ನು ಬಿಟ್ಟು ಸಿಎಂ ಸೇರಿದಂತೆ ಎಲ್ಲ ಸಚಿವರು ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ಇಲ್ಲಿಯೂ ಐಟಿ ಕಂಪನಿಗಳನ್ನು ಸ್ಥಾಪನೆ ಮಾಡಬೇಕು. ಈ ಕುರಿತು ಸಂಪುಟ ಸಭೆಯ ಎಲ್ಲ ಸದಸ್ಯರೂ ತೀರ್ಮಾನ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಎಂಟು ಲಕ್ಷ ವ್ಯಯಿಸಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ ಪ್ರಾಥಮಿಕ ಶಾಲಾ ಶಿಕ್ಷಕ
“ಕಲ್ಯಾಣ ಕರ್ನಾಟಕ ಭಾಗದ ಜನರು ತುತ್ತು ಅನ್ನಕ್ಕಾಗಿ ತಮ್ಮ ಹೆಂಡರು ಮಕ್ಕಳನ್ನು ಕರೆದುಕೊಂಡು ಬೆಂಗಳೂರು, ತೆಲಂಗಾಣದ ಹೈದ್ರಾಬಾದ್, ಮಹಾರಾಷ್ಟ್ರದ ಪುಣೆ, ಮುಂಬಯಿ ಸೇರಿದಂತೆ ಇನ್ನೂ ಹಲವು ನಗರಗಳಿಗೆ ಗುಳೆ ಹೋಗಿ ಅಲ್ಲಿ ಗಾರೆಕೆಲಸ, ಸೆಕ್ಯೂರಿಟಿ ಕೆಲಸ, ಸ್ವಚ್ಛತೆ ಕೆಲಸಗಳನ್ನು ಮಾಡುತ್ತಾರೆ. ಆದರೆ ಅಲ್ಲಿಯೂ ಕೂಡ ಅವರಿಗೆ ಉತ್ತಮ ಸಂಬಳ ದೊರೆಯುವುದಿಲ್ಲ. ನಗರ ಜೀವನದಲ್ಲಿ ಹೆಚ್ಚಿನ ಖರ್ಚುಗಳಿರುವುದರಿಂದ ದುಡಿದ ಹಣ ಸಾಕಾಗುವುದಿಲ್ಲ. ಹಾಗಾಗಿ ಸ್ಥಳೀಯವಾಗಿಯೇ ಕಂಪೆನಿಗಳನ್ನು ನಿರ್ಮಾಣ ಮಾಡಿ, ಕನಿಷ್ಠ ಕೂಲಿ, ಉದ್ಯೋಗ ಭದ್ರತೆ ನೀಡಬೇಕು. ಸ್ಥಳೀಯ ನಿವಾಸಿಗಳು ಬೇರೆ ನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರವ ವಹಿಸಬೇಕು” ಎಂದು ಆಗ್ರಹಿಸಿದರು.