ಕೇಂದ್ರದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆಯೇ ಹೊರತು ಕರ್ನಾಟಕದ ಕಾಂಗ್ರೆಸ್ ಸರ್ಕಾರವಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಅಲ್ಪಸಂಖ್ಯಾತ ಸ್ಥಾನಮಾನದಿಂದಾಗಿ ಎನ್‌ಡಿಎ ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು. ಆದರೆ 136 ಮಂದಿ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆನ್ನಿಗಿದ್ದೇವೆ” ಎಂದು ಕಾಂಗ್ರೆಸ್ ಸರ್ಕಾರದ ಸ್ಥಿರತೆಯನ್ನು ಖಾತ್ರಿಪಡಿಸಿದ್ದಾರೆ.
ನೆಲಮಂಗಲದ ಗಣೇಶೋತ್ಸವ ಸಂದರ್ಭದ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಗಮನಿಸಿದರೆ ಚಿಲ್ಲರೆ ರಾಜಕೀಯ ಎನಿಸುತ್ತದೆ. ಪ್ರಧಾನಿ ಮೋದಿಯವರಿಗೆ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ತಿಳುವಳಿಕೆ ಕೊರತೆಯಿದೆ. ಹೀಗಾಗಿಯೇ ದೇಶದ ಪ್ರಧಾನಿಯೊಬ್ಬರು ಕೆಳಮಟ್ಟದಲ್ಲಿ ಮಾತನಾಡಿದ್ದನ್ನು ನೋಡಿದರೆ, ಅದು ಚಿಲ್ಲರೆ ರಾಜಕಾರಣ ಮಾಡಿದಂತಾಗುತ್ತದೆ” ತಿಮ್ಮಾಪುರ ಎಂದು ಸಚಿವ ಆರ್ ಬಿ ತಿಮ್ಮಾಪುರ ಅವರು ಕಟುವಾಗಿ ಟೀಕಿಸಿದ್ದಾರೆ.
“ಆರ್‌ಎಸ್‌ಎಸ್ ಮತ್ತು ಬಿಜೆಪಿಯ ವಿರುದ್ಧದ ಬಲವಾದ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಅದು ದಲಿತ ವಿರೋಧಿ ಮತ್ತು ದಲಿತರು, ಅಲ್ಪಸಂಖ್ಯಾತರು ಮತ್ತು ಇತರೆ ಸಮುದಾಯಗಳ ಬಗ್ಗೆ ಕಾಳಜಿಯಿಲ್ಲ” ಎಂದು ಆರೋಪಿಸಿ, ಮೋದಿ ಸರ್ಕಾರದ ಅಹಿಂದ ವರ್ಗಗಳ ವಿರೋಧಿ ಮನಸ್ಥಿತಿಯಂತಹ ವಿವಿಧ ಘಟನೆಗಳು ಮತ್ತು ನೀತಿಗಳಿಂದ ಉಲ್ಲೇಖಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ; ಕೃಷ್ಣಾನದಿಯಲ್ಲಿ ಶವ ಪತ್ತೆ
ಈ ಮೊದಲು ಕಾಂಗ್ರೆಸ್‌ನಲ್ಲಿದ್ದ ಶಾಸಕ ಮುನಿರತ್ನ ಬಿಜೆಪಿಗೆ ಹೋದನಂತರ ಅವರ ಮನಸ್ಥಿತಿ, ವಿಚಾರ ಬದಲಾವಣೆ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಕಲ್ಮೇಶ ಸಾರವಾಡ, ಸದುಗೌಡ, ಪಾಟೀಲ್ ಮುದಕಣ್ಣ ಅಂಬಿಗೇರ ಸೇರಿದಂತೆ ಪ್ರಮುಖರು ಇದ್ದರು.