ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಮಾಡಬೇಕೆಂದು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಲ್ಹಾದ್ ವಿಶ್ವಕರ್ಮ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಕುರಿತು ಮಾತನಾಡಿ, “ಪಟ್ಟಣದಲ್ಲಿ ವಿಶ್ವಕರ್ಮ ಜನರಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಬೇಕೆಂದು ಕಳೆದ ಎಂಟಿ ವರ್ಷಗಳಿಂದ ಶಾಸಕರು, ಅಧಿಕಾರಿಗಳಿಗೆ ಹೇಳಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಭರವಸೆ ನೀಡುತ್ತಾರೆಯೇ ಹೊರತು ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ” ಎಂದು ” ಎಂದು ಆರೋಪಿಸಿದರು.
“ದೇಶಕ್ಕೆ ರೈತ ಬೆನ್ನೆಲುಬು ಆಗಿದ್ದರೆ, ರೈತರಿಗೆ ವಿಶ್ವಕರ್ಮ ಸಮಾಜವೇ ಬೆನ್ನೆಲುಬು. ಶಿಲ್ಪಕಲೆ ಹೆಸರು ವಿಶ್ವಕರ್ಮ ನಿರ್ಮಿಸುವ ಶಿಲ್ಪಿಗಳು” ಎಂದು ಹೇಳಿದರು.
ದಿಗ್ಗಾಂವ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವಿಶ್ವರಾಜ ಇನಾಮದಾರ ಮಾತನಾಡಿ, “ಇಡೀ ಜಗತ್ತಿನ ಸೃಷ್ಟಿಕೃತ ವಿಶ್ವಕರ್ಮ” ಎಂದು ಬಣ್ಣಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಶಿವಾನಂದ ಮಠದಲ್ಲಿ ದಲಿತ ಮಕ್ಕಳಿಗೆ ಪ್ರವೇಶ ನಿರಾಕರಣೆ: ಕ್ಷಮೆ ಕೇಳದಿದ್ದರೆ ಡಿಎಸ್‌ಎಸ್ ಹೋರಾಟದ ಎಚ್ಚರಿಕೆ
ತಹಶೀಲ್ದಾರ್ ನಾಗಯ್ಯ ಹೀರೆಮಠ, ಸಮಾಜದ ಗೌರವಾಧ್ಯಕ್ಷ ಕಾಶಿಪತಿ ಬಡಿಗೇರ, ಪ್ರಮುಖರಾದ ವೀರಣ್ಣ ಶಿಲ್ಪಿ, ಮೋನಯ್ಯ ಪಂಚಾಳ, ರವೀಂದ್ರ ವಿಶ್ವಕರ್ಮ, ಕಲ್ಯಾಣರಾವ ಭಕ್ತಿ, ಪ್ರಕಾಶ ವಿಶ್ವಕರ್ಮ, ಬಸವರಾಜ ವಿಶ್ವಕರ್ಮ, ಪ್ರಕಾಶ ಸುನಾರ, ಶಂಭುಲಿಂಗ ಕರದಳ್ಳಿ, ರಾಕೇಶ ವಿಶ್ವಕರ್ಮ, ರಾಮಚಂದ್ರ ಅಲ್ಲೂರ್, ಸಂಗಣ್ಣ ವಿಶ್ವಕರ್ಮ, ದೇವಾನಂದ ಪಂಚಾಳ ಸೇರಿದಂತೆ
ಇತರರು ಇದ್ದರು.
ವರದಿ : ಸಂತೋಷಕುಮಾರ ಕಟ್ಟಿಮನಿ